ವಿರಳ ರೋಗಗಳ ದಿನಾಚರಣೆ ; ಜಾಗೃತಿ ಜಾಥ

ದಾವಣಗೆರೆ. ಫೆ.೨೫; ವಿರಳ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್ಗನೈಸೇಷನ್ ಫಾರ್ ರೇರ್ ಡಿಸಿಸ್ ಇಂಡಿಯಾ ವತಿಯಿಂದ ಮ್ಯಾರಥಾನ್ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವನ್ನು ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯು ಪ್ರತಿ ವರ್ಷದಂತೆ ಈ ವರ್ಷವು ದಾವಣಗೆರೆಯಲ್ಲಿ ಆಯೊಜಿಸಿತ್ತು.ಈ ವೇಳೆ ಸಂಸ್ಥೆಯ ಅದ್ಯಕ್ಷರಾದ ಡಾ. ಸುರೇಶ ಹನಗವಾಡಿ ಮಾತನಾಡುತ್ತಾ ಉದ್ದೇಶ ಮತ್ತು ಹಿನ್ನಲೆಯ ಬಗ್ಗೆ ತಿಳಿಸಿದರು. ವಿರಳ ರೋಗಿಗಳ ಕ್ಷೇಮಾಭಿವೃದ್ದಿ ಸಂಸ್ಥೆ-ಭಾರತ  2013 ರಲ್ಲಿ ಪ್ರಾರಂಭಗೊಡಿತು. ಇದರ ಉದ್ದೇಶ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ವೈದ್ಯಕೀಯ ಸೌಲಭ್ಯಗಳ ಆಭಿವೃದ್ದಿ, ವೈಜ್ಞಾನಿಕ ಲೋಕದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳ ಪ್ರೋತ್ಸಾಹಗಳಿಗೋಸ್ಕರ ಆನೇಕ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ ಎಂದು ತಿಳಿಸಿದರು ರೇಸ್ ಫಾರ್ 7” ಎಂಬ ಆಭಿಯಾನವನ್ನು 2016 ರಿಂದ ದೇಶದ್ಯಾದ್ಯಂತ ಪ್ರಮುಖ ನಗರಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಊಧ್ಘಟಕರಾಗಿ ಉದ್ಯಮಿ ಶ್ರೀಮತಿ ದೀಪಾ ಶಿವಕುಮಾರ್ ಮಾತನಾಡಿ ಎಲ್ಲಾ ವಿರಳ ರೋಗಿಗಳು ಗುಣಮಟ್ಟದ ಚಿಕಿತ್ಸೆ ಪಡೆದು ಬೇಗ ಗುಣಮುಖರಾಗಲಿ ಎಂದು ಹಾರೈಸಿದರು. ಮುಖ್ಯ ಅಥಿತಿಗಳಾಗಿ ಚಿಗಟೇರಿ ಜಿಲ್ಲಾ ಅಧೀಕ್ಷಕರಾದ ಡಾ. ನಾಗೇಂದ್ರಪ್ಪ ಎಂ.ಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಾಥಾ ಕಾರ್ಯಾಕ್ರಮಕ್ಕೆ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಆರೋಗ್ಯಧಿಕಾರಿಗಳಾದ ಡಾ. ಷಣ್ಮುಖಪ್ಪ ಎಸ್, ಜ ಜ ಮು ವೈದ್ಯಕಿಯ ಮಹಾ ವಿದ್ಯಾಲಯದ ಮಕ್ಕಳ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಪಕರಾದ ಡಾ. ಮೂಗನ ಗೌಡ, ಡಾ. ಮೃತ್ಯುಂಜಯ ಹಿರೇಮಠ ಮುಖ್ಯಸ್ಥರು, ಅಶ್ವೀನಿ ಆರ್ಯುವೇಧಿಕ್ ವೈದ್ಯಕಿಯ ಮಹಾ ವಿದ್ಯಾಲಯ ಮತ್ತು ಸಂಸ್ಥೆಯ ಉಪಧ್ಯಕ್ಷರು ಆಭಿವೃದ್ದಿ ಡಾ. ಬಿ.ಟಿ.ಅಚ್ಯುತ ಮತ್ತು ನಿವೃತ್ತ ಪೂಲೀಸ್ ವರಿಷ್ಠಾಧಿಕಾರಿ  ರವಿನಾರಯಣ  ಉಪಸ್ಥಿತರಿದ್ದರು. ನಗರದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಈ ಅಭಿಯಾನದಲ್ಲಿ 150 ಕ್ಕು ಹೆಚ್ಚು ಜನರು ಬಾಗವಹಿಸಿದ್ದರು, ನಗರದ ಜ.ಜ.ಮು ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಮತ್ತು ಪೆಥಾಲಾಜಿ ವಿಭಾಗದ ವೈದ್ಯಕೀಯ ವಿಧ್ಯಾರ್ಥಿಗಳು ಹಾಗೂ ಅಶ್ವಿನಿ ಆರ್ಯುವೇದ ಮೆಡಿಕಲ್ ಕಾಲೇಜಿನ ಶಿಬ್ಬಂದಿಗಳು ಮತ್ತು ವೈದ್ಯಕೀಯ ವಿಧ್ಯಾರ್ಥಿಗಳು, ಸಾರ್ವಜನಿಕರು, ರೋಗಿಗಳು ಹಾಗು ಪೋಶಕರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು ಕಾರ್ಯಕ್ರಮವನ್ನು ಡಾ. ಸೌಜನ್ಯ  ನಿರೂಪಿಸಿದರು.