ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ
ವಿಜಯಪರ,ಫೆ.25:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿಜಯಪುರ ಜಿಲ್ಲಾ ಘಟಕ ಹಾಗೂ ಕೆಎಸ್‍ಆರ್‍ಟಿಸಿ ಸ್ಟಾಫ್& ವರ್ಕರ್ಸ್ ಯೂನಿಯನ್ (ಎ.ಐ.ಟಿ.ಯು.ಸಿ) ಶಾಖೆ ವತಿಯಿಂದ ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಕಲಬುರಗಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಸ್ಟಾಫ್& ವರ್ಕರ್ಸ್ ಯೂನಿಯನ್ (ಎ.ಐ.ಟಿ.ಯು.ಸಿ) ಪ್ರಧಾನ ಕಾರ್ಯದರ್ಶಿ ಐ.ಐ.ಮುಶ್ರೀಫ್ ಅವರು ಮಾತನಾಡಿ, 31-12-2023ರ ಮೂಲ ವೇತನದ ಶೇ. 25ರಷ್ಟು ಹೆಚ್ಚಳ ಮಾಡಿ, 01-01-2024 ರಿಂದ ವೇತನ ಶ್ರೇಣಿಗಳನ್ನು ಸಿದ್ಧಪಡಿಸತಕ್ಕದ್ದು. (ಇನ್ಕ್ರಿಮೆಂಟ್ ದರ ಎಲ್ಲಾ ಹಂತಗಳಲ್ಲೂ ಮೂಲ ವೇತನದ ಶೇ. 4 ರಷ್ಟು ಇರತಕ್ಕದ್ದು.) 01-01-2020 ರಿಂದ ಆಗಿರುವ ಶೇ. 15 ವೇತನ ಹೆಚ್ಚಳದ 38 ತಿಂಗಳ ಬಾಕಿ ಹಣ ವಿಳಂಬವಿಲ್ಲದೆ ಪಾವತಿಸಬೇಕು. 01-01-2020 ರಿಂದ 28-02-2023ರ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ವಿಮುಕ್ತಿಯಾಗಿರುವ ಎಲ್ಲಾ ನೌಕರರಿಗೆ ನಿವೃತ್ತಿ, ಮೃತಪಟ್ಟವರು, ವಜಾಗೊಂಡವರು ಹಾಗೂ ಇತರೆ ಕಾರಣಗಳಿಂದ ಸೇವೆಯಿಂದ ನಿರ್ಗಮಿಸಿರುವ ಎಲ್ಲಾ ನೌಕರರಿಗೂ 01-01-2020 ರಿಂದ ಜಾರಿ ಮಾಡಿರುವ ವೇತನ ಶ್ರೇಣಿಗಳನ್ನು ಅನ್ವಯಿಸಿ, ಎಲ್ಲಾ ರೀತಿಯ ಆರ್ಥಿಕ ಸೌಲಭ್ಯಗಳನ್ನು ಪಾವತಿಸಬೇಕು ಎಂದರು.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳ ಅಧ್ಯಕ್ಷ ಎಂ.ಎಚ್. ಅಗರಖೇಡ ಮಾತನಾಡಿ, ಚಾಲಕರು, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂಧಿಗಳಿಗೆ ಮತ್ತು ಇತರ ಎಲ್ಲಾ ನೌಕರರಿಗೂ, ಹಾಲಿ ಇರುವ ಭಾಟಾ, ಮಾಸಿಕ/ ದೈನಂದಿನ (ಕ್ಯಾಷ್, ರಿಫಾಸ್ಟ್, ಬಟ್ಟಿ ತೊಳೆಯುವ, ರಾತ್ರಿ ಪಾಳಿ, ಪ್ರೋತ್ಸಾಹ ಭತ್ಯೆ ಮತ್ತಿತರ ಭತ್ಯೆಗಳು) ಭತ್ಯೆಗಳನ್ನು ಐದು ಪಟ್ಟು ಹೆಚ್ಚಿಸಬೇಕು. ಹೊಲಿಗೆ ಭತ್ಯೆ, ಶೂ. ಜೆರ್ಸಿ, ರೈನ್ ಕೋಟ್ ಇತ್ಯಾದಿಗಳಿಗೆ ಕೊಡಲಾಗುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು. ಎಲ್ಲಾ ನಿರ್ವಾಹಕರಿಗೂ ಕ್ಯಾಷಿಯರ್‍ಗಳಿಗೆ ಸಮಾನವಾದ ಕ್ಯಾಷ್ ಅಲೋವೆನ್ಸ್ ನೀಡಬೇಕು. ಎಲ್ಲಾ ನೌಕರರಿಗೂ ಪ್ರತಿ ತಿಂಗಳೂ ಹೊರ ರೋಗಿ ಚಿಕಿತ್ಸೆ ವೆಚ್ಚಕ್ಕಾಗಿ 2000 ರೂ. ನೀಡಬೇಕು. ಎಲ್ಲಾ ನೌಕರರಿಗೂ ಉಚಿತ ಔಷಧಿ ಪೂರೈಸಬೇಕು. ಇ.ಎಸ್.ಐ ಮಾದರಿಯಲ್ಲಿ ಆಡಳಿತ ವರ್ಗದವರಿಂದ ನೌಕರರ ಮೂಲ ವೇತನದ ಶೇ.4.5 ಹಾಗೂ ನೌಕರರಿಂದ ಶೇ. 0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಈ ಮೂಲಕ ಸಾರಿಗೆ ನೌಕರರಿಗೆ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ (ನಗದು ರಹಿತ) ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಬೇಕು. ಮೇಲ್ಕಂಡ ಈ ಸೌಲಭ್ಯಗಳನ್ನು ನಿವೃತ್ತ ಕಾರ್ಮಿಕರಿಗೆ ಅವರ ಪತಿ/ಪತ್ನಿ ಹಾಗೂ ಮಕ್ಕಳಿಗೆ ನೀಡತಕ್ಕದ್ದು. 2023ರ ಅವಧಿಗೆ ನೌಕರರಿಂದ ಕಡಿತಗೊಳಿಸಲಾಗಿದ್ದ ಅಪಘಾತ ವಿಮೆ ಪ್ರೀಮಿಯಂ ಹಣವನ್ನು ಮರು ಪಾವತಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್‍ಈಕೆಆರ್‍ಟಿಸಿ ಎಸ್‍ಸಿ & ಎಸ್‍ಟಿ ಎಂಪ್ಲಾಯಿಸ್ ಕೆಎಸ್‍ಆರ್‍ಟಿಸಿ ಎಸ್‍ಸಿ & ಎಸ್‍ಟಿ ಅಸೋಸಿಯೇಷನ್, ವಿಜಯಪುರ ಅಧ್ಯಕ್ಷÀ ರಾಚಪ್ಪ ಲಿಂಗದಳ್ಳಿ, ಕೆಎಸ್‍ಆರ್‍ಟಿಸಿ ಎಸ್‍ಸಿ ಮತ್ತು ಎಸ್‍ಟಿ ಅಸೋಸಿಯೇಷನ್, ವಿಜಯಪುರ ಎಂಪ್ಲಾಯೀಸ್ ಯೂ£ಯನ್ ಅಧ್ಯಕ್ಷ ಆರ್.ಎಮ್. ಮಡ್ಡಿಮನಿ, ಕರಾರಸಾ ಸಂಸ್ಥೆ ಪ.ಜಾ/ಪ.ಪಂ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ ಪ್ರಧಾನ ಕಾಯದರ್ಶಿ ಬಸವರಾಜ ಭಜಂತ್ರಿ, ಆರ್.ಆರ್. ನದಾಫ್. ಶಿವಾನಂದ ಬೈಚಬಾಳ. ಅರುಣಕುಮಾರ ಹೀರೆಮಠ, ಮುಸ್ತಾಕ ಹುಂಡೇಕಾರ, ಭೀಮಪ್ಪ ಗುಳೆದವರ, ಎಚ್.ಡಿ. ಪಟ್ಟಣಶೆಟ್ಟಿ, ನಿಂಗಪ್ಪ ಕವಲಗಿ, ನೂರಅಹ್ಮದ ಸೌದಾಗರ, ಜಯಶ್ರೀ ಹೂಗಾರ, ಜಿ.ಜಿ.ಬಿರಾದಾರ, ಮುನ್ನಾ ವಿಜಯಪುರ, ಆನಂದ ತಳವಾರ, ಶಿವಾನಂದ ಹದನೂರ ಇತರರು ಉಪಸ್ಥಿತರಿದ್ದರು.