ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ನವಲಗುಂದ,ಸೆ15: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕಾ ಘಟಕದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ ಹಾಗೂ 2ಂ ಮೀಸಲಾತಿಗಾಗಿ ಹಕ್ಕೋತ್ತಾಯಿಸಿ ಪತ್ರ ಚಳುವಳಿಯು ಸ 18 ರಂದು ಬುದುವಾರ ಮುಂಜಾನೆ 11 ಗಂಟೆಗೆ ಪಟ್ಟಣದ ಹೊರವಲಯದಲ್ಲಿರುವ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಜರುಗಲಿದೆ ಎಂದು ತಾಲ್ಲೂಕಾ ಅಧ್ಯಕ್ಷ ಶಂಕರಗೌಡ ಪಾಟೀಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ಸಾನಿಧ್ಯವನ್ನು ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ವಹಿಸುವರು. ಅಂಗಾಯತ-ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರು, ಶಾಸಕರಾದ ವಿಜಯಾನಂದ ಕಾಶಪ್ಪನವರ ಉದ್ಘಾಟಿಸುವರು, ಮಾಜಿ ಶಾಸಕರಾದ ಡಾ.ಆರ್. ಬಿ. ಶಿರಿಯಣ್ಣವರ ಅಧ್ಯಕ್ಷತೆವಹಿಸುವರು
ಶಾಸಕರಾದ ಎಮ್. ಆರ್. ಪಾಟೀಲ, ಮಾಜಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಮೋಹನ ಲಿಂಬಿಕಾಯಿ 2ಂ ಮೀಸಲಾತಿ ಹೋರಾಟ ಸಮಿತಿ ಕಾರ್ಯಧ್ಯಕ್ಷ ವಿಜಯ ಕುಲಕರ್ಣಿ,ಧಾರವಾಡ ಹಾಲು ಒಕ್ಕೂಟ ನಿರ್ದೇಶಕರಾದ ಶಿವಲೀಲಾ ಕುಲಕರ್ಣಿ, ಪಂಚಮಸಾಲಿ ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ, ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಾಪುಗೌಡ ಪಾಟೀಲ , ತಾಲ್ಲೂಕಾ ಅಧ್ಯಕ್ಷ ಶಂಕರಗೌಡ ಬಾಳನಗೌಡ್ರ, ನಗರ ಅಧ್ಯಕ್ಷ ಸುರೇಶ ಕಮ್ಮಾರ, ನಿಂಗಣ್ಣ ಕರೀಕಟ್ಟಿ, ಅಡಿವೆಪ್ಪ ಮನಮಿ, ವಿಜಯಲಕ್ಷ್ಮೀ ಪಾಟೀಲ, ಶಾಂತಾದೇವಿ ನಿಡವಣಿ, ಸದುಗೌಡ ಪಾಟೀಲ, ನಾಗಪ್ಪ ಸಂಕದ, ಗುರುಶಾಂತಗೌಡ ಪಾಟೀಲ, ಮಲ್ಲಿಕಾರ್ಜುನ ಹಿರೇಕೊಪ್ಪ ಇತರರು ಭಾಗವಹಿಸುವರು ಎಂದರು.
2ಂ ಮೀಸಲಾತಿ ಹೋರಾಟ ಸಮಿತಿ ಕಾರ್ಯಧ್ಯಕ್ಷ ವಿಜಯ ಕುಲಕರ್ಣಿ, ನಾಗನಗೌಡ ಪಾಟೀಲ್, ಅಶೋಕ ಮರಕುಂಬಿ, ದ್ಯಾಮನಗೌಡ ಪಾಟೀಲ್, ಗೌರೀಶ ಕಮತರ, ಕೆ ಬಿ ಮದನೂರ, ಸುರೇಶ ಕಮ್ಮಾರ ಇತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಸಿದ್ದರು.