ಯಶಸ್ಸು ಕಂಡ ತೊಗಲುಗೊಂಬೆ ಪ್ರದರ್ಶನ
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.25: ಶ್ರೀ ಮಾರುತಿ ತೊಗಲುಗೊಂಬೆ ಕಲ ಟ್ರಸ್ಟ್ (ರಿ) ಬಳ್ಳಾರಿ. ಇವರಿಂದ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ನ್ಯೂ ದೆಹಲಿ ‘ಎಂಬ ಶೀರ್ಷಿಕೆ ಅಡಿಯಲ್ಲಿ ಜನ್ ಭಾರತ್ ರಂಗ ಮಹೋತ್ಸವ 25ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಸುದೈವ ಕುಟುಂಬಕಂ ಎಂಬ ಶೀರ್ಷಿಕೆ ಅಡಿಯಲ್ಲಿ .ತೊಗಲುಗೊಂಬೆ ಪ್ರದರ್ಶನದ ಮೂಲಕ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ಹಮ್ಮಿಕೊಂಡ ಎಲ್ಲಾ ಕಲಾ ಪ್ರಕಾರದೊಂದಿಕ ಗೆ ಏಕಕಾಲದಲ್ಲಿ ಪ್ರದರ್ಶನ ಗೊಂಡವು. ಇದರ ಮೂಲ ಉದ್ದೇಶ ನಾವೆಲ್ಲರೂ ಭಾರತೀಯರು .ಭಾರತ ತಾಯಿಯ ಮಕ್ಕಳು . ಜಾತಿ ಧರ್ಮ ಭೇಧ ಭಾವ ಇರಬಾರದು . ನಮ್ಮ ಹಿರಿಯರ ಕಾಲದಿಂದ ಬಂದಂತಹ ಆಚರಣೆ ವಿಚಾರಣೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಸಕೊಂಡು ಹೋಗುವುದು ಮುಖ್ಯ ಉದ್ದೇಶ ವಾಗಿದೆ. ಶ್ರೀ ಮಾರುತಿ ತೊಗಲುಗೊಂಬೆ ಕಲ ಟ್ರಸ್ಟ್ ನ ಅಧ್ಯಕ್ಷರಾದ ಸುಬ್ಬಣ್ಣ ನವರು ಮಾತನಾಡಿದರು.  ಕಲಾ ತಂಡದ ಕಲಾವಿದರಿಂದ  “ವಸುದೈವ ಕುಟುಂಬಂಕಂ ” ತೊಗಲುಗೊಂಬೆ ಕಲಾವಿದರಿಂದ ಪ್ರದರ್ಶನ ಯಶಸ್ವಿ ಗೊಂಡಿತು