ಜನ್ಮದಾತರ ಋಣ ತೀರಿಸಲು ಸಾಧ್ಯವಿಲ್ಲ; ಡಾ.ಎಂ.ಜಿ.ಆರ್ ಅರಸ್

ಸಂಜೆವಾಣಿ ವಾರ್ತೆ
ದಾವಣಗೆರೆ.ಫೆ.೨೫:  ಹೆತ್ತವರು… ಕೃತಿ ಹೆಮ್ಮೆಯದ್ದು. ಅಂತಹ ಕೃತಿ ಲೋಕಾರ್ಪಣೆ ಆಗುತ್ತಿರುವುದು ಸಂತೋಷದ ವಿಚಾರ ಎಂದು ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ.ಎಂ.ಜಿ.ಆರ್. ಅರಸ್ ತಿಳಿಸಿದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ,  ವಚನ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘ, ಜಿಲ್ಲಾ ಶಾಖೆ,  ಸ್ಫೂರ್ತಿ ಪ್ರಕಾಶನ ತೆಲಿಗಿ,  ನಿರ್ವರ್ಣ ಆರ್ಟ್ ಗ್ಯಾಲರಿ  ಸಂಯುಕ್ತಾ ಶ್ರಯದಲ್ಲಿ ಗುರುಭವನದಲ್ಲಿ ಏರ್ಪಡಿಸಿದ್ದ ಕೃತಿಗಳ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ನೂರನಲವತ್ತು ಜನ ಚುಟುಕು ಸಾಹಿತಿಗಳು ತಮ್ಮ ಜನ್ಮದಾತರ ಕುರಿತಾಗಿ ಬರೆದಿದ್ದಾರೆ. ಜನ್ಮದಾತರ ಋಣ ತೀರಿಸಲಿಕ್ಕಾಗದು. ಜೀವನದಲ್ಲಿ ಎಂತದ್ದೇ ಸ್ಥಾನಕ್ಕೇರಿ ದರೂ ಮೊದಲಿಗೆ ನೆನಪಾಗುವುದೇ ತಂದೆ ತಾಯಿ. ಅಂತಹವರ ಅಂತರಾಳದ ಭಾವನೆ ಹೊರತರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರತ್ನಾ ಹಾಲಪ್ಪಗೌಡರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಸಂಪಾದಿತ ಹೆತ್ತವರು ಕೃತಿ ಕುರಿತು ಭದ್ರಾವತಿಯ ಎಮಿರಿಟಿಸ್ ಪ್ರಾಧ್ಯಾಪಕಿ ಡಾ.ವಿಜಯಾದೇವಿಅಂತರಂಗದಧ್ವನಿ… ಕೃತಿ  ಕುರಿತು ಚುಟುಕು ಸಾಹಿತ್ಯ ಪರಿಷತ್ತಿನ ಗೌರವಕಾರ್ಯದರ್ಶಿ ಕೆ.ಎಸ್ ವೀರಭದ್ರಪ್ಪ ತೆಲಿಗಿ, ಮಾತನಾಡಿದರು.ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷಜಿ.ಎಚ್. ರಾಜಶೇಖರ್ ಗುಂಡಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಓಂಕಾರಯ್ಯ ಎಸ್. ತವನಿಧಿ ಪ್ರಾಸ್ತಾವಿಕ ನುಡಿಗಳನ್ನಾಡರು.ಹಿರಿಯ ಸಾಹಿತಿ ಎಸ್. ಮಲ್ಲಿಕಾರ್ಜುನಪ್ಪ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜು ನಾಥ್,ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಶಿವಯೋಗಿ ಹಿರೇಮಠ್,  ಎಂ. ಬಸವರಾಜ್,  ಮಮತಾ ಶ್ರೀಧರ್ ಇತರರು ಇದ್ದರು.ವಿವಿಧ ಕ್ಷೇತ್ರದಲ್ಲಿನ 14 ಜನ ಸಾಧಕರನ್ನು ಸನ್ಮಾನಿಸ ಲಾಯಿತು. ತಂದೆ ತಾಯಂದಿರ ಪಾದಪೂಜೆ ನಡೆಸಲಾಯಿತು.ಅಣಬೇರು ತಾರೇಶ್,  ಸುನೀತಾ ಪ್ರಕಾಶ, ಉಮಾದೇವಿ ಹಿರೇಮಠ ನಿರೂಪಿಸಿದರು.