ನಮ್ಮ ಸ್ಥಳದ ಇತಿಹಾಸ ಮುಂದಿನ ಪೀಳಿಗೆಗೆ ತಲುಪಲಿ
ವಿಜಯಪುರ, ಫೆ೨೬: ಸಂಘ ಸಂಸ್ಥೆಗಳ ವತಿಯಿಂದ ನಮ್ಮ ಸಂಸ್ಕಾರ, ಸಂಸ್ಕೃತಿ, ಸ್ಥಳ ಮಹಾತ್ಮೆ, ಸಾಧನೆ ತೋರಿದ ಸ್ಥಳೀಯ ಸ್ಮರಣೀಯರ ಇತಿಹಾಸಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವಂತಹ ಕಾರ್ಯ ಸಂಘ-ಸಂಸ್ಥೆಗಳಿಂದ ಆಗಬೇಕಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಮಾಜಸೇವಕರಾದ ಉತ್ಸವ ಅಧ್ಯಕ್ಷರು ಆದ ಬಿಕೆ ನಾರಾಯಣಸ್ವಾಮಿ ರವರು ತಿಳಿಸಿದರು.
ಅವರು ಇಲ್ಲಿನ ಮಹಾತ್ಮ ಪ್ರೌಢಶಾಲೆಯಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದ ವತಿಯಿಂದ ಶನಿವಾರದಂದು ಏರ್ಪಡಿಸಲಾಗಿದ್ದ ೬೮ನೇ ಕನ್ನಡ ರಾಜ್ಯೋತ್ಸವ, ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಉತ್ಸವ ೨೦೨೩-೨೪ , ಮಾಹಿತಿ ತಂತ್ರಜ್ಞಾನದ ಹಾಗೂ ಗುತ್ತಿಗೆದಾರರ ಮತ್ತು ಸಮಾಜಸೇವಕರ ಉತ್ಸವ ಕಾರ್ಯಕ್ರಮದಲ್ಲಿ ಉತ್ಸವ ಅಧ್ಯಕ್ಷರಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಅಖಿಲ ಕರ್ನಾಟಕ ಮಿತ್ರ ಸಂಘದ ರಾಜ್ಯಾಧ್ಯಕ್ಷರಾದ ಚಿ.ಮಾ ಸುಧಾಕರ್ ರವರು ಪ್ರಾಸ್ತಾವಿಕ ಮಾತನಾಡಿ ೨೭ರಂದು ಕುಂದಾಣ ಉತ್ಸವ ಏರ್ಪಡಿಸಲಾಗಿದ್ದು ಎಲ್ಲರೂ ಕುಂದಾಣ ಸ್ಥಳದ ಇತಿಹಾಸ ಅರಿಯುವ ಸಲುವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಉತ್ಸವಾಧ್ಯಕ್ಷರುಗಳಾಗಿ ಶಿಡ್ಲಘಟ್ಟ ತಾಲೂಕಿನ ಕಾಂಗ್ರೆಸ್ ಮುಖಂಡರಾದ ರಾಜೀವ್ ಗೌಡರ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉತ್ಸವ ಅಧ್ಯಕ್ಷರಾಗಿ ಪಿಆರ್ ಚಂದನ್, ಕಾರ್ಮಿಕ ಗುತ್ತಿಗೆದಾರರ ಉತ್ಸವ ಅಧ್ಯಕ್ಷರಾಗಿ ಕ್ಯಾತೇಗೌಡರು ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ನಾಗಮಂಗಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎನ್ ಸಿ ಮುನಿವೆಂಕಟ್ರಮಣ,ಕರ್ನಾಟಕ ಮಿತ್ರ ಸಂಘದ ಪ್ರಧಾನ ಕಾರ್ಯದರ್ಶಿ ಮುನಿರಾಜು ಕನ್ನಡ ಧ್ವಜಾರೋಹಣ ನೆರವೇರಿಸಿದರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಡಾ. ಎಮ್ ಶಿವಕುಮಾರ್, ಭರತ್ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರಾದ ಎಂ. ಮುನಿ ಅಂಜನಪ್ಪ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಸ್ಮರಣಾರ್ಥ ಹಿರಿಯ ಸ್ಮರಣೀಯ ಸಾಧಕರ ಹೆಸರಿನಲ್ಲಿ ಹಿರಿಯ ರಂಗ ಕಲಾವಿದರಾದ ಎ.ಆರ್ ಶೇಷಗಿರಿ ರಾವ್, ರಾಜ್ಯ ಗಂಗಾಮತಸ್ಥರ ಸಂಘದ ನಿರ್ದೇಶಕರಾದ ಕಾಪೆಂಟರ್ ಎನ್ ಮುನಿರಾಜು, ನಾಗಮಂಗಲ ಎನ್ ಆರ್ ಶಿವಕುಮಾರ್, ಎಲೆ ಪಿ ಬಸವರಾಜು, ಕರಾಟೆ ಮುನೀಂದ್ರ, ಪೆಟ್ಟಿ ಅಂಗಡಿ ವ್ಯಾಪಾರಿಗಳಾದ ಎನ್ ವೀರಭದ್ರಪ್ಪ, ನಿವೃತ್ತ ಶಿಕ್ಷಕರಾದ ಧಾರ್ಮಿಕ ಚಿಂತಕರು ಆದ ಮುನಿರುದ್ರಪ್ಪ, ಕವಯಿತ್ರಿ ಭಾರತಿ ವಿಶ್ವನಾಥ್, ಮಹಾತ್ಮ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಅಶ್ವತ್ ನಾರಾಯಣ್, ಭಾರತ್ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕರುಗಳಾದ ಗುಲ್ಜಾರ್ ಫಾತೀಮಾ, ಸುಕನ್ಯ, ತಿಗಳ ವೈಭವ ಪತ್ರಿಕೆ ಸಂಪಾದಕರಾದ ಜಿ ಆರ್ ಮುನಿವೀರಣ್ಣ, ಮಹಾತ್ಮ ಪ್ರೌಢಶಾಲೆ ಅಧ್ಯಕ್ಷರಾದ ದೊಡ್ಡ ತತ್ತಮಂಗಲ ಅಪ್ಪಾಯಣ್ಣ ರವರುಗಳಿಗೆ ವಿವಿಧ ಸಾಧಕರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.