ಸಂವಿಧಾನ ಪೀಠಿಕೆ ನಮ್ಮೆಲ್ಲರ ಜೀವಾಳ:ದರೇಶ
ಯಡ್ರಾಮಿ:ಫೆ.25:ಸಂವಿಧಾನ ಪೀಠಿಕೆಯಲ್ಲಿರುವ ಅಂಶಗಳೇ ನಮ್ಮೆಲ್ಲರ ಜೀವಾಳವಾಗಿದ್ದು ಇಡೀ ದೇಶದ ಹೆಮ್ಮೆ ನಮ್ಮ ಸಂವಿಧಾನ ಎಂದು ದರೇಶ ದಾದಾಗೋಳ ವ್ಯಕ್ತಪಡಿಸಿದರು.
ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 75ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಉಪಾನ್ಯಾಸಕರಾಗಿ ಮಾತನಾಡುತ್ತ.
ಸಂವಿಧಾನ ಪೀಠಿಕೆಯ ಪ್ರಾಮುಖ್ಯ ಹಾಗೂ ಅದರ ಆಶಯಗಳ ಹಿಂದಿರುವ ಸಾಮಾಜಿಕ ಕಾಳಜಿ, ಕಳಕಳಿಯನ್ನು ತಳಮಟ್ಟದವರೆಗೂ ತಲುಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಸಹಕಾರಿಯಾಗಬೇಕು.
ಸಂವಿಧಾನದ ಅರಿವೇ ಇಲ್ಲದ ಯುವ ಸಮೂಹಕ್ಕೆ ಭಾರತದ ಸಂವಿಧಾನ ಅಪೇಕ್ಷಿಸುವ ಬಹುತ್ವ ಸಂಸ್ಕøತಿ, ಸೋದರತ್ವ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮುಟ್ಟಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಹೇಳಿದರು.
ಇಂದು ಯುವಸಮುದಾಯವನ್ನು ತಲುಪಬೇಕಿರುವುದು ಗ್ರಾಂಥಿಕ ಸಂವಿಧಾನವಲ್ಲ. ಈ ಗ್ರಂಥದಲ್ಲಿ ಅಡಗಿರುವ ಸಾಮಾಜಿಕ ಮೌಲ್ಯಗಳು, ಸೂಕ್ಷ್ಮ ಸಂವೇದನೆಯ ಆಲೋಚನೆಗಳು,ಮನುಜ ಸಂಬಂಧಗಳನ್ನು.
ಬೆಸೆಯಬಹುದಾದ ಮಾನವೀಯ ಚಿಂತನೆಗಳು, ಅಮಾನುಷವಾದ ಆಚರಣೆ ಮತ್ತು ಸಂಪ್ರದಾಯಗಳನ್ನು ತೊಡೆದುಹಾಕುವ ಕ್ರಾಂತಿಕಾರಕ ಚಿಂತನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವುದು ನಮ್ಮ ಆದ್ಯತೆಯಾಗಬೇಕಿದೆ.
ಪ್ರತಿಯೊಬ್ಬರು ಸಂವಿಧಾನ ಓದುವ ಮೂಲಕ ಜಾಗೃತಿರಾಗಬೇಕು.ಸಂವಿಧಾನ ಗೌರವಿಸುವ ಜೋತೆಗೆ ಸಂವಿಧಾನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಜಾಥಾ ಕಾರ್ಯಕ್ರಮಕ್ಕೆ ಮಹತ್ವ ಬರುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮಲ್ಲಣ್ಣ ಯಲಗೋಡ ತಹಸೀಲ್ದಾರ ಜೇವರ್ಗಿ,ಶಶಿಕಲಾ ಪಾದಗಟ್ಟಿ ತಹಸೀಲ್ದಾರ ಯಡ್ರಾಮಿ,ಮೊನಮ್ಮ ಸತಾರ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ, ಸಂತೋಷ ರೇಡ್ಡಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಯಡ್ರಾಮಿ,ಮಹಾಂತೇಶ ಪುರಾಣಿಕ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಯಡ್ರಾಮಿ,ಸಿದ್ದು ಪಾಟೀಲ ವೈಧ್ಯಾಧಿಕಾರಿ ಜೇವರ್ಗಿ,ಬಗವಂತ್ರಾಯ ಬಿರಾದಾರ ತಾಲೂಕು ನೌಕರ ಸಂಘದ ಅಧ್ಯಕ್ಷರು,ಪ್ರಭು ಕಲ್ಲೂರ ತಾಲೂಕು ವೈಧ್ಯಾಧಿಕಾರಿ ಯಡ್ರಾಮಿ,ಮಹಾದೇವಿ ಶಿವಸಿಂಪಿ ತಾಲೂಕು ಬಿಸಿಯೂಟ ಅಧಿಕಾರಿ ಜೇವರ್ಗಿ,ಪ್ರಭುಗೌಡ ದೇಸಾಯಿ ಶಿಕ್ಷಣ ಇಲಾಖೆ, ಪಾತೀಮಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರು,ಗ್ರಾಮದ ಮುಖಂಡರಾದ ಚಂದ್ರಶೇಖರ ಹರನಾಳ,ಶರಣಪ್ಪ ದೊಡಮನಿ ಕಾಚಾಪೂರ,ಇಬ್ರಾಹಿಂ ಸಾಬ್ ಉಸ್ತಾದ್, ಚಂದ್ರಶೇಖರ ಪುರಾಣಿಕ ಹಯ್ಯಾಳಪ್ಪ ಗಂಗಾಕರ ಶಾಂತಪ್ಪ ಯಲಗೋಡ,ಮಂಜು ಕುಲಕರ್ಣಿ, ಇತರರು ಸಮಾಜದ ಮುಖಂಡರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಿದ್ದರು.
ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥ ಡೊಳ್ಳು ಕುಣಿತ ಲಂಬಾಣಿ ಕುಣಿತ ಹಲವಾರು ವಾದ್ಯಗಳ ಮೂಲಕ ವಿಜೃಂಭಣೆಯಿಂದ ಸ್ವಾಗತ ಮಾಡಿಕೊಂಡರು.
ಪಟ್ಟಣ ಪಂಚಾಯತಿ ಯಡ್ರಾಮಿ ವತಿಯಿಂದ ಭವ್ಯವಾದ 30-40 ಅಡಿಯ ಇರುವ ಸಂವಿಧಾನ ಜಾಗೃತಿ ಪೀಠಿಕೆ ಉದ್ಘಾಟನೆ.