ಹಣಮಂತವಾಡಿ: ಅದ್ದೂರಿಯಾಗಿ ನಡೆದ ಸಂವಿಧಾನ ಜಾಗೃತಿ ಜಾಥಾ
ಬಸವಕಲ್ಯಾಣ:ಫೆ.25: ತಾಲ್ಲೂಕಿನ ಹಣಮಂತವಾಡಿ ಗ್ರಾಮದಲ್ಲಿ ಸರ್ವ ಧರ್ಮಿಯರು, ಇಲ್ಲಿನ ಶಾಲಾ ಮಕ್ಕಳು ಸಂವಿಧಾನ ಜಾಗೃತಿ ಜಾಥವನ್ನು ಅದ್ದೂರಿಯಾಗಿ ಬರಮಾಡಿಕೊಂಡರು, ಡೋಳ್ಳ ವಾದ್ಯಗಳೊಂದಿಗೆ ಮಹಾತ್ಮ ಗೌತಮ ಬುದ್ಧ, ವಿಶ್ವಗುರು ಅಣ್ಣ ಬಸವಣ್ಣನವರು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ತಬ್ದ ಚಿತ್ರ ಉಳ್ಳ ರಥದ ಭವ್ಯ ಮೆರವಣಿಗೆ, ನಡೆಯಿತು,
ಸಮಾಜ ಕಲ್ಯಾಣ ಅಧಿಕಾರಿ ದಿಲೀಪಕುಮಾರ ಉತ್ತಮ ಅವರು ಸಂವಿಧಾನ ಪೀಠಿಕೆ ಭೋಧಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಂಡುರೆಡ್ಡಿ ಕಮಲಾಪುರೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನರಸಮ್ಮ ಚಂದ್ರಕಾಂತ, ಉಪಾಧ್ಯಕ್ಷೆ ಅನೀತಾ ಹಣಮಂತ, ಸದಸ್ಯರಾದ ಜೀವನ ರೆಡ್ಡಿ, ಚಂದ್ರಕಾಂತ ಗೋಳಸುರೆ, ಅಶೋಕ ಗೋರ್ಟೆ, ಉಮೇಶ, ಸಾಮಾಜಿ ಅರಣ್ಯ ಇಲಾಖೆಯ ಆರ್‍ಎಫ್‍ಓ ಐಶ್ವರ್ಯ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪವನ, ಪ್ರಮುಖರಾದ ಧನರಾಜ ದೊಡ್ಡಮನಿ, ಜಗನ್ನಾಥ ಐನೂರ್, ಇದ್ದರು.