ನಾಳೆ ಕೆ.ಆರ್.ಎಸ್. ಪಕ್ಷದ ವತಿಯಿದಿಂದ ಕರ್ನಾಟಕಕ್ಕಾಗಿ ನಾವು ಜನಜಾಗೃತಿ ಬೈಕ್ ಜಾಥಾ
ಬೀದರ:ಫೆ.25:ಭ್ರಷ್ಟಾಚಾರ ಸ್ವಜನ ಪಕ್ಷಪಾತ ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ, ರಾಷ್ಟ್ರಿಯ ಪಕ್ಷಗಳಾದ ಕಾಂಗ್ರೇಸ್, ಬಿಜೆಪಿ, ಮತ್ತು ಜೆ,ಡಿ,ಎಸ್ ಪಕ್ಷಗಳನ್ನು ಚುನಾವಣೆಗಳಲ್ಲಿ ತಿರಸ್ಕರಿಸಿ ಮತ್ತು ರಾಜ್ಯದ ಏಕೈಕ ಪ್ರಾಮಾಣಿಕ ಪ್ರಾದೇಶಿಕ ಮತ್ತು ಜನಪರ ಪಕ್ಷವಾದ ಕೆ,ಆರ್,ಎಸ್, ಪಕ್ಷವನ್ನು ಬೆಂಬಲಿಸಿ ಎಂದು ರಾಜ್ಯದ ಜನರನ್ನು ಕೊರಲು ಹಾಗೂ ಸ್ವಚ್ಛ ಪ್ರಾಮಾಣಿಕ ಪ್ರಾದೇಶಿಕ ಜನಪರ ರಾಜಕಾರಣದ ಕುರಿತು ಜನ ಜಾಗೃತಿ ಮೂಡಿಸಲು ಇದೇ ತಿಂಗಳು 19/02/2024 ರಿಂದ 02/03/2024ರ ವರೆಗೆ ಕೆ,ಆರ್,ಎಸ್, ಪಕ್ಷವು “ಕರ್ನಾಟಕಕ್ಕಾಗಿ ನಾವು” ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಸುಮಾರು 3000 ಕಿ,ಮೀ, ಬೈಕ್ ಜಾಥಾ ಹಮ್ಮಿಕೊಂಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಪ್ರಾರಂಭವಾದಂತಹ, ಈ ಜಾಥಾದ ನೇತೃತ್ವವನ್ನು ಕೆ,ಆರ್,ಎಸ್, ಪಕ್ಷದ ರಾಜ್ಯಧ್ಯಕ್ಷರಾದ ಶ್ರೀ ರವಿ ಕೃಷ್ಣ ರಡ್ಡಿಯವರು ವಹಿಸಿರುತ್ತಾರೆ. ಬೈಕ್ ಜಾಥಾದ ತಂಡವನ್ನು ಬೀದರ ಜಿಲ್ಲೆಗೆ ದಿನಾಂಕ 26/02/2024 ರಂದು ಸೋಮವಾರ ಮುಂಜಾನೆ 9 ಗಂಟೆಗೆ ಡಾ|| ಬಿ.ಆರ್. ಅಂಬೇಡ್ಕರ ವೃತ ಬೀದರ. ಹತ್ತಿರ ತೋಟಗಾರಿಕೆ ಇಲಾಖೆ ಎದುರಗಡೆ ಸಾರ್ವಜನಿಕ ವೇದಿಕೆ ಕಾರ್ಯಕ್ರಮ ಕೆ,ಆರ್,ಎಸ್, ಪಕ್ಷದ ಬೀದರ ಜಿಲ್ಲಾ ಘಟಕದ ವತಿಯಿಂದ ಆಯೊಜಿಸಲಾಗಿದೆ,
ಆದ್ದರಿಂದ “ಕರ್ನಾಟಕ್ಕಾಗಿ ನಾವು” ಜನಜಾಗೃತಿ ಬೈಕ್ ಜಾಥಾದ ಸಾರ್ವಜನಿಕ ವೇದಿಕೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಮುಂದಿನ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೆ,ಆರ್,ಎಸ್, ಪಕ್ಷದ ಬೀದರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರಾದ ಹಣಮಂತ ಮಟ್ಟೆ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.