ಸತ್ಸಂಗಕ್ಕೆ ಹೆಸರುವಾಸಿಯಾದ ಹೊಳೆಸಮುದ್ರ ಗ್ರಾಮ
ಕಮಲನಗರ:ಸೆ.೧೬: ತಾಲೂಕಿನ ಹೊಳೆಸಮುದ್ರ ಗ್ರಾಮವು ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊAಡಿದೆ. ಈ ಗ್ರಾಮದಲ್ಲಿ ಪ್ರತಿ ತಿಂಗಳಿಗೊಮ್ಮೆಯಾದರೂ ಕೀರ್ತನೆ ಪ್ರವಚನೆಗಳು ನಡೆಯುತ್ತವೆ. ಅಂತೆಯೇ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಹದೇವ ಮಂದಿರದಲ್ಲಿ ಗಣೇಶ್ ಉತ್ಸವ ನಿಮಿತ್ಯ ಶಿವಸೇನಾ ಗಣೇಶ ಮಂಡಳಿ ವತಿಯಿಂದ(೫೨) ಬಾಲಕೀರ್ತನಕಾರಾದ ಹ.ಭ.ಪ.ನಿತೀನ್ ಮಹಾರಾಜ್ ಭಾಮನಿಕರ ಇವರ ಕೀರ್ತನೆ ಹಮ್ಮಿಕೊಳ್ಳಲಾಯಿತು.ಭಕ್ತಿ ಭಾವದಿಂದ ಬದುಕು ಸಾಗಿಸುತ್ತಾ ಸತ್ಯ ಅಹಿಂಸೆ ಭಕ್ತಿ ಮಾರ್ಗ ಮೂಲಕ ಬದುಕು ಹಸನ ಮಾಡಿಕೊಳ್ಳಬೇಕು. ಎಂದು ನಿತೀನ್ ಮಹಾರಾಜ್ ಹೇಳಿದರು .
ಭಾದ್ರಪದ ಶುದ್ಧ ಚೌತಿಯ ದಿನ ಎಲ್ಲೆಲ್ಲೂ ಗಣೇಶ ಪೂಜೆ ನಡೆಯುತ್ತದೆ ಅದು ಕೆಲವೆಡೆ .ಐದು ದಿನಗಳಾದರೆ ಶಿವಸೇನಾ ಗಣೇಶ ಮಂಡಳಿಯರು ಹನ್ನೊಂದು ದಿನ ಕೂಡಿಸಿರುತ್ತಾರೆ. ದಿನಾಲು ಮುಂಜಾನೆ ಎಂಟು ಗಂಟೆಗೆ ಹಾಗೂ ರಾತ್ರಿ ಎಂಟು ಗಂಟೆಗೆ ಗೌರಿ ಪುತ್ರ ಗಣೇಶನಿಗೆ ಪ್ರತಿಷ್ಠಾಪನೆ ದಿನದಿಂದ ವಿಶೇಷ ಪೂಜೆಯೊಂದಿಗೆ ಅನ್ನದಾಸೋ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಭಕ್ತಿ ಸೇವೆ ಸಲ್ಲಿಸುವರು ಅನ್ನ ಸಾಂಬಾರು ಜಿಲೇಬಿ ಮಿರ್ಚಿ ಬಜಾ ಲಡ್ಡು ಉಪ್ಪಿಟ್ಟು ಸುಸ್ಲಾ ಅಳ್ಳು ಚುವ್ಡಾ ಅನೇಕ ಪದಾರ್ಥಗಳೊಂದಿಗೆ ಅವರವರ ಭಕ್ತಿಗೆ ಅನುಗುಣವಾಗಿ ಅನ್ನ ಸೇವೆ ಹಮ್ಮಿಕೊಂಡಿರುತ್ತಾರೆ
ಮಂಡಳಿಯ ಪ್ರಮುಖರಾದ ಸಂತೋಷ್ ಎರೋಳೆ ಸೋಪಾನ್ ಸಿಂಧೆ ಸಂಗಮೇಶ್ವರ ಮುರ್ಕೆ ರಾಹುಲ್ ಪಾಟೀಲ್ ಈಶ್ವರ ಮುಂಗಳೆ ಪಾಂಡುರAಗ ಜಾದವ ತುಕಾರಾಮ್ ಮಹಾರಾಮ ಮತು ಈ ಸಂದರ್ಭದಲ್ಲಿ
ಪ್ರವೀಣ್ ಮಹಾರಾಜ್ ವೀರಭದ್ರಯ್ಯಸ್ವಾಮಿ ಶಿವರುದ್ರಯ್ಯ ಸ್ವಾಮಿ ವಿನೇಕರರಾದ ಮಾದರಾವ್ ಎನ್ಕೆ ತಂಬಲಾ ವಾಧಕರಾದ ವೇದಾಂತ್ ಪ್ರಶಾಂತ್ ಬಿರಾದಾರ್ ಸೂರ್ಯಕಾಂತ್ ಕಾಡೋದೆ ಮಾದುರಾವ ದನ್ನಾ ಮದನ್ ಶಿಂಧೆ ಅಪರಾವ ಕದಂ ಚಂದ್ರಕಾAತ್ ಪಾಂಚಾಳ ಶಂಕರ್ ಪೂಜಾರಿ ಅನೇಕರು ಉಪಸ್ಥಿತರಿದ್ದರು.