ಮುದ್ಧೇಬಿಹಾಳ ಮಾನವ ಸರಪಳಿ, ವಿಫಲ ?ಅಧಿಕಾರಿಗಳ ನಿರ್ಲಕ್ಷ್ಯ, ಟಂಟAನಲ್ಲಿ ವಿಧ್ಯಾರ್ಥಿಗಳ ಸಾಗಾಟ
ಮುದ್ಧೇಬಿಹಾಳ :ಸೆ.೧೬: ತಾಲೂಕಿನ್ಯಾದ್ಯಂತ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಮಾನವ ಸರಪಳಿ ಬಹುತೇಕವಾಗಿ ಗ್ರಾಮೀಣ ಭಾಗದಲ್ಲಿ ನೀರಿಕ್ಷೇಗೆ ತಕ್ಕಂತೆ ಪಲ ನೀಡಲಿಲ್ಲಾ ಎಂದು ಗ್ರಾಮೀಣ ಪ್ರದೇಶದ ಜನರು ತಮ್ಮತಮ್ಮಲ್ಲಿ ಮಾತನಾಡುತ್ತಿದ್ದರು, ಬಸವಸಾಗರದಿಂದ ಹತ್ತಿರ ಮಾನವ ಸರಪಳಿ ಹಾಗೂ ನಾಡಗೀತೆಯೊಂದಿಗೆ ಪ್ರಾರಂಭವಾದರೆ, ನಾಲತವಾಡ ಪಟ್ಟಣ ಪಂಚಾಯತದಿAದ ಹಿಡಿದು ನಾಗರಬೇಟ್ಟ, ಮುರಾಳ,ಮುದ್ದೇಬಿಹಾಳ ಪಟ್ಟಣದಲ್ಲಿಡಿದುಕೊಂಡು ವಿಧ್ಯಾರ್ಥಿಗಳನ್ನು ಹೊರತು ಪಡಿಸಿ ಸ್ಥಳೀಯ ಜನಸಾಮಾನ್ಯರು ಯಾರು ಮಾನವ ಸರಪಳಿ ಕಡೆ ಬಾಗವಹಿಸುವ ಗೋಜಿಗೆ ಹೋಗಲಿಲ್ಲಾ ಇನ್ನೂ ಕೆಲವಡೆ ಮಿಶ್ರ ಪ್ರಕ್ರೀಯೆ ಕಂಡು ಬಂದಿತು. ಸ್ಥಳೀಯ ಆಡಳಿತದ ಜನಸಾಮಾನ್ಯರಿಗೆ ತಿಳುವಳಿಕೆ ನೀಡದೇ ಇರುವದರಿಂದ ಸರಿಯಾದ ಮಾಹಿತಿ ಸಿಗದಿದ್ದರಿಂದ ಪಟ್ಟಣದ ಹಾಗೂ ಗ್ರಾಮೀಣ ಜನರು ಬಾಗವಹಿಸಿಲ್ಲಾ ಎಂದು ಜನರೇ ಮಾತನಾಡುತ್ತಿದ್ದರು.
ಶಾಲಾ ವಿಧ್ಯಾರ್ಥಿಗಳಿಂದ ತುಂಬಿದ ಮಾನವ ಸರಪಳಿ:
ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯ ಅಂಗವಾಗಿ ನಡೆ ಮಾನವ ಸರಪಳಿ ರಾಜ್ಯಾದ್ಯಂತ ನಡೆದಿದೆ, ಆದರೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ನಾಗರಿಕರು ಇಲ್ಲದೆ ಇರುವದರಿಂದ ರಸ್ತೆ ಮದ್ಯ ಕೆಲವು ಕಡೆಗಳಲ್ಲಿ ವಿದ್ಯಾರ್ಥಿಗಳೇ ಕಂಡು ಬಂದರು , ಇನ್ನೂ ಕೆಲವು ಭಾಗಗಳಲ್ಲಿ ಮಾನವ ಸರಪಳಿ ಯಶಸ್ವಿಯಾಗದೇ ರಸ್ತೆಗಳು ಬೀಕೋ ಎನ್ನುತ್ತಿತ್ತು.
ಖಾಸಗಿ ಶಾಲಾ ಮಕ್ಕಳನ್ನಿಡಿದುಕೊಂಡು ಸರಕಾರಿ ಶಾಲೆ ವಿಧ್ಯಾರ್ಥಿಗಳು ಹಾಜರಾತಿನಲ್ಲಿ ಕಡಿಮೆ ಕಾರ್ಯಕ್ರಮಕ್ಕೆ ಆಗಮಿಸಿದ ಪರೀಣಾಮ ಕಾರ್ಯಕ್ರಮ ವಿಫಲವಾಗಿದೆ ಎಂದು ಕೆಲವು ಹಿರಿಯ ಅಧಿಕಾರಿಗಳೇ ಮಾತನಾಡಿದ ಸನ್ನಿವೇಶಗಳು ಕಂಡು ಬಂದವು.
ಟAಟAನಲ್ಲಿ ಮಕ್ಕಳ ಸಾಗಾಟ ಕ್ರಮಕ್ಕೆ ಆಗ್ರಹ:
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಶಾಲಾ ವಿಧ್ಯಾರ್ಥಿಗಳನ್ನು ವಿವಿಧಡೆ ಸಾಗಿಸಲು ಟಂಟA ಗೂಡ್ಸ್ ವಾಹನವನ್ನು ಬಳಸಲಾಯಿತು. ಸರಕಾರದ ನಿಯಮದಂತೆ ಗೂಡ್ಸ ವಾಹನದಲ್ಲಿ ಜನಸಾಮಾನ್ಯರನ್ನು ಹಾಕಿಕೊಂಡು ಸಂಚಾರ ಮಾಡಬಾರದು ಎಂದು ನಿಯಮ ಇದ್ದರು ಶಾಲಾ ಮಕ್ಕಳನ್ನು ಗೂಡ್ಸ ವಾಹನದಲ್ಲಿ ವಿಧ್ಯಾರ್ಥಿಗಳನ್ನು ಸಾಗಿಸಲು ಬಳಕೆ ಮಾಡಿಕೊಂಡಿದ್ದನ್ನು ನೋಡಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿ ಈ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕಳುಹಿಸುತ್ತಿದ್ದರಿ ?ಶಾಲಾ ಮಕ್ಕಳಿಗೆ ಏನಾದರೂ ಸಮಸ್ಯೆಯಾದರೇ ಯಾರು ಹೊಣೆ ಎಂದು ಮುರಾಳ ಗ್ರಾಮಸ್ಥರು ಕೇಳಿದಾಗ ವಿಧ್ಯಾರ್ಥಿಗಳನ್ನು ಟಂಟA ವಾಹನದಿಂದ ಇಳಿಸಿ ಬೇರೆ ವಾಹನದಿಂದ ವಿಧ್ಯಾರ್ಥಿಗಳನ್ನು ಕಳುಹಿಸಿದ ಘಟನೆ ನಡೆಯಿತು.
ತಾಲೂಕಾಡಳಿತದ ವೈಪಲ್ಯ, ಮಾನವ ಸರಪಳಿ ವಿಫಲ ?
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗಾವಗಿ ಮತಕ್ಷೇತ್ರದಲ್ಲಿ ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಯಾಗದೇ ವಿಫಲವಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ, ಈ ಕಾರ್ಯಕ್ರಮದ ಬಗ್ಗೆ ಜನಸಾಮಾನ್ಯರಿಗೆ ಸರಿಯಾದ ರೀತಿಯಲ್ಲಿ ತಿಳುವಳಿಕೆ ಇಲ್ಲದೇ ಇರುವದರಿಂದ ಈ ಕಾರ್ಯಕ್ರಮದಲ್ಲಿ ಜನರು ಬಾಗವಹಿಸಿಲ್ಲಾ, ತಿಳುವಳಿಕೆ ನೀಡಿದ್ದರೆ ? ಈ ಕಾರ್ಯಕ್ರಮ ಯಶಸ್ವೀಯಾಗಿ ನಡೆಯಬಹುದಿತ್ತು, ಅಧಿಕಾರಿಗಳ ನಿರ್ಲಕ್ಷ್ಯ ಕಾರ್ಯಕ್ರಮ ವಿಫಲವಾಗಿದೆ ಎಂದು ಜನರು ಮಾತನಾಡಿದರು.