ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ: ಸಹದೇವ.ಜಿ
ಭಾಲ್ಕಿ:ಫೆ.26: ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಹಬ್ಬದಂತೆ ಸಂಭ್ರಮಿಸಬೇಕು. ಅಂದಾಗ ಮಾತ್ರ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇಸಿಓ ಸಹದೇವ.ಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 40 ವರ್ಷದ ಮಾಣಿಕ್ಯ ಮಹೋತ್ಸವ ಹಾಗು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾರ್ಚ ಮತ್ತು ಎಪ್ರಿಲ್ ತಿಂಗಳುಗಳು ನಾವು ಓದಿದ ವಿಷಯಕ್ಕೆ ಓರೆ ಹಚ್ಚುವ ತಿಂಗಳಾಗಿವೆ. ಒಂದು ವರ್ಷಕಾಲ ಓದಿದ ಎಲ್ಲಾ ವಿಷಯಗಳನ್ನು ಮನದಲ್ಲಿಟ್ಟುಕೊಂಡು, ಮೂರುಗಂಟೆಗಳ ಕಾಲ ನಡೆಯುವ ಪರೀಕ್ಷೆಯಲ್ಲಿ ಬಿಡಿಸಬೇಕಿದೆ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೇ, ಪರೀಕ್ಷೆಯನ್ನು ಹಬ್ಬದರೀತಿಯಲ್ಲಿ ಸಂಭ್ರಮಿಸುತ್ತಾ ಪ್ರಶ್ನೆಗಳಿಗೆ ತಕ್ಕ ಉತ್ತರ ಬರೆಯಬೇಕು ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಮೂರು ಸಲ ಪರೀಕ್ಷೆಬರೆದು ಉತ್ತೀರ್ಣರಾಗಲು ಅವಕಾಶ ಕಲ್ಪಿಸಿಕೊಡಲಾಗಿದೆ. ಮೂರು ಸಲದ ಪರೀಕ್ಷೆಗಳಲ್ಲಿ, ಯಾವ, ಯಾವ ವಿಷಯಗಳಲ್ಲಿ, ಹೆಚ್ಚಿನ ಅಂಕಗಳಿವೆಯೋ, ಅವುಗಳನ್ನು ಪರಿಗಣಿಸಲಾಗುವುದು. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಉತ್ತಮವಾಗಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಬೇಕು ಎಂದು ಸಲಹೆ ನೀಡಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತಾತ್ರಿ ಕಾಟಕರ ಮಾತನಾಡಿ, ಸುಮಾರು 40 ವರ್ಷಗಳಿಂದ ಕಲವಾಡಿಯ ಮಹಾತ್ಮಾಗಾಂಧಿ ಪ್ರೌಢಶಾಲೆಯು ಪ್ರಗತಿಯತ್ತ ಸಾಗುತ್ತಿದೆ. ಪ್ರತಿವರ್ಷ ಉತ್ತಮ ಫಲಿತಾಂಶದೊಂದಿಗೆ ಮಕ್ಕಳು ಉತ್ತೀರ್ಣರಾಗುತ್ತಿರುವುದೇ ಇದಕ್ಕೆ ಸಾಕ್ಷಿ, ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಇದಕ್ಕೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಇಲ್ಲಿಯ ಶಿಕ್ಷಕರ ಶ್ರಮ ಕಾರಣವಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ಮೋಜಾಬಾಯಿ ಕಲವಾಡಿಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕಿ ಶೋಭಾ ಮಾಸಿಮಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶಿವಕುಮಾರ ವಾಡಿಕರ ಶಾಲಾ ವರದಿ ವಾಚನ ಮಾಡಿದರು. ಇದೇವೇಳೆ ಚಿತ್ರಕಲಾ ಶಿಕ್ಷಕ ಶಿವಶರಣಪ್ಪ ಸೊನಾಳೆ ಯವರಿಗೆ ಗೌರವ ಸನ್ಮಾನ ಮಾಡಲಾಯಿತು ಮತ್ತು ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ನಕಲು ರಹಿತ ಪರೀಕ್ಷೆ ಬರೆಯುವ ಬಗ್ಗೆ
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿದೇರ್ಶಕಿ ಕಿರಣ ಕಲವಾಡಿಕರ್, ಪುಷ್ಪಾ ಕಲವಾಡಿಕರ, ಸಿಆರ್‍ಪಿ ಸಂತೋಷ ಧಬಾಲೆ, ಮುಖ್ಯಶಿಕ್ಷಕ ಕಿರಣಕುಮಾರ ಭಾಟಸಿಂಗಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಿಲಿಂದಾ, ಬಸವರಾಜ ಕುಂಬಾರ, ವಿಜಯಕುಮಾರ ಬಾಜೋಳಗಾ, ಓಂ ಝೆಡ್ ಬಿರಾದಾರ, ಆನಂದ ಖಂಡಗೊಂಡ, ಶಿವಾನಂದ ಕೃಷ್ಣಪ್ಪ, ಪ್ರದೀಪ ಜೊಳದಪಕೆ ಉಪಸ್ಥಿತರಿದ್ದರು.
ಕಿರಣಕುಮಾರ ಸ್ವಾಗತಿಸಿದರು. ವಿಜಯಕುಮಾರ ಗುತ್ತೆದಾರ ನಿರೂಪಿಸಿದರು. ಕೆ.ಆನಂದ ವಂದಿಸಿದರು.