ಯಾರೂ ಕದಿಯಲಾರದ ಏಕೈಕ ಆಸ್ತಿ ಅದು ವಿದ್ಯೆಯಾಗಿದೆ
ಸಂಜೆವಾಣಿ ವಾರ್ತೆ
ಸಾಲಿಗ್ರಾಮ: ಫೆ.26:- ಎರಡು ಕೈ ಸೇರಿದರೆ ಚಪ್ಪಾಳೆ. ಹಾಗೆಯೇ ಶಿಕ್ಷಕರು ಹಾಗೂ ಪೆÇೀಷರು ಕಲಿಕಾ ಹಂತದಲ್ಲಿ ಮೌಲ್ಯಯುತ ಶಿಕ್ಷಣಕ್ಕೆ ಭದ್ರ ಅಡಿಪಾಯ ಹಾಕಿದರೆ ಮಾತ್ರ ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಪಡೆಯುವುದರೊಂದಿಗೆ ಸುಭದ್ರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ಸಮೀಪದ ಕರ್ಪೂರವಳ್ಳಿ ಗ್ರಾಮದಲ್ಲಿನ ಜಗದ್ಗುರು ಶ್ರೀ ರೇಣುಕಾಚಾರ್ಯ ವಿದ್ಯಾಸಂಸ್ಥೆ ಕನ್ನಡ ಮಾದ್ಯಮ ಅನುದಾನಿತ ಮತ್ತು ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೀರಶೈವ ಲಿಂಗಾಯುತ ಮಠಮಾನ್ಯಗಳು ಎಲ್ಲ ಸಮುದಾಯಗಳ ಮಕ್ಕಳಿಗೆ ಶಿಕ್ಷಣ, ಅನ್ನ, ಆಸರೆ ಜತೆಗೆ ಸಂಸ್ಕಾರ ನೀಡುತ್ತಿವೆ. ಮಠ ಮಾನ್ಯಗಳಲ್ಲಿ ಶಿಕ್ಷಣ ಪಡೆದವರು ಸಂಸ್ಕಾರವಂತರಾಗಿ ಇಂದು ಅತ್ಯುನ್ನತ ಸ್ಥಾನದಲ್ಲಿದ್ದು ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಮಠಗಳು ಭದ್ರ ಬುನಾದಿ ಹಾಕಿಕೊಟ್ಟಿವೆ ಎಂದು ಹೇಳಿದರು.
ಯಾರೂ ಕದಿಯಲಾರದ ಮತ್ತು ಪಾಲು ಕೇಳದ ಏಕೈಕ ಆಸ್ತಿ ಅದು ವಿದ್ಯೆಯಾಗಿದೆ. ಹೀಗಾಗಿ ಪ್ರತಿಯೋಬ್ಬರೂ ತಮ್ಮ ಜೀವನದಲ್ಲಿ ಬೇರೆ ಆಸ್ತಿ ಗಳಿಸುವುದಕ್ಕಿಂತ ವಿದ್ಯೆಯ ಆಸ್ತಿ ಸಂಪಾದಿಸಲು ಮುಂದಾಗಬೇಕಿದ್ದು. ಯುವ ಪೀಳಿಗೆ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣ ಪಡೆದು ವಿದ್ಯೆ ಜತೆಗೆ ಶಿಸ್ತು, ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.
ತಂದೆ-ತಾಯಿ ಹಾಗೂ ಗುರು-ಹಿರಿಯರನ್ನು ಗೌರವಿಸಬೇಕು ಸಮಾಜದಲ್ಲಿ ಸತ್ಪ್ರಪಜೆಗಳಾಗುವ ಮೂಲಕ ದೇಶದ ಸಂಪನ್ಮೂಲಗಳಾಗಿ ಬದುಕ ಬೇಕಿದೆ ಆ ನಿಟ್ಟಿನಲ್ಲಿ ಶಿಕ್ಷಕರ ಪಾತ್ರದ ಜತೆಗೆ ಮನೆಯಲ್ಲಿನ ಪೆÇೀಷಕರ ಜವಾಬ್ದಾರಿ ಕೂಡ ಹೆಚ್ಚಿದೆ ಎಂದು ಕಿವಿ ಮಾತು ಹೇಳಿದರು.
ನಂತರ ಅಧ್ಯಕ್ಷರು, ಜಂಗಮಮಠ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶರಣು ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್‍ಕುಮಾರ್, ಮಾ.ತಾ.ಪಂ ಅಧ್ಯಕ್ಷ ಹಾಡ್ಯ ಮಹದೇವ ಸ್ವಾಮಿ, ಸಾಲಿಗ್ರಾಮ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್, ಪ್ರಭಾಕರ್, ಗಾಯನಹಳ್ಳಿ ಕುಮಾರ ಸ್ವಾಮಿ, ಸಿಡಿಸಿ ಸದಸ್ಯರಾದ ಸಂತೋಷ್ ಮನುಗನಹಳ್ಳಿ ದೇವರಾಜ್ ಪುರಿ ಗೋವಿಂದರಾಜು ಬೆಟ್ಟಹಳ್ಳಿ ಹರೀಶ್ ಸಣ್ಣಪ್ಪ, ಮಂಜು, ಕಾಂಗ್ರೆಸ್ ವಕ್ತಾರ ಜಾಬೀರ್, ಮಂಜಪ್ಪ, ಚುಂಚನಕಟ್ಟೆ ರಮೇಶ್, ತಂದ್ರೆ ಗಿರೀಶ್, ರಾಣಿ ಕುಮಾರ್, ಮೋಹನ್ ಕುಮಾರ್, ಜವರಯ್ಯ, ಅಪ್ತ ಸಹಾಯಕ ನವೀನ್, ಪುನೀತ್ ಸೇರಿದಂತೆ ಮಕ್ಕಳು ಪೆÇೀಷಕರು ಇದ್ದರು.