ರಾಷ್ಟ್ರದ ಅಭಿವೃದ್ಧಿಗೆ ಮುದ್ರಣದ ಕೊಡುಗೆ ಅನನ್ಯ
ಕಲಬುರಗಿ:ಫೆ.24:ಐತಿಹಾಸಿಕ, ಭೌಗೋಳಿಕೆ, ಸಾಹಿತ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ವಿಷಯ, ಮಾಹಿತಿ ದೊರೆಯಬೇಕಾದರೆ ಪುಸ್ತಕಗಳ ಅಧ್ಯಯನ ಅಗತ್ಯ. ದೇಶದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಒದಗಿಸಿ, ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲು ಸೂಕ್ತ ಮಾಹಿತಿ ಅಗತ್ಯವಾಗಿದೆ. ಮುದ್ರಣ ಶಾಶ್ವತ ದಾಖಲೆಯಾಗಿದ್ದು, ರಾಷ್ಟ್ರದ ಅಭಿವೃದ್ಧಿಗೆ ಅನನ್ಯವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಸುಪರ ಮಾರ್ಕೆಟ್‍ನ ‘ನ್ಯೂ ಸಪ್ತಗಿರಿ ಫಂಕ್ಸನ್ ಹಾಲ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮುದ್ರಕರ ದಿನಾಚರಣೆ : ಮುದ್ರಣ ಯಂತ್ರದ ಜನಕ ಜೋಹಾನ್ಸ್ ಗುಟೆನಬರ್ಗ್ ಸ್ಮರಣೆ ಮತ್ತು ‘ಗುಟೆನಬರ್ಗ್ ಉತ್ತಮ ಮುದ್ರಕರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಗುಟೆನಬರ್ಗ್ ಉತ್ತಮ ಮುದ್ರಕರ ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಎಸ್.ಡಿ.ಮಠಪತಿ ಪ್ರಿಂಟರ್ಸ್‍ನ ಶ್ರೀಶೈಲ ಡಿ.ಮಠಪತಿ ಮತ್ತು ಈಶ್ವರ ಪ್ರಿಂಟರ್ಸ್‍ನ ಶರಣಬಸಪ್ಪ ಅರ್ಜುಣಗಿ, ಹಿಂದಿನ ಕಾಲದಲ್ಲಿ ಮುದ್ರಣ ಕಾರ್ಯ ಬಹಳ ಕಷ್ಟಕರವಾಗಿತ್ತು. ಪ್ರತಿಯೊಂದು ಅಕ್ಷರ ಜೋಡಿಸಿ ಮುದ್ರಣ ಮಾಡಲು ಸಾಕ್ಷಷ್ಟು ಸಮಯ, ತಾಳ್ಮೆ, ಪರಿಶ್ರಮ ಬೇಕಾಗುತ್ತಿತ್ತು. ಆದರೆ ಈಗ ಕಂಪ್ಯೂಟರ ವ್ಯಾಪಕ ಬಳಕೆ, ಡಿಜಿಟಲ್ ಕ್ರಾಂತಿಯಿಂದಾಗಿ ಮುದ್ರಣಕಾರ್ಯ ಸರಳ ಮತ್ತು ವೇಗವಾಗಿದೆ. ಪ್ರಸ್ತುತ ಸಂದರ್ಭಗಳಲ್ಲಿ ಇದು ಅನಿವಾರ್ಯ ಕೂಡಾ ಹೌದು.ಮುದ್ರಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವ ಬಳಗದ ಸೇವೆ ಅಮೋಘವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸಿದ್ದರಾಮ ತಳವಾರ, ಮಹಾನಂದ ಡಿ.ಮಠಪತಿ, ಭಾಗ್ರಶ್ರೀ ಎಸ್.ಮಠಪತಿ, ಮಲ್ಲಿಕಾರ್ಜು ಸಗರ, ಶ್ರೀಮಂತ ಯಾದವ, ಹಣಮಂತ ಟಕ್ಕಳಕಿ, ಮಲ್ಲಿಕಾರ್ಜುನ ಪೊಲೀಸ್ ಬಿರಾದಾರ, ಅಂಬರೀಶ್ ಉದ್ದನ್, ಶಿವಶಂಕರಯ್ಯ ಮಠಪತಿ ಸೇರಿದಂತೆ ಮತ್ತಿತರರಿದ್ದರು.