ತಾಲೂಕು ದಂಡಾಧಿಕಾರಿ ಪೂರ್ಣಿಮಾರಿಗೆ ಬೀಳ್ಕೊಡುಗೆ
ಸಂಜೆವಾಣಿ ವಾರ್ತೆ
ಸಾಲಿಗ್ರಾಮ. ಫೆ 25:- ಕೆ ಆರ್ ನಗರ ತಾಲೂಕು ಮತ್ತು ಸಾಲಿಗ್ರಾಮ ತಾಲೂಕು ತಾಶಿಲ್ದಾರರಾಗಿ ಪೂರ್ಣಿಮಾ ಅವರು ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಾಲಿಗ್ರಾಮದ ತಾಲೂಕು ದಂಡಾಧಿಕಾರಿ ಯಾಗಿ ನಲಗೊಂದ್ ಅವರು ಅಧಿಕಾರ ಸ್ವೀಕರಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸಾಲಿಗ್ರಾಮದ ಕಂದಾಯ ಇಲಾಖೆ ಸಿಬ್ಬಂದಿಗಳಿಂದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿತ್ತು.
ನಂತರ ಮಾತನಾಡಿದ ತಾಲೂಕಿನ ಸಿಬ್ಬಂದಿಗಳು ತಾಲ್ಲೂಕು ಕಚಾರಿಯನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತಂದವರು ತಹಶೀಲ್ದಾರ್ ಪೂರ್ಣಿಮಾ ಅವರು ರಾತ್ರಿ 12.00ವರೆಗೂ ಕಡತಗಳಿಗೆ ಸಹಿ ಹಾಕುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ ಎಂದರು. ತಹಶೀಲ್ದಾರ್ ನರಗುಂದ ಹಾಗೂ ಪೂರ್ಣಿಮಾ ಅವರಿಗೆ ಮೈಸೂರಿನ ಅರಮನೆ ಸ್ತಬ್ಧ ಚಿತ್ರವನ್ನು ಕೊಡುಗೆಯಾಗಿ ನೀಡಿ ಗೌರವಿಸಲಾಗಿತ್ತು ಗೌರವಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಪತಾಶಿಲ್ದಾರ್ ಶಿವಕುಮಾರ್, ಮಹಾದೇವ್, ಸಂತೋಷ್, ತುಕಾರಾಂ ಶಶಿಕಾಂತ್ ,ಕೃಷ್ಣಮೂರ್ತಿ, ದರ್ಶನ್ ,ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಹಾಜರಾಗಿದ್ದರು.