ಆಳಂದ ಸಾರ್ವಜನಿಕ ಆಸ್ಪತ್ರೆಗೆ ಮತ್ತೊಂದ ಪ್ರಶಂಸೆ ರೋಗಿಗಳಿಗೆ ಉತ್ತಮ ಸೇವೆ ನೀಡುವಲ್ಲಿ ರಾಜ್ಯಕ್ಕೆ 3ನೇ ಸ್ಥಾನ
ಆಳಂದ:ಅ.4: ರೋಗಿಗಳಿಗೆ ಉತ್ತಮ ಸೇವೆ ಮತ್ತು ಆರೈಕೆ ನೀಡಿರುವುದರಲ್ಲಿ ನೀಡಲಾಗುವ ಖಿಔP ಖಂಓಏIಓಉ ಊಔSPIಖಿಂಐS, ಹಾಸ್ಪಿಟಲ್ ಖಚಿಟಿಞiಟಿg ನಲ್ಲಿ ಪ್ರಸಕ್ತ ಸಾಲಿನ ಮೊದಲನೇ ತೈಮಾಸಿಕದಲ್ಲಿ ಆಳಂದ ಸಾರ್ವಜನಿಕ ಆಸ್ಪತ್ರೆಯೂ ಒಟ್ಟು 147 ತಾಲೂಕು ಆಸ್ಪತ್ರೆಗಳಲ್ಲಿ ಟಾಪ್‍ರ್ಯಾಂಕಿಂಗ್ 3ನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಟ್ಟಣದ ಮಟಕಿ ರಸ್ತೆಯಲ್ಲಿರುವ ಆಳಂದ ಸಾರ್ವಜನಿಕ ಆಸ್ಪತ್ರೆ ಕಳೆದ ಮೊದಲನೇ ತ್ರೈಮಾಸಿಕ ವರದಿಯಲ್ಲಿ ರಾಜ್ಯದ 147 ತಾಲೂಕು ಆಸ್ಪತ್ರೆಗಳಲ್ಲಿ ಮೂರನೇ ಸ್ಥಾನವನ್ನು ಪಡೆದು ಪ್ರಶಂಸೆಗಳಿಗೆ ಪಾತ್ರವಾಗಿದೆ. 100 ಹಾಸಿಗೆ ಹೊಂದಿರುವ ಈ ಆಸ್ಪತ್ರೆ, ಉನ್ನತ ಮಟ್ಟದ ಸೇವೆ ನೀಡುವಲ್ಲಿ ಮುಂದಾಗಿದೆ ಮತ್ತು ಸಾರ್ವಜನಿಕರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ಹೆರಿಗೆ ಕೋಣೆ ಮತ್ತು ಶಸ್ತ್ರಚಿಕಿತ್ಸೆ ಸ್ವಚ್ಛತೆ, ಸುಚಿತ್ವ ಉತ್ತಮ ಸೌಲಭ್ಯ ಒಳಗೊಂಡ ಗುಣಮಟ್ಟತೆ ಆಧಾರದ ಮೇಲೆ ಕಳೆದ 22 ಜುಲೈ 2024ರಂದು ಲಕ್ಷ್ಯ ಪ್ರಮಾಣ ಪತ್ರವೂ ಇದೇ ಆಸ್ಪತ್ರೆಗೆ ದಕ್ಕಿದೆ. ಈಗ ಮತ್ತೊಂದು ಹೆಗ್ಗಳಿಕೆಯಾಗಿ ರಾಜ್ಯಕ್ಕೆ 3ನೇ ರ್ಯಾಂಕ್ ತಂದುಕೊಳ್ಳುವ ಮೂಲಕ ಕೀರ್ತಿ ಗಳಿಸಿದೆ.
ಇಲ್ಲಿನ ಆಳಂದ ಸಾರ್ವಜನಿಕ ಆಸ್ಪತ್ರೆಯು ವೈದಕೀಯ ಸೇವೆಯಲ್ಲಿ ಸಮರ್ಥತೆಯನ್ನು ತೋರಿಸಿದ್ದು, ಈ ಸಾಧನೆಯ ಮೂಲಕ ರಾಜ್ಯದ ಆಸ್ಪತ್ರೆಗಳಲ್ಲಿಯೇ ಪ್ರಮುಖವಾಗಿ 3ನೇ ಸ್ಥಾ£ಗಳಿಸಿಕೊಂಡಿದೆ. ಇತರ ಆಸ್ಪತ್ರೆಗಳಿಗಿಂತ ವಿಭಿನ್ನವಾಗಿ, ಗುಣಮಟ್ಟದ ಸೇವೆ, ಅಗತ್ಯ ಮೂಲಸೌಕರ್ಯಗಳು, ಮತ್ತು ತಕ್ಷಣದ ಚಿಕಿತ್ಸೆಯು ಈ ಆಸ್ಪತ್ರೆಯ ಸೇವೆಗಳ ಪ್ರಮುಖ ಅಂಶಗಳಾಗಿವೆ ಎಂದು ತಂಡವು ಪರಿಗಣಿಸಿಕೊಂಡಿದೆ.
ಆಸ್ಪತ್ರೆಯ ತಜ್ಞರು, ವೈದ್ಯಾಧಿಕಾರಿಗಳು, ಮತ್ತು ಇತರ ಸಮರ್ಥ ಅರೆ-ವೈದಕೀಯ ಸಿಬ್ಬಂದಿಯ ಶ್ರಮದಿಂದಾಗಿ ಸಾರ್ವಜನಿಕರ ಅತೀವ ವಿಶ್ವಾಸಕ್ಕೆ ಪಾತ್ರವಾಗಿರುವ ಈ ಆಸ್ಪತ್ರೆ, ಪ್ರತಿದಿನವೂ ಹೊಸ ಸೇವಾ ಮೈಲುಗಲ್ಲುಗಳನ್ನು ತಲುಪುತ್ತಿದೆ. ಸೇವೆಯಲ್ಲಿ ನಿರಂತರ ಉತ್ಕøಷ್ಟತೆ ಪ್ರದರ್ಶಿಸುತ್ತಿರುವ ಆಸ್ಪತ್ರೆಯ ಸಿಬ್ಬಂದಿ ಶ್ರಮದಿಂದಾಗಿ ಜನಸಾಮಾನ್ಯರ ಆರೋಗ್ಯ ಸುರಕ್ಷತೆಗೆ ವಿಶೇಷ ಕೊಡುಗೆ ಪರಿಗಣಿಸಿ 3ನೇ ಸ್ಥಾನ ನೀಡಿದೆ.
ಸಾಧನೆಗೆ ಸಂತಸ:
ಈ ಸಾಧನೆ ನಮ್ಮ ತಂಡದ ಒಗ್ಗಟ್ಟಿನ ಮತ್ತು ಸಮರ್ಪಿತ ಸೇವೆಯ ಪ್ರತೀಕವಾಗಿದೆ. ತಜ್ಞ ವೈದ್ಯರಿಂದ ಹಿಡಿದು ಎಲ್ಲಾ ವಿಭಾಗದ ಸಹಯೋಗದಿಂದ ಈ ಯಶಸ್ಸು ಸಾಧ್ಯವಾಯಿತು. ಭವಿಷ್ಯದಲ್ಲೂ ನಮ್ಮ ಸಂಸ್ಥೆ ನಿರಂತರ ಅಭಿವೃದ್ಧಿಗೆ ಮುಂದಾಗಲಿದೆ” ಎಂದು ಅವರು ತಿಳಿಸಿದ್ದಾರೆ.
ಡಾ. ಮಹಾಂತಪ್ಪ ಹಾಳಮಳಿ
ಆಸ್ಪತ್ರೆಯ ಆಡಳಿತ ಮುಖ್ಯವೈದ್ಯಾಧಿಕಾರಿಗಳು ಆಳಂದ.
ಆಳಂದ ಸಾರ್ವಜನಿಕ ಆಸ್ಪತ್ರೆಯು ನಮ್ಮ ಪಟ್ಟಣ ಸೇರಿ ಗ್ರಾಮೀಣಕ್ಕೆ ಆಧಾರಸ್ತಂಭವಾಗಿದೆ. ವೈದ್ಯರು ನಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇಂತಹ ಆಸ್ಪತ್ರೆಗಳು ಎಲ್ಲೆಡೆ ಇದ್ದರೆ, ಆರೋಗ್ಯ ಸೇವೆಗಳು ಮತ್ತಷ್ಟು ಸುಧಾರಿಸುವುದು ಸಾಧ್ಯವಿದೆ.