ರಿಲಾಯಿನ್ಸ್ ಶಾಲೆಯಲ್ಲಿ ಆಹಾರ ಉತ್ಸವ
ತಾಳಿಕೋಟೆ:ಫೆ.25: ಪಟ್ಟಣದ ರಿಲಾಯಿನ್ಸ್ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಪುಡ್ ಪೇಸ್ಟಿವಲ್(ಆಹಾರ ಉತ್ಸವ ಕಾರ್ಯಕ್ರಮವನ್ನು ಆಯಿಜಿಸಲಾಗಿತ್ತು.
ಕಾರ್ಯಕ್ರಮವನ್ನು ಮುಸ್ಲಿಂ ಬ್ಯಾಂಕ್ ಅಧ್ಯಕ್ಷರಾದ ದಾದಾಫೀರ ಚೌದ್ರಿ, ಪುರಸಭೆ ಮಾಜಿ ಅಧ್ಯಕ್ಷ ಮೈಹಿಬೂಬಸಾಬ ಚೋರಗಸ್ತಿ, ಇಬ್ರಾಹಿಂ ಮನ್ಸೂರ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎ.ಎಸ್.ನಮಾಜಕಟ್ಟಿ, ಅವರು ಉದ್ಘಾಟಿಸಿದರಲ್ಲದೇ ಮಕ್ಕಳಲ್ಲಿ ಅಡಗಿರುವ ವ್ಯವಹಾರಿಕ ಜ್ಞಾನ ಬೆಳವಣಿಗೆಯನ್ನು ಪರಿಶೀಲಿಸಿ ಸಂತಸ ಪಟ್ಟರು.
ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ಆಹಾರ ಪದಾರ್ಥಗಳನ್ನು ಪ್ರದರ್ಶನ ಮಾಡಿ ಯೋಗ್ಯ ದರದಲ್ಲಿ ಮಾರಾಟದಲ್ಲಿ ತೊಡಗಿದರು. ತಯಾರಿಸಲಾದ ಆಹಾರ ಪದಾರ್ಥಗಳಲ್ಲಿ ಸಿಹಿ ಪದಾರ್ಥ, ಕಾಯಪಲ್ಲೆ ಪದಾರ್ಥಗಳು ಮತ್ತು ಕೋಲ್ಡ್ರೀಂಕ್ಸ್ ಒಳಗೊಂಡಂತೆ ವಿವಿಧ ನಮೂನೆಯ ಎಲ್ಲ ಪದಾರ್ಥಗಳನ್ನು ಮಾರಾಟಕ್ಕೆ ಇಟ್ಟು ಗ್ರಾಹಕರನ್ನು ಸೇಳೆದುಕೊಳ್ಳುವ ಮಕ್ಕಳಲ್ಲಿಯ ಕೌಶ್ಯಲ್ಯದ ಕಲೆ ಅತಿಥಿಗಳಿಗೆ ಮೆಚ್ಚುವಂತೆ ಕಂಡುಬಂದಿತು. ಸದರಿ ಆಹಾರ ಪದಾರ್ಥಗಳ ಬೆಲೆ 5 ರೂ.ಯಿಂದ 30 ರೂ.ಗಳವರೆಗೆ ನಿಗಧಿಪಡಿಸಲಾಗಿತ್ತು ಸದರಿ ಆಹಾರ ಪದಾರ್ಥಗಳನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳೇ ಖರೀದಿಸಿ ಮಕ್ಕಳ ಕೌಶ್ಯಲ್ಯಕ್ಕೆ ಇನಷ್ಟು ಪುಷ್ಠಿನೀಡಿದರು.
ಈ ಸಮಯದಲ್ಲಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಬೀಬಿಆಯಿಶಾ ವಠಾರ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶಬಾನಾ ಚೋರಗಸ್ತಿ, ಸಹ ಶಿಕ್ಷಕರಾದ ಜೆ.ಆಯ್.ಸಂಗಾಪೂರ, ಮೊದಲಾದವರು ಇದ್ದರು.