ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
ತಾಳಿಕೋಟೆ:ಫೆ.25: ತಾಲೂಕಿನಲ್ಲಿ ನಡೆಯುತ್ತಿರುವ ಬೂದಿಹಾಳ-ಫಿರಾಪೂರ ಏತ ನೀರಾವರಿಯ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಗಳಾದ ಬಿ.ಎಸ್.ಪಾಟೀಲ(ಪಡೇಕನೂರ) ಅವರು ವಿಕ್ಷಣೆ ಮಾಡಿದರಲ್ಲದೇ ಮುಂದೆ ಕೈಗೊಳ್ಳಲಾಗುವ ಎಫ್.ಆಯ್.ಸಿ.ಕಾಲುವೆಗಳನ್ನು ಒಳ್ಳೆಯ ಗುಣಮಟ್ಟದಿಂದ ಕೈಗೊಳ್ಳಲು ಸೂಚಿಸಿದರು.
ಮಾಹಿತಿ ಪಡೆದ ಲೊಕಾಯುಕ್ತ ನ್ಯಾಯಮೂರ್ತಿ ಗಳಾದ ಬಿ.ಎಸ್.ಪಾಟೀಲ(ಪಡೇಕನೂರ) ಅವರು ಈ ಭಾಗದಲ್ಲಿ 50 ಸಾವಿರ ಏಕರೆ ನೀರಾವರಿಗೆ ಒಳಪಡುತ್ತಿರುವದರಿಂದ ಸದರಿ ಪೆÇ್ರಜೆಕ್ಟಬಗ್ಗೆ ರೈತಬಂದುಗಳಿಗೆ ಮಾಹಿತಿ ಒದಗಿಸಿ ಯಾವ ರೀತಿ ನೀರು ಬಳಕೆ ಮಾಡುವದರಿಂದ ಜಮೀನಿನ ಫಲವತ್ತತೆ ಕಾಪಾಡಿಕೊಳ್ಳಬಹುದು ಎಂಬಹದರ ಬಗ್ಗೆ ಮಾಹಿತಿ ನೀಡಿ ಒಟ್ಟಾರೆ ಕಾಮಗಾರಿಯು ಗುಣಮಟ್ಟದಿಂದ ಕೂಡಿರಲಿ ಪದೇ ಪದೇ ಮಾಡುವ ಕಾಮಗಾರಿ ಇದು ಅಲ್ಲಾ ಕಾಮಗಾರಿಯಲ್ಲಿ ಯಾವುದೇ ರೀತಿಯ ಲೊಪವಾಗದಂತೆ ನೊಡಿಕೊಳ್ಳಿ ಎಂದು ಸೂಚಿಸಿದರು.
ಇದೇ ಸಮಯದಲ್ಲಿ ಕಾಮಗಾರಿಗೆ ಸಂಬಂದಿಸಿದ ಕೆಲವು ದಾಖಲೆಗಳನ್ನು ಮತ್ತು ಪೆÇ್ರೀಜೆಕ್ಟ ಮಾಹಿತಿಯನ್ನು ಕರ್ನಾಟಕ ರಾಜ್ಯ ಲೊಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ(ಪಡೇಕನೂರ) ಅವರು ಪರಿಶಿಲಿಸಿದರು.
ಈ ಸಮಯದಲ್ಲಿ ಲೊಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ಮಲ್ಲೇಶ ಟಿ., ಡಿವಾಯ್ ಎಸ್ ಪಿ ಸುರೇಶ ರಡ್ಡಿ, ಇನ್ಸಪೇಕ್ಟರ್ ಗಳಾದ ಆನಂದ ಟಕ್ಕಣ್ಣವರ, ಆನಂದ ಡೊಣಿ, ಕೆಬಿಜೆಎನ್ ಎಲ್ ನ ಎಇಇ ಶಂಕರ ಬಂಡಿವಡ್ಡರ, ಎಇ ವಿಶ್ವನಾಥ ಬಿರಾದಾರ, ಹಣಮಂತ ಗುಡಗುಂಟಾ, ಆಕಾಶ, ಮೊದಲಾದವರು ಉಪಸ್ಥಿತರಿದ್ದರು.