ಶಾಲಾ, ಕಾಲೇಜು ಮಕ್ಕಳಿಗೆ ನಾಯಕತ್ವ ಶಿಕ್ಷಣದ ಅರಿವು ಅಗತ್ಯ
ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.26:ಸಮಗ್ರತೆ, ನಿಯೋಗ, ಸಂವಹನ, ಸ್ವಯಂ ಅರಿವು, ಕೃತಜ್ಞತೆ, ಕಲಿಕೆಯ ಚುರುಕುತನ, ಪ್ರಭಾವ ಸಹಾನುಭೂತಿ, ಧೈರ್ಯ, ಗೌರವ, ಇವುಗಳು ಉತ್ತಮ ನಾಯಕತ್ವದ ಗುಣ ಲಕ್ಷಣಗಳು ಎಂದು ಶಾಲಾ ಪ್ರಭಾರಿ ಮುಖ್ಯ ಗುರುಮಾತೆ ಸ್ಮಿತಾ ಇಂಡಿಕರ ಹೇಳಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕನ್ನೂರ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇವರುಗಳ ಸಹಯೋಗದಲ್ಲಿ ಕನ್ನೂರ ಗ್ರಾಮದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿಕೊಳ್ಳಲಾದ ವಿಜಯಪುರ ಜಿಲ್ಲಾ ಮಟ್ಟದ ಮಕ್ಕಳ ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಾಯಕತ್ವ ಎಂದರೆ ನಿಂತು ಆದೇಶಿಸುವದಲ್ಲ, ಅನಿವಾರ್ಯ ಬಂದರೆ ಯಾರಿಲ್ಲದಿದ್ಧರೂ ಆ ಎಲ್ಲಾ ಕೆಲಸಗಳನ್ನು ಒಬ್ಬನೇ ನಿಭಾಯಿಸುವದೇ ನಿಜವಾದ ನಾಯಕತ್ವ, ನಾಯಕಣ ಗುಣ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಅಶೋಕ ಗುಡದಿನ್ನಿ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರ್ರಶಸ್ತಿ ಪತ್ರ ವಿತರಿಸಿ ಮಾತನಾಡಿ, ಭಾರತ ಸೇವಾದಳ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿದ್ದು ಇಲ್ಲಿನ ಸೇವಾದಳ ಚಟುವಟಿಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ವಿಠ್ಠಲ ಭಜಂತ್ರಿ ಅವರು ಮಾತನಾಡಿ, ಶಾಲಾ, ಕಾಲೇಜು ಮಕ್ಕಳಿಗೆ ನಾಯಕತ್ವ ಶಿಕ್ಷಣದ ಅವಶ್ಯಕತೆ ಇದೆ, ಮಕ್ಕಳಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಾಹಸ ಕ್ರೀಡೆಗಳು, ಸ್ಪರ್ಧಾ ಚಟುವಟಿಕೆಗಳನ್ನು ನಡೆಸುವದು ಅಗತ್ಯವಾಗಿದೆ ಎಂದರು.
ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಶಿಬಿರದ ನಾಲ್ಕು ದಿನಗಳ ವರದಿ ವಾಚನವನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ಮಕ್ಕಳಿಗೆ ಅತ್ಯುತ್ತಮ ತರಬೇತಿ ನೀಡಿದ ಸೇವಾದಳದ ಎಲ್ಲಾ ಸಂಪನ್ಮೂಲ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಾಳು ಅಥಣಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಿವಾನಂದ, ಸೇವಾದಳ ಜಿಲ್ಲಾ ಸಮಿತಿ ಸದಸ್ಯೆ ಎಮ್.ಎಮ್. ತೆಲಗಿ ಮತ್ರಿತರರು ಇದ್ದರು.
ಆರ್,ವಿ, ಚವ್ಹಾಣ ಸ್ವಾಗತಿಸಿದರು. ಸಂಪನ್ಮೂಲ ಶಿಕ್ಷಕ ಆರ್,ಎಸ್ ಗೋಡಿಕಾರ ನಿರೂಪಿಸಿದರು, ವಿ,ಎಲ್ ಖವೇಕರ ವಂದಿಸಿದರು.