ಪೂಜ್ಯ ಬಸವಲಿಂಗ ಪಟ್ಟದ್ದೇವರಿಗೆ ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ ಪ್ರದಾನ
ಕಲಬುರಗಿ:ಸೆ.15:ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಲ್ಕಿ ಹಿರೇಮಠದ ಪೂಜ್ಯ ಬಸವಲಿಂಗ ಪಟ್ಟದ್ದೇವರು ಮಾತನಾಡಿ. ಕರ್ನಾಟಕದಲ್ಲಿ ಮಠಗಳು ಬಸವತತ್ತ್ವ ಪ್ರಸಾರ ಮಾಡಿದಕ್ಕಿಂತಲೂ ಹೆಚ್ಚಾಗಿ ಡಾ. ಬಿ.ಡಿ. ಜತ್ತಿಯವರು ನಾಡಿಗೆ ಬಸವ ತತ್ತ್ವ ನಿಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿದ್ದ ಜತ್ತಿಯವರು ವಿಶ್ವಕ್ಕೆ ಬಸವ ತತ್ತ್ವ ಪ್ರಸಾರವಾಗುವಲ್ಲಿ ಕಾರಣಭೂತರಾಗಿದ್ದಾರೆ. ಭಾರತ ತುರ್ತು ಪರಸ್ಥಿತಿಯಲ್ಲಿದ್ದಾಗ ಬಿ.ಡಿ. ಜತ್ತಿಯವರು ಅದನ್ನು ತೆರವುಗೊಳಿಸಿದರು ಎಂದು ಹೇಳಿದರು.
ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆ ಅವರು ಮಾತನಾಡಿ ಬಸವ ಸಮಿತಿಯು ಆನ್ಲೈನ್ನಲ್ಲಿ ಶರಣ ಸಂದೇಶಗಳನ್ನು ಜಗತ್ತಿನಾಧ್ಯಂತ ಬಿತ್ತರಿಸುತ್ತಿದೆ. ಇದಕ್ಕೆಲ್ಲ ಪ್ರೇರಣೆ ಡಾ. ಬಿ.ಡಿ. ಜತ್ತಿಯವರೇ ಆಗಿದ್ದಾರೆ. ಬಸವ ಸಮಿತಿಯ ವಚನ ಅನುವಾದ ಯೋಜನೆಗೆ ಜತ್ತಿಯವರು ಪ್ರಾಥಮಿಕ ರೂಪರೇಷ ಹಾಕಿದ್ದರು ಎಂದು ನುಡಿದರು.
ರಾಷ್ಟ್ರಪ್ರಶಸ್ತಿ ವಿಜೇತ ಕೊಳಲುವಾದಕ ಬಾಪು ಪದ್ಮನಾಭ ಅವರು ಆಶಯ ನುಡಿಗಳನ್ನಾಡಿ ಮಾಜಿ ರಾಷ್ಟ್ರಪತಿ ಡಾ. ಬಿ.ಡಿ. ಜತ್ತಿ ಅವರು ವಚನ ಸಾಹಿತ್ಯ ಎಂಬ ಸಂಪತ್ತನ್ನು ಜಗತ್ತಿಗೆ ದೊರಕಿಸಿಕೊಡಲು ಬಸವ ಸಮಿತಿ ಸಂಸ್ಥೆಯನ್ನು ಹುಟ್ಟುಹಾಕಿದರು ಎಂದು ಹೇಳಿದರು.
ಬೆಂಗಳೂರು ಬಸವ ಸಮಿತಿಯು ಅಧ್ಯಕ್ಷರಾದ ಡಾ. ಅರವಿಂದ ಜತ್ತಿಯವರು ಅಧ್ಯಕ್ಷಿಯ ನುಡಿಗಳನ್ನಾಡುತ್ತ ಡಾ. ಬಿ.ಡಿ. ಜತ್ತಿಯವರು ಹಣೆಯ ಮೇಲೆ ಯಾವಾಗಲೂ ವಿಭೂತಿ ಧರಿಸುತ್ತಿದ್ದರು. ರಾಷ್ಟ್ರಪತಿ ಹುದ್ದೆ ಬಿಟ್ಟರು ಬಿಡುವೆ ಆದರೆ ಯಾವುದೇ ಕರಣಕ್ಕೂ ವಿಭೂತಿ ಹಚ್ಚವುದನ್ನು ಬಿಡುವುದಿಲ್ಲ ಎಂದು ಹೇಳಿದರು. ಬಸವ ಸಮಿತಿ ಜಗತ್ತಿನ ಹಲವು ಭಾμÉಗಳಿಗೆ ವಚನಗಳನ್ನು ಅನುವಾದಗೊಳಿಸಿದ್ದು ವಚನ ಸಾಹಿತ್ಯ ಜಗತ್ತಿನಾಧ್ಯಂತ ಪಸರಿಸುವಂತಾಗಿದೆ. ಲಿಂಗಪೂಜೆಯ ಯೋಗದಿಂದ ಜಗತ್ತಿಗೆ ಜನರೆಲ್ಲ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ ಎಂದು ಹೇಳಿದರು.
ಡಾ. ಜಯಶ್ರಿ ದಂಡೆ ಅವರು ಪ್ರಶಸ್ತಿ ಪತ್ರ ಓದಿದರು. ಕಾರ್ಯಕ್ರಮದಲ್ಲಿ ಡಾ. ವಿಲಾಸವತಿ ಖೂಬಾ, ರಾಜೇಂದ್ರ ಖೂಬಾ, ಡಾ. ಆನಂದ ಸಿದ್ದಾಮಣಿ, ಕಲ್ಲಪ್ಪ ವಾಲಿ, ಉದ್ದಂಡಯ್ಯ ಬಂಡಪ್ಪ ಕೇಸೂರು, ಗುರುಶಾಂತಮ್ಮ, ದರೆಪ್ಪ, ಹಾಜರಿದ್ದರು.