ಮಹಾಲಕ್ಷ್ಮಿ ದೇವಿಯ ತೊಟ್ಟಿಲೋತ್ಸವ
ಇಂಡಿ ;ಅ.4: ಸಮೀಪದ ಆಲಮೇಲ ಗುರುವಾರ ವಾರ ಶ್ರೀ ಮಹಾಲಕ್ಷ್ಮಿ ದೇವಿಯ ದೇವಸ್ಥಾನದಲ್ಲಿ ದೇವಿಯ ಭಕ್ತರಾದ ಶ್ರೀ ಭಾಗಪ್ಪ ಹರಿಜನ ಅವರಿಂದ ತೊಟ್ಟಿಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದ ಶ್ರೀ ಮಹಾಲಕ್ಷ್ಮಿ ದೇವಿಯ ಮೂರ್ತಿಗೆ ಬಿಲ್ವಾರ್ಚಾನೆ, ಮಹಾಭಿಷೇಕ, ಹೋಮ, ಪಂಚಾಮೃತ ಅಭಿಷೇಕ, ಮಹಾನೈವೇದ್ಯ, ಮಂಗಳಾರತಿ ಹೀಗೆ ನಾನಾ ಧಾರ್ಮಿಕ ಕಾರ್ಯಕ್ರಮ ಶ್ರೀ ಭಾಗಪ್ಪ ಹರಿಜನ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಸಂಜೆ ಮಹಿಳೆಯರು, ಶರಣರು ಭಕ್ತಾದಿಗಳು ಗ್ರಾಮಸ್ಥರು ದೇವರ ತೊಟ್ಟಿಲು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶ್ರೀ ಮಹಾಲಕ್ಷ್ಮಿ ದೇವಿಯ ಕಟ್ಟಡಕ್ಕೆ ಕಾರಣ ಕರತ್ರರಾದ ಶ್ರೀ ಭಾಗಪ್ಪ ಹರಿಜನ ಅವರು ಶ್ರೀ ಮಹಾಲಕ್ಷ್ಮಿ ದೇವಿಯ ತೊಟ್ಟಿಲು ಕಾರ್ಯಕ್ರಮವನ್ನು ಗ್ರಾಮಸ್ಥರ ಜೊತೆ ಗೂಡಿ ಗ್ರಾಮಸ್ಥರ ಒಳಿತಿಗಾಗಿ ಅತೀ ಶ್ರದ್ದಾ ಭಕ್ತಿಯಿಂದ ಆಚರಿಸಿದರು
ದೇವಸ್ಥಾನವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗಿಯೇ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯ ದೇವಸ್ಥಾನದಲ್ಲಿ ಬೆಳಿಗ್ಗೆಯೇ ತೊಟ್ಟಿಲೋತ್ಸವ ನಡೆಯಿತು. ಗ್ರಾಮಸ್ಥರು ಸುತ್ತ ಮುತ್ತಲಿನ ಹಳ್ಳಿಗಳಿಂದ, ನಗರಗಳಿಂದ ನೂರಾರು ಜನರು ಸರತಿ ಸಾಲಿನಲ್ಲಿ ನಿಂತು ಶ್ರೀ ಮಹಾಲಕ್ಷ್ಮಿ ದೇವಿಯ ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಕ್ತಿ ಭಾವ ಮೆರೆದರು
ಕೊಡುಗೈ ಧಾನಿ ಶ್ರೀ ಭಾಗಪ್ಪ ಹರಿಜನ ಅವರ ಸ್ವ ಖರ್ಚಿನಿಂದ ದೇವಸ್ಥಾನವನ್ನು ಕಟ್ಟಿಸಿ ಗ್ರಾಮಸ್ಥರ ಒಳಿತಿಗಾಗಿ ಪೂಜೆಸಲ್ಲಿಸಿ ಶ್ರೀ ಮಹಾಲಕ್ಷ್ಮಿ ದೇವಿಯ ನೈವೇದ್ಯ ಭಕ್ತಾದಿಗಳಿಗೆ ತೀರ್ಥಪ್ರಸಾದವನ್ನು ವಿತರಿಸಿ ನೂರಾರು ಜನರ ಗಮನಸೆಳೆದರು.
ಸ್ಥಳೀಯ ಪ್ರಮುಖ ರಸ್ತೆ, ವೃತ್ತ ಗ್ರಾಮದ ಬೀದಿ ಬೀದಿಗಳಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯ ಮೂರ್ತಿ, ಕುಂಭ ಕಳಸದ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ ತಾಳ-ಮೇಳಗಳೊಂದಿಗೆ ತೊಟ್ಟಿಲೋತ್ಸವ ನಡೆಯಿತು.
ಮುಖಂಡರಾದ ಶ್ರೀ ಭಾಗಪ್ಪ ಹರಿಜನ,
ಮತ್ತಿತರರು ಇದ್ದರು.
ತಾಯಿಯ ಯಲ್ಲಮನ ಕೊಡಗಳ ವಿಜೃಂಭಣೆ ನೃತ್ಯ ಮಾಡುತ್ತಾ ವಾದ್ಯ ಮೇಳಗಳ ಮುಖಾಂತರ ಊರಿನ ಬಿದಿಗಳಲ್ಲಿ ಮೇರೇವಣಿಗೆ ಮುಖಾಂತರ ಊರಿನ ಹಿರಿಯರು ಕಾರ್ಯಕ್ರಮ ನೆರೆವೇರಿಸಿದರು
ಈ ಕಾರ್ಯಕ್ರಮವನ್ನು ದೇವಿಯ ಭಕ್ತರಾಗಿ ಸೇವಕರಾಗಿ ಬಾಗಪ್ಪ ಹರಿಜನ ಮಾಹಾಲಕ್ಷ್ಮಿ ದೇವಿ ಪ್ರತಿಷ್ಠಾಪನೆ ಮಾಡಿ ಊರಿನ ಜನತಿಗೆ ಪ್ರೀತಿ ಪಾತ್ರರಾಗಿ ಜನರ ಮನಸಿನಲ್ಲಿ ಮಾಹಾಲಷ್ಮಿ ನೆಲಿಸಲು ಕಾರಣ ಭೂತರಾಗಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದರು.
ಹಲವಾರು ಕಾರ್ಯ ಕ್ರಮವನ್ನು ವಿಜೃಂಭಣೆಯಿಂದ ಹಳೆ ಊರಿನ ಗರ್ಭ್ ಗುಡಿಯಿಂದ ನಂದಿ ಮಾರ್ಗ ವಾಗಿ ಹಲವಾರು ಕಾರ್ಯಕ್ರಮ ಮಾಡುತ್ತಾ ದೇವಿ ಸ್ವರೂಪವನ್ನು ಎತ್ತಿನ ಗಾಡಿಯ ಮೂಲಕ ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ್ ಭಕ್ತರ ಸಾಲು ಸಾಲಾಗಿ ಪ್ರತಿಯೊಬ್ಬರ ಮನೆಯಿಂದ ದೇವಿಯ ಪಾದ ಪೂಜೆ ಮಾಡಿ ಕಾಯಿ ಕರ್ಪುರ ನೈವಿದ್ಯಾ ನೀಡುತ್ತಾ ತಾಯಿ ಭಕ್ತಿಗೆ ಶರಣಾಗಿ ಇಡೀ ಊರಿನ ಜನ ತಾಯಿ ಮಡಿಲ್ಲಿ ತೂಟ್ಟಿಲು ಕಾರ್ಯ ಕ್ರಮಜರಿಗಿಸಿ ಕೊಟ್ಟರು
ಬ್ಯಾಡಗಿಹಾಳ ಗ್ರಾಮದಲ್ಲಿ ನಡೆದ ಅದ್ದೂರಿ ತೊಟ್ಟಿಲು ಕಾರ್ಯಕ್ರಮ ಭಕ್ತಾದಿಗಳು ಯಶಸ್ವಿಗೊಳಿಸಿದರು. ಹರಕೆ ಹೊತ್ತ ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಕಾಯಿ ಕರ್ಪೂರ ಒಡೆದು ಭಕ್ತಿಯಿಂದ ನಮಸ್ಕರಿಸಿ ಜೀವನದಲ್ಲಿ ಶಾಂತಿ ನೆಮ್ಮದಿ ಪ್ರಾಪ್ತಿಯಾಗಲಿ ಎಂದು ಬೇಡಿಕೊಂಡರು.