ಕಾಳಗಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಶಾಸಕ ಡಾ.ಅವಿನಾಶ ಜಾಧವ ಭಾಗಿ
ಕಾಳಗಿ:ಸೆ.೧೬: ಮಾತೆತ್ತಿದರೆ ಸಾಕು ದಲಿತರ, ಬಡವರ, ಅಲ್ಪಸಂಖ್ಯಾತರ ಹಾಗೂ ಸಂವಿಧಾನ ಪರ ಎಂದು ಬೊಬ್ಬೆ ಹೊಡೆದುಕೊಳ್ಳುವ ಕಾಂಗ್ರೇಸ್ ಪಕ್ಷ ಮೀಸಲಾತಿ ರದ್ದುಪಡಿಸುತ್ತೇವೆ ಎಂಬ ರಾಹುಲ್ ಗಾಂಧಿ ಅವರ ವಿದೇಶದಲ್ಲಿ ನೀಡಿರುವ ಹೇಳಿಕೆ ಕಾಂಗ್ರೇಸ್ ಮನಸ್ಥಿತಿ ಎಂತಹದು ಎಂದು ಸ್ಪಷ್ಠವಾಗಿ ತೋರ್ಪಡುತ್ತದೆ ಎಂದು ಶಾಸಕ ಡಾ.ಅವಿನಾಶ ಜಾಧವ ಕಾಂಗ್ರೇಸ್ ವಿರುದ್ಧ ಹರಿಹಾಯ್ದರು.
ಕಾಳಗಿ ಪಟ್ಟಣದಲ್ಲಿ ರವಿವಾರ ಭಾರತೀಯ ಜನತಾ ಪಕ್ಷದ ವತಿಯಿಂದ ನಡೆಸಿರುವ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ನರೇಂದ್ರ ಮೋದಿಜೀ ಅವರು, ಪ್ರಧಾನಿಯಾದರೆ ಮಿಸಲಾತಿ ರದ್ದುಪಡಿಸುತ್ತಾರೆಂದು ಆರೋಪಿಸುವ ಕಾಂಗ್ರೇಸ್ ಅಮೇರಿಕಾದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿರುವುದನ್ನು ನೋಡಿದರೆ ಕಾಂಗ್ರೇಸ್ ಸಂವಿಧಾನ ಮತ್ತು ಕಾನೂನಿನ ಮೇಲೆ ಎಷ್ಠರ ಮಟ್ಟಿಗೆ ಗೌರವ ಇಟ್ಟಿದ್ದಾರೆಂದು ಸಾರ್ವಜನಿಕರ ಮುಂದೆ ಸಾಬಿತುಪಡಿಸಿದಂತೆ ಕಾಣುತ್ತದೆ ಎಂದರು.
ಪ್ರತಿ ಬೂತನಲ್ಲಿ ಕನಿಷ್ಠ ಹತ್ತು ಜನರ ತಂಡ ರಚಿಸಿ ೩೦೦ ಸದಸ್ಯತ್ವ ಮಾಡಿಸಬೇಕು. ಕಳೆದ ಬಾರಿ ಅವರು ಬೇರೆ ಪಕ್ಷದಲ್ಲಿದ್ದು, ಈ ಬಾರಿ ಬಿಜೆಪಿ ಸದಸ್ಯರಾಗಲು ಇಚ್ಚಿಸಿದಲ್ಲಿ ಗೊಂದಲ ಸೃಷ್ಟಿ ಮಾಡದೆ ಅವರ ಸದಸ್ಯತ್ವವನ್ನು ಪಡೆಯಬೇಕು ಎಂದರು.
ಹಳೆಯಕಾರ್ಯಕರ್ತರಾಗಿದ್ದರೂ ಕಡ್ಡಾಯವಾಗಿ ಸದಸ್ಯತ್ವ ಅಭಿಯಾನದಲ್ಲಿ ಭಾಗಿಯಾಗಿ ಸದಸ್ಯತ್ವ ಪಡೆಯಬೇಕು ಎಂದರು. ಅಭಿಯಾನ ಕುರಿತು ಪಕ್ಷದ ಸಂಸ್ಥಾಪಕರ ಪರಿಶ್ರಮ ತ್ಯಾಗದ ಕುರಿತು ಹೇಳಿದರು. ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಜವಾಬ್ದಾರಿಯನ್ನು ತೆಗೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡುವಂತೆ ತಿಳಿಸಿದರು.
ಇದೇ ವೇಳೆ ಪಟ್ಟಣದ ಹುನುಮಾನ್ ಮಂದಿರ, ಕುರುಬರಗಲ್ಲಿ, ರಾಮನಗರ, ಮುತ್ಯಾನಕಟ್ಟಿ ರಸ್ತೆ ಮಾರ್ಗದಲ್ಲಿ ಕೆಲವು ಮನೆಗಳು ಸೇರಿ ರಸ್ತೆಯಲ್ಲಿ ಸಂಚರಿಸಿದ ಶಾಸಕರು, ಜನರ ಕುಶಲೋಪರಿ ವಿಚಾರಿಸಿದರು. ಸ್ವಂತಃ ತಾವೇ ಬಿಜೆಪಿ ಧೆಯೋದ್ದೇಶಗಳ ಬಗ್ಗೆ ವಿವರಿಸಿ ಸದಸ್ಯತ್ವ ನೋಂದಣಿ ಮಾಡಿಸಿದರು.
ಭಾರತೀಯ ಜನತಾ ಪಕ್ಷವು ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದೆ. ಎಲ್ಲೆಡೆ ಬಿಜೆಪಿ ಸೇರಲು ಜನರು ಉತ್ಸುಕರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಜನರ ಬಳಿ ಹೋಗಿ ಹೆಚ್ಚು ನೋಂದಣಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಚಿಂಚೋಳಿ ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೆಂಗಟಿ, ಪ್ರಶಾಂತ ಕದಂ, ಜಗದೀಶ ಮಾಲಿಪಾಟೀಲ ಶಿವರಾಯ ಕೊಯಿ, ಹಣಮಂತ ಒಡೆಯರಾಜ, ಗಣಪತರಾವ್ ಸಿಂಗಶೆಟ್ಟಿ, ಸಂತೋಷ ಜಾಧವ್, ರಮೇಶ ಕಿಟ್ಟದ, ಭೀಮರಾಯ ಮಲಘಾಣ, ಸೂರ್ಯಕಾಂತ ಹಲಚೇರಿ, ಬಾಬು ಹೀರಾಪೂರ, ಕಾಳಶೆಟ್ಟಿ ಪಡಶೆಟ್ಟಿ, ಶೇಖರ ಮಾನಶೆಟ್ಟಿ, ಕೃಷ್ಣ ಸಿಂಗಶೆಟ್ಟಿ, ಶ್ರೀನಿವಾಸ ಗುರಮಿಠಕಲ್, ರಾಜು ಸಲಗೂರ, ಉಮೇಶ ಸಿಎ, ಬಲರಾಮ ವಲ್ಲ್ಯಾಫುರೆ, ಸುನೀಲ ರಾಜಾಪೂರ, ಸುಂದರ ಸಾಗರ, ನರಸಿಂಗ್ ಜಾಧವ್, ಅಮೃತರಾವ ಪಾಟೀಲ, ಮಂಜುನಾಥ ಭೇರನ್, ಭೀಮರಾವ ರಾಠೋಡ, ಕೃಷ್ಣಾ ರಾಠೋಡ, ಗಣಪತಿ ಸಿಂಗಶೆಟ್ಟಿ, ನಾಗಣ್ಣ ಟೆಂಗಳಿ, ಗೋವಿಂದ ರಾಠೋಡ, ಈರಣ್ಣಗೌಡ(ಸದಾನಂದಗೌಡ) ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿದಂತಹ ಪ್ರತಿಯೊಬ್ಬರೂ ಸದಸ್ಯತ್ವ ಪಡೆಯಬಹುದು. ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ, ೮೮೦೦೦೦೨೦೨೪ ನಂಬರ್, ಗೆ ಮಿಸ್ಡ ಕಾಲ್ ನೀಡಿ, ಬಿಜೆಪಿ ಸದಸ್ಯರಾಗಬಹುದು.