ಉಚಿತ ಆರೋಗ್ಯ ಶಿಬಿರ ಯಶಸ್ವಿ
ಕಲಬುರಗಿ:ಫೆ.25:ಕೇಂದ್ರ ಸಚಿವರು ಹಾಗೂ ಸಂಸದರಾದ ಭಗವಂತ ಖೂಬಾರವರ ವಿಶೇಷ ಕಾಳಜಿಯಿಂದ ಚಿಂಚೋಳಿ ತಾಲೂಕಿನಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಉಚಿತ ಆರೋಗ್ಯ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿದ್ದು, 4000ಕ್ಕೂ ಹೆಚ್ಚಿನ ಜನರು ಇದರ ಲಾಭ ಪಡೆದುಕೊಂಡಿದ್ದಾರೆ.
ಸಚಿವರ ಕಡೆಯಿಂದ ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಪ್ರತಿ ಹಳ್ಳಿಗಳಿಂದ ರೋಗಿಗಳನ್ನು ವಾಹನದ ಮೂಲಕ ಕರೆದುಕೊಂಡು ಬಂದು ಪ್ರತಿಯೊಬ್ಬರಿಗೂ ನೊಂದಣಿ ಮಾಡಿಸಿ, ರಕ್ತ್ಷ, ಸಕ್ಕರೆ ಪರೀಕ್ಷೆ ಮಾಡಿಸಿ, ನಂತರ ಅವರಿಗಿರುವ ಕಾಯಿಲೆಗೆ ಅನುಗುಣವಾಗಿ ಕೊಣೆಗಳಲ್ಲಿ ಸಬಂಧಪಟ್ಟ ವೈದ್ಯರಿಂದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು.
ಒಟ್ಟು 4316 ಜನರು ಈ ಉಚಿತ ಆರೋಗ್ಯ ಶಿಬಿರದಲ್ಲಿ ನೊಂದಣಿ ಮಾಡಿಸಿಕೊಂಡಿದ್ದು, ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ರೋಗಿಗಳು ಬಂದಿದ್ದು ಕಂಡು ಬಂತು, ಒಟ್ಟು 1782 ಜನರಿಗೆ ಕಣ್ಣು ತಪಾಸಣೆ ಮಾಡಿ, ಅವರಿಗೆ ಕಣ್ಣಿನ ಡ್ರಾಪ್, ಗುಳಿಗೆ ಹಾಗೂ 1540 ಕನ್ನಡಕ ವಿತರಿಸಲಾಗಿದೆ. ನಂತರ ಕಿವಿಗಳಿಗೆ ಸಂಬಂಧಿಸಿದಂತೆ 1053 ಜನರು ರೋಗಿಗಳಿಗೆ ತಪಾಸಣೆ ಮಾಡಿ 258 ಜನರಿಗೆ ಶ್ರವಣ ಯಂತ್ರಗಳು ನೀಡಲಾಗಿದೆ, ಇದರ ಜೊತೆಗೆ ಹೃದಯ ಸಂಬಂಧಿ ಕಾಯಿಲೆ ಇರುವವರಲ್ಲಿ 364 ಜನರಿಗೆ ಇ.ಸಿ.ಜಿ. ಪರೀಕ್ಷೆ ಮಾಡಿ, ಮಾತ್ರೆಗಳು ನಿಡಲಾಗಿದೆ, 15 ಜನರಿಗೆ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ಉಳಿದಂತೆ ಇ.ಎನ್.ಟಿ. ಮೂಳೆ, ಚರ್ಮ, ಸ್ತ್ರೀರೋಗ, ಮಕ್ಕಳ ಕಾಯಿಲೆ ಮುಂತಾದ ರೊಗಿಗಳಿಗೆ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಲಾಗಿರುತ್ತದೆ. ಈ ಎರಡು ದಿನಗಳಲ್ಲಿಯೂ ಎಲ್ಲಾ ರೋಗಿಗಳಿಗೆ ಉತ್ತಮವಾಗಿ ಚಿಕಿತ್ಸೆ ನೀಡಿ, ಅಗತ್ಯ ಸಲಹೆಗಳನ್ನು ವೈದ್ಯರು ನೀಡಿದರು.
ಈ ಆರೋಗ್ಯ ಶಿಬಿರದಲ್ಲಿ 60% ಜನ ಹೆಣ್ಣು ಮಕ್ಕಳು ಪಾಲ್ಗೋಂಡಿದ್ದರು, ಪ್ರತಿ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತರ ಮೂಲಕ ರೋಗಿಗಳಿಗೆ ಕರೆದುಕೊಂಡು ಬರಲಾಗಿತ್ತು, ಆದ್ದರಿಂದ ಈ ಶಿಬಿರದಲ್ಲಿ ಸಂಪೂರ್ಣವಾಗಿ ಬಡವರಿಗಾಗಿ ಹಾಗೂ ಕೇವಲ ರೋಗಿಗಳಿಗಾಗಿ ಆಯೋಜಿಸಲಾದ ಶಿಬಿರವಾಗಿತ್ತು, ಎಲ್ಲಿಯೂ ಯಾವೂದೇ ಪಕ್ಷ, ರಾಜಕೀಯ ಮಾತುಗಳಿರಲಿಲ್ಲಾ, ಕೇವಲ ವೈದ್ಯರು, ರೋಗಿಗಳು, ಪರೀಕ್ಷೆ ಮಾಡಿಸು, ಚಷ್ಮಾ, ಕಿವಿ ಮಷಿನ್, ಗೊಲಿ ಇಂತಹ ಪದಗಳೆ ಜನರಿಂದ ಹಾಗೂ ಆಯೋಜಕರಿಂದ ಕೇಳಿ ಬರುತ್ತಿದ್ದವು.