ಕುಡಿಯುವ ನೀರು,ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಶಾಸಕರಿಂದ ತಾಕೀತು
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಫೆ 25 ಬೇಸಿಗೆ ಪ್ರಾರಂಭವಾಗಿದ್ದು ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು  ಅಧಿಕಾರಿಗಳಿಗೆ ಶಾಸಕ ಕೆ ನೇಮಿರಾಜ್ ನಾಯ್ಕ್ ತಾಕೀತು  ಮಾಡಿದರು
  ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ನೆಡೆದ  ಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳ ಟಾಸ್ಕ ಫೋರ್ಸ್ ಕಮಿಟಿ ಸಭೆಯಲ್ಲಿ ಮಾತನಾಡಿದರು ಕುಡಿಯುವ ನೀರಿನ ವಿಚಾರದಲ್ಲಿವಿದ್ಯುತ್ ಟಿಸಿ ಸುಟ್ಟರೆ 24 ತಾಸು ಒಳಗೆ ಕ್ರಮ ಕೈಗೊಳ್ಳಬೇಕು ಎಂದು ಜೆಸ್ಕಾಂ ಇಲಾಖೆಯ ಇಂಜಿನಿಯರ್ ಗೆ ಸೂಚಿಸಿದರು.  ರಾಜ್ಯದಲ್ಲಿ ಮಳೆಯಾಗದೆ ಬೀಕರ ಬರಗಾಲ ಆವರಿಸಿದೆ. ದಿನ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ.ಹನಿ ಹನಿ ನೀರಿಗೂ ಹಾಹಾಕಾರ ಉಂಟಾಗುವ ಸಾಧ್ಯತೆಗಳಿವೆ.ಸಂಬಂಧಿಸಿದ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಕುಡಿಯುವ ನೀರಿನ ಬಗ್ಗೆ ಹಾಗೂ ಕೃಷಿ ಮತ್ತು.ಧನ ಕರುಗಗಳಿಗೆ  ಯಾವ ಯಾವ ಬೆಳೆ ಎಷ್ಟೆಷ್ಟು ಹೆಕ್ಟೇರ್ ಇದೆ ಯಾವ ಯಾವ ಭಾಗದಲ್ಲಿ ಏಷ್ಟು ಟನ್ ಮೇವು ಸಂಗ್ರಹವಿದೆ. ಹೊಲ ಇದ್ದವರ ಮತ್ತು ಹೊಲ ಇಲ್ಲದವರ ಜಾನುವಾರುಗಳೇಷ್ಟು ಪ್ರಶ್ನೆಗೆ ಕೃಷಿ ಇಲಾಖೆ ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಹಳ್ಳಿಗಳಲ್ಲಿ ಜಾತ್ರೆಗಳು ಆರಂಭವಾಗಿದ್ದು  ಗ್ರಾ ಪಂ ಅಧಿಕಾರಿಗಳು ಕುಲಸಿತ ನೀರು ಹೆಚ್ಚಾಗಿ ಬಳಸದಂತೆ  ನೋಡಿಕೊಳ್ಳಬೇಕು. 
ತಹಶೀಲ್ದಾರ್ ಚಂದ್ರ ಶೇಖರ್ ಶಂಭಣ್ಣ ಗಾಳಿ ಮಾತನಾಡಿ ತಾಲೂಕಿನಲ್ಲಿ 1.57 ಲಕ್ಷ ಜಾನುವಾರು ಕುರಿ ಮೇಕೆಗಳಿದ್ದು ತಾಲೂಕಿನ ಭಾಗದಲ್ಲಿ ನಾಲ್ಕು ವಾರಗಳಿಗೆ ಆಗುವಷ್ಟು ಮೇವಿದೆ. ತಂಬ್ರ ಹಳ್ಳಿ ಭಾಗದಲ್ಲಿ 18 ವಾರಗಳಿಗೆ  ಆಗುವಷ್ಟು ಮೇವಿದೆ. ಹಂಪಸಾಗರ, ತಂಬ್ರಹಳ್ಳಿ ಹಗರಿಬೊಮ್ಮನಹಳ್ಳಿಯ ಇತರ ಕಡೆ  ಒಟ್ಟು 1495 ಟನ್ ಮೇವಿನ ಕೊರತೆ ಇದ್ದು  ರೈತರಿಂದ  ಮೇವು ಖರೀದಿಸಲು 6 ಸಾವಿರ ರೂ.ನಿಗದಿಪಡಿಸಲಾಗಿದೆ.ಸ್ಥಳೀಯ ರೈತರಿಂದ ಮೇವು ಖರೀದಿಸಿದಲ್ಲಿ ಸಾರಿಗೆ ವೆಚ್ಚ ಉಳಿತಾಯವಾಗಲಿದೆ ಎಂದರು.          
 ಕುಡಿಯುವ ನೀರು ಯಾವ ಯಾವ ಭಾಗದಲ್ಲಿ ಸಮಸ್ಯೆಯಾಗಿದೆ  ಜನರ ಅನುಕೂಲಕ್ಕೆ ಏನೇನು ಕ್ರಮ ವಹಿಸಿದ್ದಿರಿ ಎಂದು ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ದೀಪಾ ಅವರನ್ನು ಪ್ರಶ್ನಿಸಿದರು.              ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ 38 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಜನತೆಯ ಅನುಕೂಲತೆಗೆ  ಹೊಸದಾಗಿ ಬೋರ್ ವೆಲ್  ಕೊರೆಸಲಾಗಿದೆ.ಬೋರ್ ವೆಲ್ ನಲ್ಲಿ ನೀರು ಇಲ್ಲದ ಕಡೆ  ರೈತರ ಪಂಪ ಸೆಟ್ ನೀರಿನ ಪ್ರಮಾಣಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು. ಇದಕ್ಕೆ  ಪ್ರತಿಕ್ರಿಯಿಸಿ ಶಾಸಕರು ಮಳೆ ಇಲ್ಲದೆ ಕಂಗಾಲು ಆಗಿರುವ ರೈತರು ತಮ್ಮ ಬೆಳೆಗಳನ್ನು ಬದುಕಿಸಿಕೊಳ್ಳುವುದೆ ಕಷ್ಟವಾಗಿರುವಾಗ  ರೈತರಿಂದ ಪಡೆಯುವ ಕುಡಿಯುವ ನೀರು ಎಷ್ಟೇ ಪ್ರಮಾಣದಾಗಿರಲಿ ಎಲ್ಲಾರಿಗೂ 20 ಸಾವಿರ ರೂ ನಿಗದಿಗೊಳಿಸಿ ಎಂದು ದೀಪಾ ಅವರಿಗೆ ಸೂಚಿಸಿದರು.ರೈತರಿಂದ ನೀರು ಸಿಗುವುದು ಕಷ್ಟ ಎಂದರೆ ಕೊನೆಯದಾಗಿ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಎಂದರು.
 ಈ ಸಂದರ್ಭದಲ್ಲಿ ತಾ ಪಂ ಇ ಒ ಪರಮೇಶ್ವರಪ್ಪ, ಹೊಸಪೇಟೆ  ತಹಶೀಲ್ದಾರ್ ಶೃತಿ ಮಲ್ಲನಗೌಡರ್, ಕೊಟ್ಟೂರಿನ  ತಹಶೀಲ್ದಾರ್, ತಾ.ಪಂ ಇ ಒ   ಕೊಟ್ಟೂರು ಹಾಗೂ   , ,ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾ.ಪಂ ಪಿಡಿಒ ಗಳು ಭಾಗವಹಿಸಿದ್ದರು.
One attachment • Scanned by Gmail