ಸ್ಕೂಟರ್‍ಗೆ ಗೂಡ್ಸ್ ಆಟೋ ಡಿಕ್ಕಿ, ಸ್ಥಳದಲ್ಲೇ ಓರ್ವ ಸಾವು
ಸಂಜೆವಾಣಿ ವಾರ್ತೆ
ಚಾಮರಾಜನಗರ.ಫೆ.26:- ಸ್ಕೂಟರ್‍ಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದು ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರನಿಗೆ ತೀವ್ರ ಗಾಯವಾಗಿರುವ ಘಟನೆ ತಾಲ್ಲೂಕಿನ ಮಂಗಲ ಗ್ರಾಮದ ಬಳಿ ನಡೆದಿದೆ.
ಬೈಕ್ ಸವಾರರಿಬ್ಬರೂ ಕೊಳ್ಳೇಗಾಲ ತಾಲ್ಲೂಕಿನ ಸಿಲ್ಕಲ್‍ಪುರ ಗ್ರಾಮದಿಂದ ಚಾಮರಾಜನಗರಕ್ಕೆ ಸ್ಕೂಟರ್‍ನಲ್ಲಿ ಹೋಗುವಾಗ ಮಂಗಲ ಗ್ರಾಮದ ಬಳಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಗೂಡ್ಸ್ ಆಟೋವೊಂದು ಸ್ಕೂಟರ್ ಗೆಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಿಲ್ಕಲ್‍ಪುರ ಗ್ರಾಮದ ರಾಜಣ್ಣ ಎಂಬುವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಗೆ ತೀವ್ರವಾದ ಗಾಯಗಳಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ಚಾಮರಾಜನಗರ ಸಂಚಾರಿ ಪೆÇಲೀಸರ ಭೇಟಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.