ಶಕ್ತಿ ಭಕ್ತಿ ಇದ್ದಲ್ಲಿ ಮುಕ್ತಿ ಸಾಧ್ಯ. – ಕಲಿಕೇರಿ ಈರಮ್ಮ
ಸಂಜೆವಾಣಿ ವಾರ್ತೆ
ಸಂಡೂರು :ಫೆ:25  ಕನ್ನಡ ಎನ್ನುವುದು ಭಾಷೆಯಲ್ಲ. ಕನ್ನಡ ಭಾಷೆ ಒಂದು ಸಂಸ್ಕೃತಿ ಕನ್ನಡ ಭಾಷೆಯನ್ನ ಉಳಿಸಬೇಕಾಗಿದೆ. ಪಂಪಯುಗ, ಬಸವಯುಗ, ದಾಸ ಸಾಹಿತ್ಯ, ಈ ಮೂರು ಘಟ್ಟಗಳು ನಮ್ಮ ಜೀವನದಲ್ಲಿಯ ಬದುಕನ್ನು ಹಸನಮಾಡಿಕೊಂಡು ಮುಕ್ತಿ ಮಾರ್ಗಕ್ಕೆ ಹೋಗುವುದೇ ದಾಸ ಸಾಹಿತ್ಯ. ಜನರ ಆಡುವ ಭಾಷೆ ಸರಳವಾದ ಸಾಹಿತ್ಯ ದಾಸ ಸಾಹಿತ್ಯ. ದಿನ ನಿತ್ಯ ಕೀರ್ತನೆ ಉಗಾಬೊಗಳನ್ನು ಕೇಳುತ್ತೇವೆ. ದಾಸ ಸಾಹಿತ್ಯದ ಮೊದಲನೆ ಘಟ್ಟ ನರಹರಿದಾಸರು. ಇವರು ಊಗಾ ಬೊಗ ಕೀರ್ತನೆಗಳನ್ನು ಬರೆದರು. ದಾಸ ಸಾಹಿತ್ಯದ ಅಶ್ವಿನಿ ದೇವತೆ ಎಂದರೆ ಪುರಂದರ ದಾಸರು. ಕನಕ ದಾಸರು. ವಿಜಯದಾಸರು. ಮಹಿಪತಿ ದಾಸರು ವ್ಯಾಸರಾಯರು ಜಗನ್ನಾಥ ದಾಸರು. ದಾಸ ಸಾಹಿತ್ಯದಲ್ಲಿ 4 ಘಟ್ಟಗಳಿದ್ದು, 12 ರಿಂದ 16, 16 ರಿಂದ 18, 18 ರಿಂದ 19, 19 ರಿಂದ ಇತ್ತೀಚಗೆ 4 ಘಟ್ಟಗಳಾಗಿವೆ. ನೀತಿ ತತ್ವ ಹೇಳಿ ಕಂದಾಚಾರವನ್ನು ಹೋಗಲಾಡಿಸಿದವರು. ದಾಸ ಪರಂಪರೆಯವರು ತಾಳ್ಮೆ ಬಹಳ ಮುಖ್ಯ ಎನ್ನುವ ಸಂದೇಶವನ್ನು ಸಾರಿದವರು ದಾಸರು. ಕೀರ್ತನೆ ಊಗಾ ಬೋಗ, ಸುಳ್ಳಾದಿ ದಾಸ ಸಾಹಿತ್ಯದಲ್ಲಿ ಬರುವ 3 ಭಾಗಗಳಾಗಿವೆ. ದೇವರನ್ನು ಯಾರು ಪೂಜಿಸಿವುದಿಲ್ಲವೋ ಅವರಿಗೆ ಭೀತಿ ಖಚಿತ. ಶಕ್ತಿ ಭಕ್ತಿ ಇದ್ದಲ್ಲಿ, ಮುಕ್ತಿಸಾಧ್ಯ ಎಂದು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಕಲಿಕೆರಿ ವೀರಮ್ಮ ನವರು ತಿಳಿಸಿದರು.
ಅವರು ಸಂಡೂರು ಪಟ್ಟಣದ ಶ್ರೀ.ಛ.ಶಿ.ವಿ. ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಎರ್ಪಡಿಸಿದ್ದ 2 ದತ್ತಿ ಕಾರ್ಯಕ್ರಮಗಳು ಅಂದರೆ, ದಾಸ ಸಾಹಿತ್ಯ. ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ 2 ದತ್ತಿಗಳ ವಿಚಾರವಾಗಿ ಉತ್ತಮ ಉಪನ್ಯಾಸ ನೀಡಿದರು. ಈ ದತ್ತಿಯನ್ನು ಚಿದಂಬರ ಭಟ್ಟರವರು ತಮ್ಮ ತಾಯಿ ರಾಧಾ ಬಾಯಿ, ಗೋಪಾ ಭಟ್ಟರು. ರಾಜಪುರೊಹಿತ ಇವರ ಸವಿ ನೆನಪಿಗಾಗಿ ಹಾಗು ಸಂಡೂರು ತಾಲ್ಲೂಕು ಕುರುಬ ಸಂಘದ ವತಿಯಿಂದ ದತ್ತಿ ಕಾರ್ಯಕ್ರಮವನ್ನು ನೀಡಲಾಯಿತು. ವ್ಯಾಸರಾಯರು ದಾಸ ಸಾಹಿತ್ಯದ ಮೇರು ಪರ್ವತದ ವ್ಯಕ್ತಿ ಇಂದೇನಾದರೂ ದಾಸ ಸಾಹಿತ್ಯ ಉಳಿಯಬೇಕಾದರೆ ಪುರಂದರ ದಾಸರು ಮತ್ತು ಕನಕ ದಾಸರು  4 ಲಕ್ಷ ಉಗಾ ಬೊಗಗಳ ಕೀರ್ತನೆಯನ್ನ ಬರೆದವರು. ದಾಸರು. ಭಕ್ತಿಯಲ್ಲಿ ಧಾಂಬಿಕತನವನ್ನು ಮಾಡಿದರೆ ಮುಕ್ತಿ ಮಾರ್ಗಕ್ಕೆ ಹೋಗಲು ಸಾಧ್ಯವಿಲ್ಲ. ದ.ರಾ. ಬೇಂದ್ರೆಯವರ ಕುರುಡ ಕಾಂಚಾಣ ಎಂಬ ಸಾಹಿತ್ಯವನ್ನು 14ನೇ ಶತಮಾನದಲ್ಲಿ ಪುರಂದರ ದಾಸರು ತಿಳಿಸಿದರು. ಕನಕದಾಸರು. ಶ್ರೇಷ್ಠಕವಿ ಹರಿಭಕ್ತಸಾರ, ಮೋಹನ ತರಂಗಿಣಿ, ರಾಮಧಾನ, ನಳಚರಿತ್ರೆ ಹೀಗೆ ಹಲವಾರು ಕೃತಿಗಳನ್ನು ಬರೆದರು. ಜಾತಿಯತೆ ನಿರ್ಮೂಲನೆ ಮಾಡಿದವರು. ಕನಕ ದಾಸರು. ಜೀವನ ಎನ್ನುವುದು ನೀರಿನ ಮೇಲೆ ಗುಳ್ಳೆ ಜ್ಞಾನ ಭಕ್ತಿ ಮುಕ್ತಿ ಎನ್ನುವ ಮೂರು ಮಾರ್ಗಗಳಿಮದ ಮತ್ರ ನಮ್ಮ ಬದುಕು ಹಸನವಾಗಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಣ ಸಮಿತಿಯ ಕಾರ್ಯಧರ್ಶಿ ಡಾ|| ಎಸ್. ಜಗದೀಶ್ ಬಸಾಪುರ ಅವರು ಮಾತನಾಡಿ, ಮಕ್ಕಳಿಗೆ ಬರಿ ಉಪನ್ಯಾಸವನ್ನು ನೀಡಿದರೆ ಸಾಲದು. ಮಕ್ಕಳಿಗೆ ಪ್ರಬಂಧ ಸ್ಪರ್ದೆ ಕ್ವಿಜ್ ಕಾರ್ಯಕ್ರಮ ಹಾಗೂ ಉಪಯೋಗವಾಗುವ ಕಾರ್ಯಕ್ರಮಗಲನ್ನ ಏರ್ಪಡಿಸಿ ಮಕ್ಕಳಲ್ಲಿ  ಜ್ಞಾನ ಮೂಡಿಸಿಲು ಮನವಿ ಮಾಡಿದರು. ಮುಖ್ಯ ಶಿಕ್ಷಕ ಕೊಟ್ರಪ್ಪನವರು ಮಾತನಾಡಿ ಸಾಹಿತ್ಯ ಪರಿಷತ್ ರ್ವಕ್ಕೊಮ್ಮೆ ನಮ್ಮ ಶಾಲೆಯಲ್ಲಿ ಕಾರ್ಯಕ್ರಮವನ್ನು ಮಾಡಿದರೆ ಬಹಳ ಉತ್ತಮ ಎನಿಸಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನ ಮೂಡಿಸಬಹುದಾಗಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿ. ನಾಗನಗೌಡರು ಮಾತನಡಿ ಹೊಸ ಹೊಸ ಆಲೋಚನೆಗಳು ಬಹಳ ಮುಖ್ಯ. ವಿದ್ಯಾರ್ಥಿಘಳಿಗೆ ಜ್ಞಾನಾರ್ಜನೆಯಾಗಲು ಸಾಹಿತ್ಯ ಪರಿಷತ್ತಿನಿಂದ ಶಾಲೆಗಲಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅರಲಿ ಕುಮಾರಸ್ವಾಮಿ ಮಾತನಾಡಿ ನಮ್ಮಲ್ಲಿ ಉಪನ್ಯಾಸಕರುಗಳಿಗೆ ಏನು ಕೊರತೆ ಇಲ್ಲ. ಹೊಗಿನವರನ್ನ ಕರೆಸಿ ಉಪನ್ಯಾಸ ವಡಧೇ ಸ್ಥಳೀಯರಿಗೆ ಅವಕಾಶ ಮಾಡಿಕೊಟ್ಟರೆ ಸಾಹಿತ್ಯ ಪರಿಷತ್ತಿನ ಆಸತಿಗಳಾಗಲು ಕಾರಣವಾಗುತ್ತದೆ.ಇ.ಜಿ. ರೇಕಾ ಶಶಿಕಲಾ ಶಕ್ಸಕಿ ಈರಮ್ಮ ನಮಥವರು ಅಲ್ಲದೇ ಶಿಗ್ಗಾವಿಯವರು ಮಸೂತಿಯವರು ಈ ಎಲ್ಲಾ ಮಹಾನೀಯರಿಗೂ ಉಪನ್ಯಾಸಕ್ಕಾಗಿ ಅವಕಾಶ ಮಾಡಿಕೊಡಬೇಕಾಗಿ ಮನವಿ ಮಾಡಿದರು. ಕಾರ್ಯಕ್ರಮದ್ಲಿ ದಾಸ ಸಾಹಿತ್ಯದ ಉಪನ್ಯಾಸವಾದ ನಂತರ ಕ್ವಿಜ್ ಸ್ಪರ್ದೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಸ್ಥಳzದ್ಲೇ ಬಹುಮಾನ ವಿತರಿಸುವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲಲಿ ಕುರುಬ ಸಂಘದ ಅದ್ಯಕ್ಷ ಸತ್ಯಪ್ಪ, ಕಾರ್ಯದರ್ಶಿ – ಜಿ. ವೀರೇಶಿ, ನಿಕಟಪುರ್ವ ಅದ್ಯಕ್ಷ ಬಸವರಜ ಮಸೂತಿ ಎ. ಚಂದ್ರಶೇಕರಪ್ಪ ಮೋಹನ ಅಜ್ಜಯ್ಯ ಜಾವಿದ್ ಅಲ್ಲದೇ ಹಲವಾರು ಮಾನೀಯರು ಉಪಸ್ಥಿತರಿದ್ದರು. ಸುನಿಲ್ ಕುಮಾರ ಎನ್ನುವ ವಿದ್ಯರ್ಥಿ ಪ್ರಾರ್ಥನೆಯನ್ನ ನೆರವೇರಿಸಿದರು. ಪ್ರಧಾನ ಕಾರ್ಯಕ್ರªದಶಿ ಜಿ. ವಿರೇಶರವರು ಸ್ವಾಗತ ಮತ್ತು ಪ್ರಸ್ತಾ
ವಿಕ ನುಡಿಗಳನ್ನಾಡಿದರು. ಸಂಝೆವಾಣಿ ವರದಿಗಾರ ಅರಳಿ ಕುಮಾರಸ್ವಾಮಿಯವರು ವಂದಿಸಿದರು.
One attachment • Scanned by Gmail