ಶಿಕ್ಷಣ ದೇವಾಲಯವಾಗಬೇಕು, ಎಚ್ ಎಲ್ ನಾಗರಾಜು ಅಭಿಮತ
ಸಂಜೆವಾಣಿ ವಾರ್ತೆ
ಮಂಡ್ಯ. ಫೆ.26:- ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಓದುವ ಹವ್ಯಾಸದಿಂದ ಜ್ಞಾನಾರ್ಜನೆ ವೃದ್ಧಿಯಾಗುತ್ತದೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು,
ಮಂಡ್ಯ ತಾಲೂಕಿನ ಎಚ್ ಮಲ್ಲಿಗೆರೆ ಗ್ರಾಮದ ಚೆನ್ನಮ್ಮ ಎಜುಕೇಶನ್ ಟ್ರಸ್ಟ್ ಚೆನ್ನಮ್ಮ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು,
ಒಳ್ಳೆಯ ರೀತಿ ಆಲೋಚನೆ ಮಾಡುವುದರಿಂದ ಮನಸ್ಸು ಉಲ್ಲಾಸ ಗೊಳ್ಳುತ್ತದೆ ಇದರಿಂದ ನಾವು ಮಾಡುವ ಒಳ್ಳೆಯ ಕೆಲಸಗಳಿಗೆ ಸಹಕಾರಿಯಾಗಲಿದೆ ಮಕ್ಕಳಿಗೆ ಹಿರಿಯರು ಒಳ್ಳೆಯ ಕಥೆಗಳನ್ನು ಹೇಳುವ ಮೂಲಕ ಕೆಟ್ಟದಾರಿಗೆ ಹೋಗದಂತೆ ತಡೆಗಟ್ಟಬಹುದು ಎಂದರು,
ಅಪರ ಜಿಲ್ಲಾಧಿಕಾರಿ ಡಾ, ಎಚ್ ಎಲ್ ನಾಗರಾಜು ಮಾತನಾಡಿ ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಕೊರತೆ ಇಲ್ಲ ಸರ್ಕಾರ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ ಖಾಸಗಿ ಶಾಲೆಯವರು ಕೂಡ ದುಡ್ಡಿಗೆ ತಕ್ಕಂತೆ ಶಿಕ್ಷಣ ನೀಡುತ್ತಿದ್ದಾರೆ ಯುವಕರು ಸಮಾಜದಿಂದ ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷಣವನ್ನು ಪಡೆದು ಕೆಲ ಯುವಕರು ಸಮಾಜಕ್ಕೆ ಕಂಟಕಪ್ರಾಯರಾಗಿದ್ದಾರೆ,
ಶಾಲೆಗಳು ದೇವಾಲಯಗಳಾಗ ಬೇಕು ಆಗ ಮಾತ್ರ ಮಕ್ಕಳಲ್ಲಿ ಭಯ ಭಕ್ತಿ ಗೌರವ ನೈತಿಕತೆಯನ್ನು ಕಾಣಬಹುದಾಗಿದೆ ಶಾಲೆಗಳೇನಾದರೂ ವಾಣಿಜ್ಯ ಕೇಂದ್ರವಾದರೆ ವ್ಯಾಪಾರವಾಗಿ ಬಿಡುತ್ತದೆ ಇದು ಶಿಕ್ಷಣ ಕ್ಷೇತ್ರಕ್ಕೆ ಬಂಡವಾಳ ಶಾಹಿಗಳು ಬಂಡವಾಳ ಹಾಕಿ ಹಣ ಗಳಿಸುವ ದಾರಿಯಾಗಿದೆ ಇದು ಆಗಬಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು,
ಸಮಾರಂಭದಲ್ಲಿ ವಿದ್ಯಾರ್ಥಿಗಳು ಆಕರ್ಷಕ ಹುಡುಗೆ ತೊಟ್ಟು ಸಿನಿಮಾ ಹಾಡಿಗೆ ನೃತ್ಯ ಮಾಡುವ ಮುಖಾಂತರ ನೇರದಿದ್ದ ಜನರನ್ನು ಗಮನ ಸೆಳೆಯಿತು,
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿ ಮಾದಪ್ಪ ಕಲಾವಿದ ಬೋರೇಗೌಡ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಾದೇಗೌಡ ಉಪನ್ಯಾಸಕ ಅರುಣ್ ಆರಾಧ್ಯ ಹುಳ್ಳೇನಹಳ್ಳಿ ನಾಗರಾಜು ,ಎಂ ಪಿ ಚಂದ್ರಶೇಖರ್ ,ವಿವೇಕ್,ಹ ಮಹದೇವು ,ವೆಂಕಟೇಶ್, ನರಸಿಂಹ ,ಟ್ರಸ್ಟ್ ನ ಕಾರ್ಯದರ್ಶಿ ವೈಯಂ ರತ್ನ ಜಯಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.