ಶಾಲಾ ಅಭಿವೃದ್ದಿಗೆ ಎಸ್‍ಡಿಎಂಸಿ ಪಾತ್ರ ಮುಖ್ಯ:ವಿಜಾಪೂರ
ತಾಳಿಕೋಟೆ:ಫೆ.25: ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಅರ್ಹತೆಯ ತರಬೇತಿ ಪಡೆದ ಅನುಭವಿ ಶಿಕ್ಷಕರಿಂದ ಶಿಕ್ಷಣದಲ್ಲಿ ಅಭಿವೃದ್ದಿ ಹೊಂದಿದ್ದರೂ ಕೂಡಾ ಪಾಲಕರಿಗೆ ಅಂಟಿರುವ ಖಾಸಗಿ ಶಾಲೆಗಳ ವ್ಯಾಮೋಹದಿಂದ ಮಕ್ಕಳಿಲ್ಲಾವೆಂಬ ಕೊರಗು ಕಾಡುತ್ತಾ ಬರುತ್ತಿದೆ ಮಕ್ಕಳ ಹಾಜರಾತಿ ಹೆಚ್ಚಿಸಲು ಶಿಕ್ಷಕರ ಜೊತೆಗೆ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು ಕೈಜೋಡಿಸಿದಾಗ ಶಾಲೆಯನ್ನು ಅಭಿವೃದ್ದಿಯಡೆಗೆ ಕೊಂಡೊಯಲು ಸಾಧ್ಯವಾಗಲಿದೆ ಎಂದು ಸಿ.ಆರ್.ಪಿ. ರಾಜು ವಿಜಾಪೂರ ಅವರು ಹೇಳಿದರು.
ಪಟ್ಟಣದ ರಾಜವಾಡೆಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹೊಸ ಶಾಲೆಯ ನೂತನ ಎಸ್‍ಡಿಎಂಸಿ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಶೇವಳಕರ ಹಾಗೂ ಸದಸ್ಯರುಗಳಿಗೆ ಶುಭಕೋರುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಸರಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರತಿಯೊಂದು ಶಾಲೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳನ್ನು ರಚಿಸಲಾಗುತ್ತದೆ ಶಾಲೆಗಳ ವಾತಾವರಣವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಶಿಕ್ಷಕರಷ್ಟೇ ಜವಾಬ್ದಾರಿ ಎಸ್‍ಡಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ಸದಸ್ಯರುಗಳದ್ದಾಗಿರುತ್ತದೆ ಶಾಲಾಭಿವೃದ್ಧಿಗೆ ಎಸ್‍ಡಿಎಂಸಿ ಸದಸ್ಯರು ಹಾಗೂ ಪ್ರತಿಯೊಬ್ಬರೂ ಶಾಲಾ ಮುಖ್ಯ ಶಿಕ್ಷಕರೊಂದಿಗೆ ಕೈ ಜೋಡಿಸಿ ಸರಕಾರದಿಂದ ಬರುವಂತಹ ಸೌಲಭ್ಯಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ, ಸಮರ್ಪಕವಾಗಿ ಬಳಸಿಕೊಂಡು ಶಾಲೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ, ಶಾಲೆ ಅಭಿವೃದ್ಧಿಪಡಿಸುವ ಮೂಲಕ ಶಾಲಾ ವಾತಾವರಣವನ್ನು ಕಾಪಾಡಿಕೊಂಡು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಲು ಸಹಕರಿಸಬೇಕು ಎಂದರು.
ಶಾಲೆಯ ಸಹ ಶಿಕ್ಷಕ ಸುರೇಶ ಪಾಟೀಲ ಅವರು ಮಾತನಾಡಿ ರಾಜವಾಡೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ದಿಗೆ ಎಸ್‍ಡಿಎಂಸಿ ಆಡಳಿತ ಮಂಡಳಿ ಒಳಗೊಂಡಂತೆ ಪಾಲಕರು ಕೂಡಾ ಇಲ್ಲಿಯವರೆಗೂ ಸಹಕರಿಸುತ್ತಾ ಬಂದಿರುವದು ಹೆಮ್ಮೆಯ ವಿಷಯವಾಗಿದೆ ಅದರಂತೆ ಕಳೆದ 5 ವರ್ಷಗಳಿಂದ ಕಾರಣಾಂತರದಿಂದ ಈ ಶಾಲೆಗೆ ಎಸ್‍ಡಿಎಂಸಿ ರಚನೆಯಾಗಿದ್ದಿಲ್ಲಾ ಸದ್ಯ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಪಾಲಕರ ಸಭೆಯಲ್ಲಿ ಒಮ್ಮತದ ನಿರ್ಣಯದಂತೆ ಎಸ್‍ಡಿಎಂಸಿಯನ್ನು ರಚನೆ ಮಾಡಲಾಗಿದ್ದು ನೂತನ ಆಡಳಿತ ಮಂಡಳಿ ಅಧ್ಯಕ್ಷರು ಕೂಡಾ ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವದರಿಂದ ಶಾಲೆಯ ಅಭಿವೃದ್ದಿಗೆ ಹೆಚ್ಚಿಗೆ ಗಮನಕೊಡಲಿದ್ದಾರೆಂದು ಭಾವನೆಯನ್ನು ವ್ಯಕ್ತಪಡಿಸಿದ ಅವರು ನೂತನ ಎಸ್‍ಡಿಎಂಸಿ ಆಡಳಿತ ಮಂಡಳಿಯು ಶಾಲೆಯ ಅಭಿವೃದ್ದಿಯಲ್ಲಿ ಮುಖ್ಯಪಾತ್ರವಹಿಸುವ ಕುರಿತು ಮಾಹಿತಿ ಹಂಚಿಕೊಂಡರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಎಸ್.ಬಿ.ಹೂಗಾರ ಅವರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದರೂ ಕೂಡಾ ಇಂದಿನ ಖಾಸಗಿ ಶಾಲೆಗಳ ಆಕರ್ಷಣೆಯ ಬರಾಟೆಯಲ್ಲಿ ಪಾಲಕರನ್ನು ತಮ್ಮತ್ತ ಸೇಳದುಕೊಳ್ಳುವದರೊಂದಿಗೆ ಸರ್ಕಾರಿ ಶಾಲೆಯ ಮಕ್ಕಳನ್ನು ಸೇಳೆದುಕೊಳ್ಳುತ್ತಾ ಸಾಗಿರುವದು ದುಃಖದ ಸಂಗತಿಯಾಗಿದೆ ಇದನ್ನು ತಪ್ಪಿಸಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳಿಸಿಕೊಳ್ಳುವ ಮತ್ತು ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲೆ ಇದ್ದು ಇದನ್ನು ನಿಭಾಯಿಸುವದರೊಂದಿಗೆ ಮಕ್ಕಳ ಹಾಜರಾತಿ ಹೆಚ್ಚಳಕೆ ನೂತನ ಎಸ್‍ಡಿಎಂಸಿ ಆಡಳಿತ ಮಂಡಳಿ ಸಹಕರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ಡಿಎಂಸಿ ಅಧ್ಯಕ್ಷ ಶ್ರೀನಿವಾಸ ಶೇವಳಕರ ವಹಿಸಿದ್ದರು.
ಇದೇ ಸಮಯದಲ್ಲಿ ಶಾಲೆಯ ನೂತನ ಎಸ್‍ಡಿಎಂಸಿ ಅಧ್ಯಕ್ಷರಾದ ಶ್ರೀನಿವಾಸ ಶೇವಳಕರ, ಉಪಾಧ್ಯಕ್ಷ ಶ್ರೀಮತಿ ಜೈರಾಬಿ ಚೋರಗಸ್ತಿ ಮತ್ತು ಸದಸ್ಯರುಗಳಿಗೆ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಪುರಸಭಾ ಸದಸ್ಯ ಅಣ್ಣಾಜಿ ಜಗತಾಪ, ಡಿ.ವ್ಹಿ.ಪಾಟೀಲ, ಮುದಕಣ್ಣ ಬಡಿಗೇರ, ರಾಘವೇಂದ್ರ ಮಾನೆ, ಶಿವಾಜಿ ಶೇವಳಕರ, ಸಂತೋಷ ಡಿಸಲೆ, ಅಂಬಾಜಿ ಘೋರ್ಪಡೆ, ಶಾಂತಗೌಡ ಪಾಟೀಲ, ವಿಠ್ಠಲ ಮೋಹಿತೆ, ಶ್ರೀಧರ ಹುಬಳಿಕರ, ಶರಣಪ್ಪ ಬುಶೆಟ್ಟಿ, ರಾಮು ಜಾಧವ, ಬಸ್ಸು ಆನೇಸೂರ, ನಾಗಪ್ಪ ಬಡಿಗೇರ, ಶಶಿಕುಮಾರ ಹಡಪದ, ಶ್ರೀಮತಿ ಉಮಾದೇವಿ ಹಿರೇಮಠ, ಶ್ರೀಮತಿ ಸುನಂದಾ ಕುಮಟಗಿ, ಶ್ರೀಮತಿ ಸಾವಿತ್ರಿ ಪಾಟೀಲ, ತ್ರಿವೇಣಿ ಪವಾಡಶೆಟ್ಟಿ, ರೇಣುಕಾ ಪೊಲೀಸ್‍ಪಾಟೀಲ, ಮಹ್ಮದ ಕೇಂಭಾವಿ, ನಸರಿನ ದಖನಿ, ಮೀರಾಬಾನು ಚೋರಗಸ್ತಿ, ಗೀತಾ ಮೇಲಿನಮನಿ, ಶಿಕ್ಷಕರಾದ ಶ್ರೀಮತಿ ಲೀಲಾವತಿ ದೊಡಮನಿ, ಎಲ್.ಎನ್.ಮೇಳಕುಂದಿ, ಹಾಗೂ ರಾಹುಲ್ ರಜಪೂತ, ಮೊದಲಾದವರು ಇದ್ದರು.