ಸೋಯಾಬೀನ ಮತ್ತು ಉದ್ದಿನಕಾಳು ಉತ್ಪನ್ನ ಖರೀದಿ ಆರಂಭ
ಧಾರವಾಡ,ಸೆ15: 2024-25 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‍ಗೆ ರೂ.4892 ರಂತೆ ಮತ್ತು ಉದ್ದಿನಕಾಳು ಉತ್ಪನ್ನಗಳನ್ನು ಪ್ರತಿ ಕ್ವಿಂಟಾಲ್‍ಗೆ ರೂ.7,400 ರಂತೆ ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಟಾಸ್ಕಪೆÇೀರ್ಸ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಬಲ ಬೆಲೆಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ ಉತ್ಪನ್ನವನ್ನು ಹಾಗೂ ಉದ್ದಿನಕಾಳು ಉತ್ಪನ್ನಗಳ ಮಾರಾಟಕ್ಕಾಗಿ ರೈತರಿಗೆ ನೋಂದಣಿ ಮಾಡಿಕೊಳ್ಳಲು ಸೆ. 5 ರಿಂದ ಅಕ್ಟೋಬರ್ 19 ರ (45 ದಿನಗಳ) ವರೆಗೆ ಮತ್ತು ಧಾರವಾಡ ಜಿಲ್ಲೆಯ ನೋಂದಾಯಿತ ರೈತರಿಂದ ಮಾತ್ರ ಸೆಪ್ಟೆಂಬರ 05, 2024 ರವರೆಗೆ (90 ದಿನಗಳು) ಖರೀದಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೋಯಾಬೀನ ಹಾಗೂ ಉದ್ದಿನಕಾಳು ಉತ್ಪನ್ನಗಳನ್ನು ಖರೀದಿಸಲು ಸರ್ಕಾರದಿಂದ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಮತ್ತು ನವಲಗುಂದ ತಾಲೂಕುಗಳ 13 ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೋಯಾಬೀನ್ ಖರೀದಿ ಕೇಂದ್ರಗಳ ವಿವರ: ಧಾರವಾಡ ತಾಲೂಕಿನಲ್ಲಿ ಧಾರವಾಡದ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 9916259625) ಮತ್ತು ಉಪ್ಪಿನಬೇಟಗೇರಿಯ ಪಿ.ಕೆ.ಪಿ.ಎಸ್ (ದೂ. ಸಂ: 9620048221), ಹುಬ್ಬಳ್ಳಿಯ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 6360506861) ಮತ್ತು ನೂಲ್ವಿಯ ಪಿ.ಕೆ.ಪಿ.ಎಸ್ (ದೂ. ಸಂ: 9743836535), ಕಲಘಟಗಿ ತಾಲೂಕನಲ್ಲಿ ಕಲಘಟಗಿಯ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 8722006738), ಹುಲ್ಲಂಬಿಯ ಕೃಷಿ ಜ್ಯೋತಿ ಎಫ್.ಪಿ.ಓ (ದೂ. ಸಂ: 7676236737), ಹಿರೇಹೊನ್ನಳ್ಳಿಯ ಚನ್ನಬಸವೇಶ್ವರ ಎಫ್.ಪಿ.ಓ (ದೂ. ಸಂ: 9591329847) ಹಾಗೂ ಕುಂದಗೋಳ ತಾಲೂಕಿನಲ್ಲಿ ಯರಗುಪ್ಪಿಯ ಪಿ.ಕೆ.ಪಿ.ಎಸ್ (ದೂ. ಸಂ: 9845169206) ಖರೀದಿ ಸಂಸ್ಥೆಗಳಾಗಿರುತ್ತವೆ ಎಂದು ಅವರು ತಿಳಿಸಿದ್ದಾರೆ.
ಉದ್ದಿನಕಾಳು ಖರೀದಿ ಕೇಂದ್ರಗಳ ವಿವರ: ಧಾರವಾಡ ತಾಲೂಕಿನಲ್ಲಿ ಧಾರವಾಡದ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 9916259625) ಮತ್ತು ಉಪ್ಪಿನಬೇಟಗೇರಿಯ ಪಿ.ಕೆ.ಪಿ.ಎಸ್ (ದೂ. ಸಂ: 9620048221), ಹುಬ್ಬಳ್ಳಿ ತಾಲೂಕಿನಲ್ಲಿ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 6360506861), ಕುಂದಗೋಳ ತಾಲೂಕಿನಲ್ಲಿ ಯರಗುಪ್ಪಿಯ ಪಿ.ಕೆ.ಪಿ.ಎಸ್ (ದೂ. ಸಂ: 9845169206), ನವಲಗುಂದ ತಾಲೂಕಿನಲ್ಲಿ ಅಣ್ಣಿಗೇರಿಯ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 8861008191) ಖರೀದಿ ಸಂಸ್ಥೆಗಳಾಗಿವೆ ಎಂದು ಅವರು ತಿಳಿಸಿದ್ದಾರೆ
ಹೆಚ್ಚುವರಿ ಹೆಸರುಕಾಳು ಖರೀದಿ ಕೇಂದ್ರ: ಹೆಚ್ಚುವರಿ ಖರೀದಿ ಕೇಂದ್ರಕ್ಕೆ ಬೇಡಿಕೆ ಇರುವುದರಿಂದ ಕೃಷಿ ಸಮೃದ್ದಿ ರೈತ ಉತ್ಪಾದಕರ ಕಂಪನಿ ಲಿ, ಮೊರಬ ಇವರ ಮನವಿಯನ್ನು ಪರಿಶೀಲಿಸಿ, ರೈತ ಉತ್ಪಾದಕರ ಕಂಪನಿಯು ಈ ಹಿಂದೆ ಮೊರಬ ಮತ್ತು ಶಿರಕೋಳ ಗ್ರಾಮದಲ್ಲಿ ಖರೀದಿ ಕಾರ್ಯನಿರ್ವಹಿಸಿರುವ ಅನುಭವ ಇದ್ದು, ಖರೀದಿ ಕೇಂದ್ರ ತೆರೆಯಲು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಕಂಪನಿಯು ಸದೃಡವಾಗಿರುವುದನ್ನು ದೃಢಿಕರಿಸಿ ಪ್ರಸ್ತುತ ಮೊರಬ ಗ್ರಾಮದಲ್ಲಿ ಈಗಾಗಲೇ ಪಿಕೆಪಿಎಸ್ ಮೊರಬ, ಇವರಿಗೆ ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿರುವುದರಿಂದ ಕೃಷಿ ಸಮೃದ್ದಿ ರೈತ ಉತ್ಪಾದಕರ ಕಂಪನಿ ಲಿ, ಮೊರಬ (ದೂ. ಸಂ: 9620107330) ಇವರಿಗೆ ಶಿರಕೋಳ ಗ್ರಾಮದಲ್ಲಿ ಹೆಚ್ಚುವರಿಯಾಗಿ ಹೆಸರುಕಾಳು ಖರೀದಿ ಕೇಂದ್ರ ತೆರೆದು ಕಾರ್ಯನಿರ್ವಹಿಸಲು ಟಾಸ್ಕ್ ಪೆÇರ್ಸ ಸಮಿತಿಯಿಂದ ಅನುಮತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಉತ್ಪನ್ನವನ್ನು ಖರೀದಿಸಲು ಅಗತ್ಯವಿರುವ ದಾಖಲೆಗಳು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬೀನ್ ಮತ್ತು ಉದ್ದಿನಕಾಳು ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ನೋಂದಣಿಗಾಗಿ ತಮ್ಮ ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿಯನ್ನು ಸಲ್ಲಿಸಬೇಕು. ಮತ್ತು ಸರ್ಕಾರವು ಸೂಚಿಸಿರುವ ಉತ್ಪನ್ನ ಮಾರಾಟಕ್ಕೆ ಬರುವ ಜಮೀನುಗಳ ಮಾಲೀಕರು ಬಯೋ ಮೇಟ್ರಿಕ್ ನೀಡಬೇಕು. ಮತ್ತು ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನ ಖರೀದಿಗೆ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ ಮತ್ತು ಉದ್ದಿನಕಾಳು ಉತ್ಪನ್ನವನ್ನು ಖರೀದಿಸಲು ಅನುಸರಿಸುವ ಕ್ರಮಗಳು: ರೈತರ ನೋಂದಣಿಗೆ ಕಾಲಾವಧಿಯನ್ನು ಸರ್ಕಾರದ ಆದೇಶ ಹೊರಡಿಸಿದ ದಿನಾಂಕದಿಂದ 45 ದಿನಗಳವರೆಗೆ ಹಾಗೂ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ಪ್ರತಿ ರೈತರಿಂದ ಸೋಯಾಬೀನ್ ಪ್ರತಿ ಎಕರೆಗೆ 05 ಕ್ವಿಂಟಾಲ್‍ನಂತೆ ಗರಿ?À್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿ?À್ಟ 20 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ ಮತ್ತು ಪ್ರತಿ ರೈತರಿಂದ ಉದ್ದಿನ ಕಾಳು ಪ್ರತಿ ಎಕರೆಗೆ 02 ಕ್ವಿಂಟಾಲ್‍ನಂತೆ ಗರಿ?À್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿ?À್ಟ 10 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ.