ಚಾಮರಾಜೇಶ್ವರ ದೇವಸ್ಥಾನದಲ್ಲಿ ಹುಣ್ಣಿಮೆ ರಥೋತ್ಸವ
ಸಂಜೆವಾಣಿ ವಾರ್ತೆ
ಚಾಮರಾಜನಗರ.ಫೆ.26:- ನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ಹುಣ್ಣಿಮೆರಥೋತ್ಸವ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ಶುಭಕೃತ್ ನಾಮ ಸಂವತ್ಸರ ಮಾಘ ಶುದ್ಧಪೂರ್ಣಿಮೆಯಂದು ಶ್ರೀಚಾಮರಾಜೇಶ್ವರ ಸ್ವಾಮಿಗೆ ಪಂಚಾಮೃತ ಅಭಿμÉೀಕ ಹೂವಿನ ಅಲಂಕಾರವನ್ನು ಅರ್ಚಕರು ನೆರವೇರಿಸಿದರು. ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಿತು. ದೇವಸ್ಥಾನದ ಸುತ್ತಲೂ ಹುಣ್ಣಿಮೆ ರಥೋತ್ಸವದ ಮೆರವಣಿಗೆ ನಡೆಯಿತು.
ನಂತರ ದೇವಸ್ಥಾನದ ಮುಂಭಾಗದಲ್ಲಿ ಸುಮಾರು 3000ಕ್ಕೂ ಹೆಚ್ಚು ಭಕ್ತಾದಿಗಳಿಗೆ ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ದೇವಸ್ಥಾನದ ಆಗಮಿಕರಾದ ದರ್ಶನ್ ಹಾಗೂ ಅರ್ಚಕರಾದ ರಾಮಕೃಷ್ಣ ಭಾರದ್ವಾಜ್, ಅನಿಲ್‍ಕುಮಾರ್ ದೀಕ್ಷಿತ್ ಉತ್ಸವ ಸಮಿತಿ ಸದಸ್ಯರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.