ವಿಶ್ವಕರ್ಮರು ಮೂಲ ವಿಜ್ಞಾನಿಗಳು
ಬೀದರ್:ಅ.4: ವಿಶ್ವಕರ್ಮರು ವಿಶ್ವದ ಮೂಲ ವಿಜ್ಞಾನಿಗಳು ಎಂದು ಚಿಂತಕ ಈಸಾ ಪಟೇಲ್ ನುಡಿದರು.
ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಈಚೆಗೆ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರತಿ ಕ್ಷೇತ್ರಕ್ಕೂ ವಿಶ್ವಕರ್ಮ ಸಮಾಜದವರ ಕೊಡುಗೆ ಇದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸೋಂಜಿ ಮಾತನಾಡಿ, ವಿಶ್ವಕರ್ಮ ಸಮಾಜದವರು ಕಾಯಕ ತತ್ವವನ್ನು ಪಾಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಉಪನ್ಯಾಸಕ ವಿಜಯಕುಮಾರ ಪಾಂಚಾಳ ಮಾತನಾಡಿ, ವಿಶ್ವಕರ್ಮ ಬ್ರಹ್ಮಾಂಡದ ಮೂಲ ಪುರುಷ. ಸಂಸ್ಕøತಿ, ಕಲೆ, ಕೃಷಿ, ಮೊದಲಾದ ಕ್ಷೇತ್ರಗಳಿಗೆ ವಿಶ್ವಕರ್ಮರು ನೀಡಿದ ಕೊಡುಗೆ ವರ್ಣನಾತೀತ ಎಂದು ತಿಳಿಸಿದರು.
ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಅಧ್ಯಕ್ಷ ಮಹೇಶ ಪಾಂಚಾಳ್ ಮಾತನಾಡಿ, ಸಮಾಜದ ಹಕ್ಕು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಮಾಜದವರು ಸಂಘಟಿತರಾಗಬೇಕು ಎಂದು ಹೇಳಿದರು.
ಸರ್ಕಾರಿ ಸೇವೆಯಿಂದ ನಿವೃತ್ತರಾದವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಾನಂದ ವಿಶ್ವಕರ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಮಂತ ಕಂಟೆ, ಮುಖಂಡರಾದ ಅಶೋಕ ಸೋಂಜಿ, ವಿಜಯಕುಮಾರ ಪಾಂಚಾಳ, ಬಾಬುರಾವ್ ಚಿಮಕೋಡ್, ರವೀಂದ್ರ ವಿಶ್ವಕರ್ಮ, ಸುರೇಶ ಕಣಜಿ, ರವೀಂದ್ರ ವಿಶ್ವಕರ್ಮ, ಶರಣಪ್ಪ ಕಲ್ಲಪ್ಪನೋರ್, ಧರ್ಮಣ್ಣ ಮಾಲಿಪಾಟೀಲ, ಅನಿತಾ ವಿಶ್ವಕರ್ಮ, ಗಂಗಾಧರ ವಿಶ್ವಕರ್ಮ, ಸರ್ವೇಶ್ ವಿಶ್ವಕರ್ಮ, ಶ್ರೀನಿವಾಸ್ ವಿಶ್ವಕರ್ಮ, ಮನೋಹರ ವಿಶ್ವಕರ್ಮ, ವಿಜಯಕುಮಾರ ವಿಶ್ವಕರ್ಮ, ಬಜರಂಗ ವಿಶ್ವಕರ್ಮ, ಕಾಶಿನಾಥ ಕಂಬಾರ, ಕಾಳಿದಾಸ ವಿಶ್ವಕರ್ಮ ಮತ್ತಿತರರು ಇದ್ದರು.
ಮಹಾನಂದ ವಿಶ್ವಕರ್ಮ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ವಿಜಯಕುಮಾರ ಸ್ವಾಮಿ ನಿರೂಪಿಸಿದರು.