ನಿಂದಕರಿಗೆ ವಂದನೆ ಹೇಳಿ:ಸಿದ್ದಲಿಂಗಶ್ರೀ
ತಾಳಿಕೋಟೆ:ಸೆ.೧೬: ಪ್ರೀತಿ ವಾತ್ಸಲ್ಯದಿಂದಲೇ ಉತ್ಸಾಹ ಬರುತ್ತದೆ ಅಂತಹ ಕಾರ್ಯ ಮಾಡುತ್ತಾ ಸಾಗಿದ ನಿಮ್ಮನ್ನು ಆಡಿಕೋಳ್ಳುತ್ತಾ ಮಾತಾಡಿಕೊಳ್ಳುತ್ತಾ ಸಾಗಿದಂತಹ ವ್ಯಕ್ತಿಗಳಿದ್ದರೆ ಅವರಿಗೆ ನೀವು ಪುನಃ ನಿಂದಿಸದೇ ಅವರಿಗೆ ವಂದನೆ ಹೇಳಿ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ರವಿವಾರರಂದು ಸ್ಥಳೀಯ ಶ್ರೀ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘ ನಿ.ದ ವತಿಯಿಂದ ಎ.ಪಿ.ಎಂ.ಸಿ.ಸಭಾಭವನದಲ್ಲಿ ಏರ್ಪಡಿಸಲಾದ ಸಂಘದ ೯ನೇ ವರ್ಷದ ಸರ್ವಸಾಧರಣ ಸಭೆಯಲ್ಲಿ ದಿವ್ಯಸಾನಿಧ್ಯ ವಹಿಸಿ ಸಭೆಯನ್ನು ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಶ್ರೀಗಳು ಮಲ್ಲಮ್ಮ ಹೆಸರಿನಿಂದ ಪ್ರಾರಂಭಗೊAಡ ಈ ಸಂಘ ಸುಮಾರು ೨೦ಕೋಟಿಗೂ ಮೇಲ್ಪಟ್ಟು ಬಂಡವಾಳದೊAದಿಗೆ ಮುನ್ನಡೆದಿದೆ ಈ ಕಾರ್ಯಕ್ಕೆ ಶೇರುದಾರ ಹಾಗೂ ಆಡಳಿತ ಮಂಡಳಿಯವರ ಗ್ರಾಹಕರ ಸಹಕಾರವೇ ಕಾರಣವಾಗದೆ ಎಂದರು. ಪ್ರೀತಿ ಪ್ರೇಮದೊಂದಿಗೆ ಮುನ್ನಡೆದ ಈ ಸಂಘ ನಮ್ಮೂರು ನಮ್ಮದು ಎಂಬ ಮನೋಭಾವನೆಯಿಂದ ಮುನ್ನಡೆದಿದೆ ಈ ಕಾರಣದಿಂದಲೇ ಅದು ಯಶಸ್ಸಿನತ್ತ ದಾಪುಗಾಲುಹಾಕಿದೆ ಎಂದರು.ನಿಜವಾಗಿ ಹೆಮರೆಡ್ಡಿ ಮಲ್ಲಮ್ಮಳ ಅನುಯಾಯಿ ಆಗಬೇಕಾದರೇ ವಿಭೂತಿ ಹಚ್ಚಿಕೋಳ್ಳುವುದನ್ನು ಮರೆಯದಿರಿ ಬಿದ್ದವರನ್ನು ಎತ್ತಿ ಹಿಡಿಯುವ ಕಾರ್ಯಕ್ಕೆ ಮುಂದಾಗುತ್ತಿರುವ ಕಾರ್ಯಕ್ಕೆ ನಿಲ್ಲಿಸದಿರಿ ಎಂದು ಅನೇಕ ಸಲಹೆ ಸೂಚನೆ ನೀಡಿದ ಶ್ರೀಗಳು ಖಾಸ್ಗತಮಠದಲ್ಲಿರುವ ಕಂಬಗಳಲ್ಲಿ ರೆಡ್ಡಿ ಸಮಾಜ ಒಂದು ಕಂಬ ಇದ್ದಂತೆ ಎಂದು ಸಮಾಜದ ಮಾತೆಯರ ಭಾವನೆಯು ನನ್ನನ್ನು ಸಾಕಿ ಸಲುಹಿದ ನನ್ನ ತಾಯಿಯಂತೆ ಕಾಣುತ್ತಿದೆ ಎಂದು ಕೆಲವು ಚಿಕ್ಕ ಕತೆಗಳನ್ನು ಹೇಳಿ ಅವರ ಭಾವನೆ ಹೇಗಿದೆ ಎಂಬುದರ ಕುರಿತು ಮನವರಿಕೆ ಮಾಡಿದರು.
ಇನ್ನೋರ್ವ ಮುಖ್ಯ ಅಥಿತಿಗಳಾಗಿ ಆಗಮಿಸಿದ ಸಾಸನೂರಿನ ಮಾಜಿ ಶಾಸಕರಾದ ಎಸ್.ಎಮ್.ದೇಸಾಯಿ ಅವರು ಮಾತನಾಡಿ ಇಂದಿನ ಕಾರ್ಯಕ್ರಮ ಅತೀವ್ರ ಮಹತ್ವದ್ದಾಗಿದೆ ೯ವರ್ಷಗಳಿಂದ ಈ ಸಂಘ ಮುನ್ನಡೆಯಲು ಶ್ರಮ ಪಟ್ಟಿರುವ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅವರ ವಿಶ್ವಾಸದ ಕಾರ್ಯದಿಂದ ಸಂಘ ಬೆಳೆಯಲು ಕಾರಣವಾಗಿದೆ ಈ ಸಂಘದ ಅಧ್ಯಕ್ಷರಾದ ಬಿ.ಎನ್.ಹಿಪ್ಪರಗಿ ಅವರು ಸಹ ಕಾರಣಿಭೂತರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದೆಂದರು ಮುಂದಿನ ದಿನಮಾನದಲ್ಲಿ ಈ ಬ್ಯಾಂಕು ಉನ್ನತ ಸ್ಥಾನಕ್ಕೇರುವುದಕ್ಕಾಗಿ ನಾವು ಕೂಡ ಸಹಕಾರ ನೀಡುತ್ತೇವೆ ಎಂದ ಅವರು ಈ ಸಂಘ ಎಲ್ಲ ಸಮಾಜ ಬಾಂಧವರಿಗೆ ಬೆನ್ನೆಲುಬಾಗಿ ನಿಂತಿದೆ ನಾನು ನಿಮಗಾಗಿ ನೀವು ಎಲ್ಲರಿಗಾಗಿ ಎನ್ನುವಂತಹ ಮಾತು ಈ ಸಂಘದ್ದಾಗಿದೆ ಎಂದರು.
ಇನ್ನೋರ್ವ ಅಥಿತಿ ಬಿ.ಡಿ.ಸಿ.ಸಿ ಬ್ಯಾಂಕ ನೀರ್ದೇಶಕರಾದ ಬಿ.ಎಸ್.ಪಾಟೀಲ ಯಾಳಗಿ ಅವರು ಮಾತನಾಡಿ ಯಾವುದೇ ಸಂಸ್ಥೆ ಬೆಳೆಯಬೇಕಾದರೇ ಅಲ್ಲಿಯ ಶಿಸ್ತು ಬಧ್ರತೆ ವಿಶ್ವಾಸದಾಯಕ ಮಾತು ಹಾಗೂ ಕೃತಿ ಎಂಬುದಿರಬೇಕು ಸಾಲಗಾರ ಸಾಲವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಇಂತಹದ್ದರಿAದ ಸಂಸ್ಥೆ ಬೆಳೆಯಲು ಕಾರಣವಾಗಿತ್ತದೆ ಎಂದರು. ೯ವರ್ಷಗಳ ಕಾಲ ಸಂಸ್ಥೆ ಮುನ್ನಡೆಯಲು ಆಡಳಿv ಮಂಡಳಿ ಸಿಬ್ಬಂದಿವರ್ಗ ಗ್ರಾಹಕರಲ್ಲದೆ ಶೇರುದಾರರು ಕಾರಣಿ ಭೂತರಾಗಿದ್ದಾರೆ ಈ ಕಾರಣದಿಂದಲೇ ಡಿ.ಸಿ.ಸಿ ಬ್ಯಾಂಕಿನಿAದ ಈ ಸಂಘಕ್ಕೆ ೪ಸಲ ಪ್ರಶಸ್ತಿ ಲಭಿಸಿದೆ ಎಂದು ಹೇಳೀದ ಪಾಟೀಲರು ಸಮಾಜ ಬಾಂಧವರ ವತಿಯಿಂದ ನಿರ್ಮಾಣಗೊಂಡ ಮಲ್ಲಮ್ಮ ತಾಯಿಯ ದೇವಾಯಲ ಕುರಿತು ವಿವರಿಸಿದರಲ್ಲದೆ ಸಮಾಜ ಬಾಂಧವರು ನೀಡುತ್ತಾ ಸಾಗಿ ಬಂದ ಸಹಕಾರ ಕುರಿತು ಗುಣಗಾನ ಮಾಡಿದ ಅವರು ನೂತನವಾಗಿ ನಿರ್ಮಾಣಗೋಳ್ಳುತ್ತಿರುವ ಕಲ್ಯಾಣ ಮಂಟಪಕ್ಕೆ ಸ್ಥಳವನ್ನು ನೀಡಿದ ಇಬ್ರಾಹಿಂಪೂರವರಿಗೆ ಅಭಿನಂದನೆ ಸಲ್ಲಿಸುತ್ತೆನೆಂದರು.
ಇನ್ನೋರ್ವ ಅಥಿತಿ ಕರ್ನಾಟಕ ನೀರಾವರಿ ನಿಗಮದ ನಿಯಮಿತ ಬೆಂಗಳುರಿನ ಪ್ರಧಾನ ವ್ಯವಸ್ಥಾಪಕರಾದ ಬಿ.ಎನ್.ಬಿರಾದಾರ (ಕೊಡಗಾನೂರ) ಅವರು ಮಾತನಾಡಿ ಸಹಕಾರಿ ಸಂಘಗಳು ಜನ್ಮತಾಳಿದ್ದು ಹಾಗೂ ರಾಜ್ಯ ಜಿಲ್ಲೆ ತಾಲೂಕುಗಳಲ್ಲದೇ ವಿವಿಧಡೆಯಲ್ಲಿ ತಮ್ಮ ಸೇವೆಯನ್ನು ಅರ್ಪಿಸುತ್ತಿರುವ ಅಂಕಿ ಅಂಶಗಳನ್ನು ಹೋರಹಾಕಿದ ಅವರು ಸಹಕಾರಿ ಸಂಘವೆAದರೇ ಸ್ವಯಂ ಪ್ರೇರಣೆಯಿಂದ ತಮ್ಮ ಸದಸ್ಯರಿಗೆ ಹಣಕಾಸಿನ ವ್ಯವಸ್ಥೆಗಾಗಿ ಸಾಗಿಬಂದದಿದೆ ಎಂದು ಮಲ್ಲಮ್ಮ ಸಹಕಾರಿ ಪತ್ತಿನ ಶೇರದಾರರ ಹಾಗೂ ಗ್ರಾಹಕರು ಸಂಗದ ಮೆಲಿಟ್ಟ ಪ್ರೀತಿ ವಿಶ್ವಾಸ ಕುರಿತು ಗುಣಗಾನಮಾಡಿದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಬಿ.ಎನ್.ಹಿಪ್ಪರಗಿ ಅವರು ಸಂಘ ನಡೆದುಬಂದ ದಾರಿ ಹಾಗೂ ಚಿಕ್ಕ ಬಂಡವಾಳದಿAದ ಪ್ರಾರಂಭಗೊAಡ ಸಂಘದ ಇತಿಹಾಸ ವಿವರಿಸಿದ ಅವರು ೯ವರ್ಷದಲ್ಲಿ ಗ್ರಾಹಕರ ಹಾಗೂ ಶೇರುದಾರರ ಮೇಲಿದ್ದ ಪ್ರೀತಿ ವಿಶ್ವಾಸ ಕುರಿತು ವಿವರಿಸಿದರಲ್ಲದೆ ಲಾಭಾಂಶ ವಿಂಗಡನೆ ಕುರಿತೂ ಸಹ ತಿಳಿ ಹೇಳಿದರು.
ಸಂಘದ ವ್ಯವಸ್ಥಾಪಕರಾದ ಸಿ.ಎನ್ ಮಾಲಿಪಾಟೀಲವರು ವರದಿ ವಾಚಿಸಿದರು.
ಇದೇ ಸಮಯದಲ್ಲಿ ಶೇರುದಾರರ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಅಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥೀಗಳಿಗೆ ಸನ್ಮಾನಿಸಿ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಹೆಮರೆಡ್ಡಿ ಮಲ್ಲಮ್ಮ ಅವರ ಕುರಿತು ಲೇಖಕ ಎಸ್.ವಿ ಪಾಟೀಲ ಅವರು ಬರೆದ ಕೃತಿಯನ್ನು ಡವಳಗಿ ಅವರು ಉಪಸ್ಥಿತರೆಲ್ಲರಿಗು ವಿತರಿಸಿದರು.
ಕಾರ್ಯಕ್ರಮಕ್ಕೂ ಮೊದಲೂ ನಿಧನ ಹೊಂದಿದ ಸದಸ್ಯರ ಕುರಿತು ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿಕೊರಲಾಯಿತು.
ವೇದಿಕೇಯ ಮೇಲೆ ಸಂಘದ ಉಪಾಧ್ಯಕ್ಷ ರವೀದ್ರನಾಥ ಪಾಟೀಲ, ನಿರ್ದೇಶಕರಾದ ಹಣಮಗೌಡ ಗೂಗಲ, ಪ್ರಭುಗೌಡ ಮದರಕಲ್ಲ, ಶರಣಗೌಡ ಇಬ್ರಾಹಿಂಪೂರ, ಚಿನ್ನಪ್ಪಗೌಡ ಮಾಳಿ, ಸುಭಾಸಚಂದ್ರ ಗುರೆಡ್ಡಿ, ಶಂಕರಗೌಡ ಮಾಡಗಿ, ಶ್ರೀಮತಿ ಶಾಂತಾ ಕಂತಲಗಾವಿ, ಶ್ರೀಮತಿ ಡಾ.ಗಂಗಾಬಿಕಾ ಪಾಟೀಲ, ರಮೇಶ ನಾಯಕ ಮೊದಲಾದವರು ಉಪಸ್ಥಿತರಿದ್ದರು.
ಸರ್ವಜ್ಞ ವದ್ಯಾಪೀಠದ ವಿದ್ಯಾರ್ಥೀನಿಯರು ಪ್ರಾರ್ಥಿಸಿದರು.ಎಚ್.ಎಸ್.ಪಾಟೀಲ ಅವರು ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀಮತಿ ಸುಮಂಗಲಾ ಕೋಳುರ ಪ್ರಾಸ್ಥಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.