ಇಂಡಿಪೆಂಡೆಂಟ್  ಸರ್ಕಲ್ ನಿರ್ಮಾಣಕ್ಕೆ ಸಚಿವ ನಾಗೇಂದ್ರ ಭೂಮಿ ಪೂಜೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಫೆ,25-  ಕೌಲ್ ಬಜಾರ್ ಪಸ್ಟ್ ಗೇಟ್ ಬಳಿ 4.75 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಶೈಲಿಯ ಇಂಡಿಪೆಂಡೆಂಟ್  ಸರ್ಕಲ್ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಭೂಮಿಪೂಜೆ ನೆರವೇರಿಸಿದ್ದಾರೆ.
ಧ್ವಜ ಸ್ತಂಭ ಹಾಗೂ ಟವರ್ ಕ್ಲಾಕ್ ನಿರ್ಮಾಣ ಇಲ್ಲಿ ನಡೆಯಲಿದೆ. 
ಈ ವೇಳೆ ಮೇಯರ್, ಉಪ ಮೇಯರ್,  ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕೌಲ್ ಬಜಾರ್ ಭಾಗದ ಕಾಂಗ್ರೆಸ್ ಮುಖಂಡರು ಹಾಜರಿದ್ದರು.