ದತ್ತಿ ಕಾರ್ಯಕ್ರಮ: ಉಪನ್ಯಾಸ
ಧಾರವಾಡ,ಸೆ15: ಸರ್. ಸಿದ್ಧಪ್ಪ ಕಂಬಳಿ ಅವರು ಆಗಿನ ಕಾಲದಜಾತಿಯಾಧಾರಿತ ಸಾಮಾಜಿಕತಾರತಮ್ಯವನ್ನುತೊರೆದು ಹಾಕಿ ಸಮಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ ಧೀಮಂತ ವ್ಯಕ್ತಿಎಂದು ಹಿರೇಮಲ್ಲೂರಈಶ್ವರನ್‍ಕಾಲೇಜಿನ ಪ್ರಾಧ್ಯಾಪಕಡಾ.ಈರಣ್ಣಇಂಜಗನೇರಿಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ಸರ್. ಸಿದ್ಧಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ, ಧಾರವಾಡ ಇವರ ಸಂಯುಕ್ತಆಶ್ರಯದಲ್ಲಿಆಯೋಜಿಸಿದ್ದ ಸರ್. ಸಿದ್ಧಪ್ಪ ಕಂಬಳಿ ಪ್ರತಿಷ್ಠಾನ ದತ್ತಿಕಾರ್ಯಕ್ರಮದಲ್ಲಿ `ಸರ್.ಸಿದ್ಧಪ್ಪ ಕಂಬಳಿ ಅವರ ಸಾಮಾಜಿಕ ನ್ಯಾಯ’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಶಿಕ್ಷಣ ಸಕಲ ಸಮಸ್ಯೆಗಳಿಗೆ ಸಂಜೀವಿನಿ ಎಂದು ತಿಳಿದ ಸರ್.ಸಿದ್ಧಪ್ಪ ಕಂಬಳಿ ಶಿಕ್ಷಣದಿಂದ ವಂಚಿತರಾದ ಅವಕಾಶ ಹೀನರಿಗೆಯಾವುದೇಜಾತಿಯತಾರತಮ್ಯವಿಲ್ಲದೇ ಅವಕಾಶ ಕಲ್ಪಿಸಿದ್ದರು.ಡಾ. ಬಿ. ಆರ್.ಅಂಬೇಡ್ಕರಅವರ ಕಾನೂನು ಪಾಂಡಿತ್ಯವನ್ನು ಪರಿಗಣಿಸಿ, ಮುಂಬೈ ಕಾನೂನು ಕಾಲೇಜನಲ್ಲಿಉಪನ್ಯಾಸಕ ಹುದ್ದೆ ಬದಲು ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿಕಾಲೇಜಿನಘನತೆ ಹೆಚ್ಚಿಸಿದರು.ಯಾವುದೇಜಾತಿಯವರು ಸಹಾಯ ಕೇಳಿ ಬಂದರೂಅವರನ್ನು ಎಂದಿಗೂ ಬರಿಗೈಯಲ್ಲಿ ಕಳಿಸಲಿಲ್ಲ. ಬಡತನದಲ್ಲಿ ಹುಟ್ಟಿ ಬೆಳೆದ ಅವರುತಮ್ಮ ಸಾಧನೆಯ ಬಲದಿಂದಉನ್ನತ ಮಟ್ಟಕ್ಕೇರಿ ಮುಂಬೈ ಸರ್ಕಾರದಲ್ಲಿ 7 ಇಲಾಖೆಗಳ ಮಂತ್ರಿಗಿರಿಯನ್ನು ಸಮರ್ಥವಾಗಿ ಹಾಗೂ ಕಾರ್ಯತತ್ವರತೆಯಿಂದ ನಿರ್ವಹಿಸಿದರು.
ಸರ್.ಸಿದ್ಧಪ್ಪ ಕಂಬಳಿ ಅವರುಯಾವುದೇಜಾತಿ, ಮತ, ಪ್ರದೇಶ ಮೀರಿ ಬೆಳೆದವರಾಗಿದ್ದರು.ಶಾಸನ ಸಭೆಯಲ್ಲಿಅವರುಅಧಿಕಾರವತ್ತಾಗಿ ಮಾತನಾಡ ಬಲ್ಲವರಾಗಿದ್ದರು.ಅವರ ಮಾತುಗಳಲ್ಲಿ ನಡೆ-ನುಡಿಯಲ್ಲಿಗಾಂಭಿರ್ಯಇರುತ್ತಿತ್ತು. ಸ್ವತಃ ನೆಹರು ಹಾಗೂ ಪಟೇಲರುಚುನಾವಣೆಯಲ್ಲಿಇವರನ್ನು ಸೋಲಿಸಲು ಪ್ರಚಾರ ಮಾಡಿದರೂ ಅದೀಕ ಮತ ಪಡೆದುಇತಿಹಾಸ ನಿರ್ಮಿಸಿದರು. ಇದುಅವರಜನ ಮನ್ನಣೆಗೆ ಸಾಕ್ಷಿ.ಅವರ ದಿವ್ಯ ವ್ಯಕ್ತಿತ್ವದ ಮುಂದೆಎಂಥವರಾದರೂ ಸರಿತಲೆಬಾಗಲೇಬೇಕುಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವಿ. ಕುಲಪತಿಡಾ. ಕೆ.ಬಿ. ಗುಡಸಿ ಮಾತನಾಡಿ, ಸರ್. ಸಿದ್ಧಪ್ಪ ಕಂಬಳಿ ಅವರ ಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನವಿರದಿದ್ದರೆಧಾರವಾಡ ವಿದ್ಯಾಕಾಶಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಿಯವರೆಗೆಧಾರವಾಡದಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕಕಾಲೇಜಇರುತ್ತದೆಯೋಅಲ್ಲಿಯವರೆಗೆ ಸರ್. ಕಂಬಳಿ ಅವರ ಹೆಸರುಅಜರಾಮರ.ಅವರೊಬ್ಬ ಮುತ್ಸದ್ಧಿ ರಾಜಕಾರಣಿಗಳು, ರಾಜಕಾರಣಿಗಳಿಗೆ ಮಾದರಿಎಂದರು.
ಸರ್.ಸಿದ್ಧಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯಡಾ.ಎಸ್. ಆರ್.ಮಂಜುಳಾ ಮಾತನಾಡಿದರು.
ಸರ್ ಸಿದ್ದಪ್ಪ ಕಂಬಳಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ ಮತ್ತುಕಾಲೇಜಿನ ಪ್ರಧಾನ ಕಾರ್ಯದರ್ಶಿ ಕುಮಾರಿ ಅನುಷಾ ರೆವಣ ಶಿವಪೂರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಶೈಲಜಾಅಮರಶೆಟ್ಟಿ ಸ್ವಾಗತಿಸಿದರು.ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ.ಹಿರೇಮಠ ನಿರೂಪಿಸಿದರು.ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಎಂ.ಎಂ.ಚಿಕ್ಕಮಠ, ರಾಮಚಂದ್ರಧೋಂಗಡೆ, ಕೆ.ಎಂ.ಅಂಗಡಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರಿದ್ದರು.