ಸಾಲಿಗ್ರಾಮದಲ್ಲಿ ಪೌತಿ ಖಾತೆ ಆಂದೋಲನ
ಸಂಜೆವಾಣಿ ವಾರ್ತೆ
ಸಾಲಿಗ್ರಾಮ.ಫೆ 25 :-ಪೌತಿ ಖಾತೆ ಆಂದೋಲನವನ್ನು ಸಾರ್ವಜನಿಕರು ಸದ್ದುಪಯೋಗ ಪಡಿಸಿಕೊಳ್ಳಬೇಕೆಂದು ಉಪ ತಹಶೀಲ್ದಾರ್ ಸತೀಶ್ ಕುಮಾರ್ ಹೇಳಿದರು.
ಪಟ್ಟಣದ ನಾಡಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪೌತಿ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಾಲಿಗ್ರಾಮ ಹೋಬಳಿ ವ್ಯಾಪ್ತಿಯಲ್ಲಿನ ಸಾರ್ವಜನಿಕರುಗಳಿಗೆ ಅನುಕೂಲವಾಗುವಂತೆ ನಾಡಕಚೇರಿಯಲ್ಲಿ ಈ ಆಂದೋಲನವನ್ನು ಆರಂಭಿಸಲಾಗಿದೆ.
ಇದುವರೆಗೂ ಪೌತಿ ಖಾತೆ ಯನ್ನು ಮಾಡಿಸದೆ ಇರುವವರು ಸೂಕ್ತ ದಾಖಲೆಗಳನ್ನು ಒದಗಿಸಿ ಈ ಆಂದೋಲನದಲ್ಲಿ ಭಾಗವಹಿಸಿ ಖಾತೆ ಮಾಡಿಸಿ ಕೊಳ್ಳಬೇಕು. ಇದರ ಬಗ್ಗೆ ಗ್ರಾಮ ಆಡಳಿತ ಅಧಿಕಾರಿಗಳು ಅಥವಾ ನಾಡಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ಪೌತಿ ಖಾತೆಗಳನ್ನು ಮಾಡಿಸಿಕೊಳ್ಳುವ ಮೂಲಕ ಪಿಎಂ ಕಿಸಾನ್, ಬೆಳೆ ಹಾನಿ ಪರಿಹಾರ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಪೌತಿ ಖಾತೆಯ ಅರ್ಜಿಗಳನ್ನು ಸ್ವೀಕರಿಸಲಾಯಿತು. ರಾಜಸ್ವ ನಿರೀಕ್ಷಕ ಸಂತೋಷ್, ಗ್ರಾಮ ಆಡಳಿತ ಅಧಿಕಾರಿ ಶಶಿಕಾಂತ್, ನಾಡಕಚೇರಿ ಸಿಬ್ಬಂದಿ ,ರೈತರು, ಸಾರ್ವಜನಿಕರು ಹಾಜರಾಗಿದ್ದರು.