ಶಿಕ್ಷಣ ಎಲ್ಲರ ಹಕ್ಕು ಎಂದು ಸಾರಿದರವರು ಡಾ.ಬಿ.ಆರ್.ಅಂಬೇಡ್ಕರ್
ಸಂಜೆವಾಣಿ ವಾರ್ತೆ
ಚಾಮರಾಜನಗರ: ಫೆ.26 :- ಶಿಕ್ಷಣ ಎಲ್ಲರ ಹಕ್ಕು ಎಂದು ಸಾರಿದರವರು ಡಾ. ಬಿ.ಆರ್,ಅಂಬೇಡ್ಕರ್, ಜನವರಿ 29 ರಿಂದ ನಡೆಯುತ್ತಿರುವ ಬಾಬಾ ಸಾಹೇಬ್ ರವರನ್ನು ನೆನೆಯುವ ಸಂವಿಧಾನ ಜಾಗೃತಿ ಜಾಥ ಚಾಮರಾಜನಗರ ಜಿಲ್ಲೆಯಲ್ಲಿ ಅದ್ದುರಿಯಾಗಿ ನಡೆಯುತ್ತಿದೆ. ಸಂವಿಧಾನ ವಿಚಾರಗಳನ್ನು ಸಾರ್ವಜನಿಕರಿಗೆ ಮನ ಮುಟ್ಟುವ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಮೈಸೂರಿನ ಉರಿಲಿಂಗ ಪೇದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ. ಚಾಮರಾಜನಗರ ಜಿಲ್ಲಾ ಘಟಕ ವತಿಯಿಂದ ಶನಿವಾರ ನಡೆಸಿದ ಬಾಬಾ ಸಾಹೇಭ್ ಡಾ. ಬಿ.ಅರ್.ಅಂಬೇಡ್ಕರ್ ರವರ 133 ನೇ ಜನ್ಮದಿನಾಚರಣೆ. ಕಾರ್ಯಕ್ರಮದಲ್ಲಿ ಬೋಧಿವೃಕ್ಷಕ್ಕೆ ನೀರಾಕೂವ ಮೂಲಕ ಉದ್ಘಾಟಿಸಿದರು. ಅಧಿಕಾರ ಬಂದಮೇಲೆ ಅಧಿಕಾರ ಕೊಟ್ಟವರನ್ನು ಮರೆತು ಬಿಡುವ ಕಾಲವಾಗಿದೆ. ಬಾಬಾ ಸಾಹೇಬರು ತಮ್ಮ ಕುಟುಂಬವನ್ನೇ ಬಲಿಕೊಟ್ಟು ಸಂವಿಧಾನದ ಅಡಿಯಲ್ಲಿ ನಿಮಗೆ ನ್ಯಾಯವನ್ನು ಕೊಟ್ಟಿದ್ದಾರೆ ಅವರನ್ನು ಜಯಂತಿ, ಹಾಗೂ ಪ್ಲಾಕ್ಸ್ಗಳ ಪೆÇೀಟೊಗಳಲ್ಲಿ ಮಾತ್ರ ಬಿಂಬಿಸುತ್ತಿದ್ದಿರ. ಅವರ ತತ್ವಗಳನ್ನು ಪಾಲಿಸಿ ವಿದ್ಯಾವಂತರಾಗಿ ಮಾಡಿ ಮಕ್ಕಳನ್ನು ಉತ್ತಮ ಅಧಿಕಾರಿಗಳಾಗಿ ಮಾಡಿದರೆ ಅವರ ನೀಡಿರುವ ಕೊಡುಗೆಗಳಿಗೆ ಬೆಲೆ ಬಂದಂತೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಒಂದೆ ನ್ಯಾಯ ಎಂದು ಸಾರಿದರವರು ಅವರ ಜೀವನದಲ್ಲಿ ಕಷ್ಟಗಳು ಬಂದರು. ನಮಗೆ ಸಂತೋಷದ ಜೀವನ ನೀಡಿದ ಮಹಾ ಚೇತನ, ಶಿಕ್ಷಣದಿಂದ ಮಾತ್ರ ಎಲ್ಲವನ್ನು ಸಾಧಿಸ ಬಹುದು ಎಂದು ಹೇಳಿಕೊಟ್ಟವರು ಅವರು ಅವರನ್ನು ಪ್ರತಿಯೊಬ್ಬರು ನೆನೆಯಲೇ ಬೇಕು ಎಂದು ತಿಳಿಸಿದರು.
ಟಿ.ನರಸಿಪುರ ತಾಲ್ಲೂಕು ಕೂಡ್ಲೂರು ಬೌದ್ಧ ಮಹಾ ಸಂಸ್ಥಾನದ ಪೂಜ್ಯ ಬೋಧಿರತ್ನ ಬಂತೇಜಿ ಅವರು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಪಾರ್ಚನೆ ಮಾಡಿ ಮಾತನಾಡುತ್ತಾ ಅಂಬೇಡ್ಕರ್ ರವರ ಮನೆಯೇ ಗ್ರಂಥಾಲಯವಾಗಿತ್ತು. ಪ್ರತಿ ದಿನ ಹೆಚ್ಚು ಈದಿನ ಕಡೆಗೆ ಗಮನ ನೀಡುತ್ತಿದ್ದರು. ಅವರಿಗೆ ರಾಜಕೀಯದಲ್ಲಿ ಬೇಸರವಾಗಿ ಬೌದ್ಧ ಧರ್ಮಕ್ಕೆ ಸೇರಿ ಜ್ಞಾನದ ಕಡೆಗೆ ಮನಸ್ಸು ಮಾಡಿದರು. ಅವರು ಬಡಜನರಿಗೆ ನೀಡಿರುವ ಕೊಡುಗೆ ಬಹಳಷ್ಟಿದೆ ಹೊರ ದೇಶಗಳಲ್ಲಿಯು ಡಾ. ಅಂಬೇಡ್ಕರ್ ಅವರನ್ನು ಪೂಜಿಸುತ್ತಾರೆ ಎಂದು ಹೇಳಿದರು.
ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರು ಸಿ.ಪುಟ್ಟರಂಗಶೆಟ್ಟಿ ರವರು ಮಾತನಾಡಿ ಚುನಾವಣೆಯಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ವ್ಯಕ್ತಿಗಳು ಮತದಾನದ ಹಕ್ಕು ತಂದುಕೊಟ್ಟವರು. ಎಲ್ಲರಿಗೂ ಒಂದೆ ಕಾನೂನು ಎಂದು ಸಂವಿಧಾನದಲ್ಲಿ ತಿಳಿಸಿದ್ದಾರೆ. ಜಾತಿ ಪದ್ದತಿಯನ್ನು ಹೋಗಲಾಡಿಸಲು ಹೋರಾಟಗಳನ್ನು ನಡೆಸಿದರು. ಅದರು ಇನ್ನು ಕೆಲವು ಕಡೆ ಜಾತಿ ಪದ್ದತಿ ತಾಂಡವಾಡುತ್ತಿದೆ. ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಮನ್ವಯ ಸಮಿತಿ ಚಾಮರಾಜನಗರ ಘಟಕದ ಜಿಲ್ಲಾಧ್ಯಕ್ಷರಾದ ಎ.ಶಿವಣ್ಣ ರವರು ಮಾತನಾಡಿ ಪ್ರತಿವರ್ಷವು ಸರ್ಕಾರಿ ಸೇವೆಯಲ್ಲಿ ಉತ್ತಮ ವೃತ್ತಿ ನೀಡುತ್ತಿರುವವರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಮ್ಮ ಸಂವಿಧಾನವು 75 ವರ್ಷದ ಆಚರಣೆ ಹಿನ್ನೇಲೆಯಲ್ಲಿ ಸರ್ಕಾರಿ ಅಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ವಿಷಯವಾಗಿ ಗ್ರಾಮಗಳಲ್ಲಿ ಬಾಬಾ ಸಾಹೇಬರ ವಿಚಾರ ಧಾರೆಯನ್ನು ತಿಳಿಸಿಕೊಡುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲದ ಶಿಶು ಅಭಿವೃದ್ದಿ ಯೋಜನ ಅಧಿಕಾರಿ ನಂಜಮಣಿ, ಸರ್ಕಾರಿ ಚಾಮರಾಜನಗರ ಎಸ್ಟಿ ನೌಕರರ ಸಮಿತಿ ಅಧ್ಯಕ್ಷ ಎಂ.ಶಿವಕುಮಾರ್, ಸರ್ಕಾರಿ ನೌಕರರ ಸಮನ್ವಯ ಸಮಿತಿ ಚಾಮರಾಜನಗರ ಘಟಕದ ಪ್ರದಾನ ಕಾರ್ಯದರ್ಶಿ. ಸಿ.ಎಂ.ಶಿವಕುಮಾರ್, ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ಪುಟ್ಟಸ್ವಾಮಿ, ಪ್ರಕಾಶ್, ಗೌರವಾಧ್ಯಕ್ಷ ದೇವರಾಜು, ಖಜಾಂಚಿ ರಾಜು, ಲೆಕ್ಕ ಪರಿಶೋದಕರಾದ ಮಲ್ಲಿಕಾರ್ಜುನ, ಉಪಾಧ್ಯಕ್ಷ ಶಿವಮೂರ್ತಿ, ಸಂಘಟನಾ ಕಾರ್ಯದಶಿ9 ರವಿ,ಶಿವಮಲ್ಲಯ್ಯ, ಸಂಘಟಕರು ಮಹದೇವಸ್ವಾಮಿ, ರೇವಣ್ಣ, ಕಾಳಸ್ವಾಮಿ, ಮಹೇಶ್.ಜಿ, ಮಹದೇವಯ್ಯ (ಆಪು ಮೇಸ್ಟು ನಟರಾಜು, ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.