ಶಿಕ್ಷಣ ಮಕ್ಕಳಲ್ಲಿ ಶ್ರದ್ಧೆ, ವಿನಯ ಕಲಿಸುತ್ತದೆ:ಭಾಗ್ಯಶ್ರೀ ಎಸ್. ಕೆ
ಕೊಲ್ಹಾರ:ಫೆ.25: ಶಿಕ್ಷಣದ ಕ್ರಾಂತಿಕಾರಿಕ ಬದಲಾವಣೆಯಿಂದ ಜಗತ್ತು ವೈಜ್ಞಾನಿಕವಾಗಿ ಶರವೇಗದಿಂದ ಮುನ್ನುಗ್ಗುತ್ತಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀಮತಿ ಭಾಗ್ಯಶ್ರೀ ಎಸ್. ಕೆ ಹೇಳಿದರು.
ಪಟ್ಟಣದ ಎ.ಹೆಚ್.ಪಿ ಶಿಕ್ಷಣ ಸಂಸ್ಥೆಯ ಸನ್ ಶೈನ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಮಕ್ಕಳಲ್ಲಿ ಶ್ರದ್ಧೆ, ವಿನಯ ಕಲಿಸುತ್ತದೆ ವಿದ್ಯಾರ್ಥಿಗಳ ನಿರಂತರ ಬೆಳವಣಿಗೆಯಲ್ಲಿ ಕಲಿಕೆ ಪ್ರಮುಖ ಪಾತ್ರ ವಹಿಸಿ ಬದುಕಿಗೆ ಬೆಳಕು ನೀಡುತ್ತದೆ ಎಂದು ಅವರು ಹೇಳಿದರು.
ಅಮಾನತ್ ಮೈನಾರಿಟಿ ಬ್ಯಾಂಕಿನ ಅಧ್ಯಕ್ಷ ಸಲೀಂ ಅತ್ತಾರ ಮಾತನಾಡುತ್ತಾ ಜಗತ್ತು ಶಿಕ್ಷಣದ ಮೂಲಕ ವೇಗವಾಗಿ ವಿಕಸಿತಗೊಳ್ಳುತ್ತಿದೆ, ಶಿಕ್ಷಣದ ಅಪಾರ ಬೆಳವಣಿಗೆಯಿಂದ ವಿಜ್ಞಾನದಲ್ಲಿ ಮಹತ್ತರ ಸಂಶೋಧನೆಗಳಾಗುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪಾಲಕರು ವಿಶೇಷ ಮುತುವರ್ಜಿ ವಹಿಸಬೇಕು ಎಂದರು.
ಸಾನಿಧ್ಯ ವಹಿಸಿದ್ದ ವಿಜಯಪುರ ಹಾಶಿಂಪೀರ್ ದರ್ಗಾದ ಡಾ. ಸೈಯ್ಯದ ಮುರ್ತುಜಾ ಹುಸೈನಿ ಗುರುಗಳು ಆಶಿರ್ವಚನ ನೀಡುತ್ತಾ ಶೈಶಾವಸ್ಥೆಯಿಂದಲೇ ಮಕ್ಕಳ ಶಿಕ್ಷಣಕ್ಕೆ ಪಾಲಕರು ವಿಶೇಷ ಒತ್ತು ನೀಡಬೇಕು ಎಂದರು. ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ತಂದೆ ತಾಯಿ ಹಿಂಜರಿಯಬಾರದು. ಪಾಲಕರು ಒಂದು ಹೊತ್ತಿನ ಊಟ ತೊರೆದಾದರು ಸರಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಕಿವಿಮಾತು ಹೇಳಿದರು.
ಅಲ್ ಹಾಜ್ ಡಾ.ಭಕ್ತಿಯಾರಖಾನ್ ಪಠಾಣ ಪೀಠಾಧಿಪತಿಗಳು ಖಾನಕಾಯೆ ಗಫಾರಿಯಾ ಕೊಲ್ದಾರ.
ಘ.ಮ.ಪು ಡಾ.ಕೈಲಾಸನಾಥ ಮಹಾಸ್ವಾಮಿಗಳು ಶೀಲವಂತ ಹಿರೇಮಠ ಕೊಲ್ಹಾರ ಸಾನಿಧ್ಯ ವಹಿಸಿದ್ದರು.
ಪ್ರಗತಿಪರ ರೈತ ಮೈನುದ್ದಿನ ಮನ್ನಾಬಾಯಿ ಜ್ಯೋತಿ ಬೆಳಗಿಸಿದರು,
ಶರೀಫಖಾನ ಪಠಾಣ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ಘಟಕ ರಾಜ್ಯ ಉಪಾಧ್ಯಕ್ಷರಾದ ಅಲ್ ಹಾಜ್ ಉಸ್ಮಾನ್ ಪಟೇಲ ಖಾನ್, ಮೋದಿನ ಪಟೇಲ ಖಾನ್, ಬಸವರಾಜ ಹುಲ್ಯಾಳ. ಅತಿಥಿಗಳಾಗಿ ಅಲ್ ಹಾಜ್ ಹಟೇಲಸಾಬ ಕಂಕರಪೀರ್, ಅಲ್ ಹಾಜ್ ಕಾಸೀಂಸಾಬ (ಬಡೇಬಾಯಿ) ಗಿರಗಾಂವಿ, ಅಲ್ ಹಾಜ್ ಐ.ಎನ್ ತಹಶೀಲ್ದಾರ್, ಅಲ್ ಹಾಜ್ ಹಸನಸಾಬ ಚೌದ್ರಿ, ಬಾಷಾಸಾಬ ಶಿರೂರ, ಅಲ್ ಹಾಜ್ ಎಸ್.ಎಸ್ ಹಕೀಂ, ನಾಸೀರ್ ದಿಂದಾರ, ಎಮ್.ಆರ್ ಕಲಾದಗಿ, ಇಕ್ಬಾಲ್ ನದಾಫ್, ಕಾಶೀಂ ವಾಲಿಕಾರ ಹಾಗೂ ಅನೇಕರು ಉಪಸ್ಥಿತರಿದ್ದರು.ಅಲ್ ಹಾಜ್ ಅಯ್ಯೂಬ್ ಖಾನ್ ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.ದಾದಾಪೀರ ವಾಲಿಕಾರ ನಿರೂಪಿಸಿದರು.ಖುದಾದಖಾನ್ ಪಠಾಣ ವಂದಿಸಿದರು