ಶರಣರಾದ ಚನ್ನಬಸವಣ್ಣನವರ ಸ್ಮರಣೆ, ಕಿನ್ನರಿ ಬೊಮ್ಮಯ್ಯನವರ ಜಯಂತಿ
ಕಲಬುರಗಿ:ಫೆ.25: ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶರಣರಾದ ಅವಿರಳ ಜ್ಞಾನಿ ಚನ್ನಸವಣ್ಣನವರ ಸ್ಮರಣೋತ್ಸವ ಮತ್ತು ವಚನ ಸಂರಕ್ಷಕ ಕಿನ್ನರಿ ಬೊಮ್ಮಯ್ಯನವರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಮೌನೇಶ ವಿಶ್ವಕರ್ಮ, ಶ್ರೀಕಾಂತ, ಶ್ರೀಶೈಲ್, ಮೋನಪ್ಪ, ಶರಣಪ್ಪ, ದೊಡ್ಡಬೀಮಶ್ಯಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.