ಬೀಳ್ಕೊಡುಗೆ ಸಮಾರಂಭ
ಹುಬ್ಬಳ್ಳಿ, ಸೆ 15: ಸನಾ ಶಿಕ್ಷಣ ಸಂಸ್ಥೆಯಲ್ಲಿ ಬಿ.ಇಡಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅಥಿತಿಗಳಾಗಿ ಪ್ರೊ.ಎ.ಎಂ.ಖಾನ್ ಹಿರಿಯ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು ಎಲೆಕ್ಟ್ರಾನಿಕ್ಸ ವಿಭಾಗ ಮಂಗಳೂರು ವಿಶ್ವವಿದ್ಯಾಲಯ ಆಗಮಿಸಿದ್ದರು.
ಗೌರವಾನ್ವಿತ ಅತಿಥಿಗಳಾಗಿ ಡಾ. ಪೂರ್ಣಿಮಾ ಮುಕ್ಕುಂಡಿ ಉಪನ್ಯಾಸಕರು ರಾಜ್ಯ ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಎಸ್.ಐ.ಎಸ್.ಎಲ್.ಇ.ಪಿ) ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ.ಎಂ.ಮಳಗಿಯವರು ವಹಿಸಿದ್ದರು.
ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿ.ಇಡಿ ಪದವಿಯಲ್ಲಿ 4ನೇ ರ್ಯಾಂಕ ಪಡೆದ ಶ್ರಿಮತಿ. ಆರಿಫಾ ದರೂರರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾದ ಪ್ರೊ. ಎ.ಎಂ.ಖಾನ್ ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲತೆ, ನೈತಿಕತೆ, ಕೌಶಲ್ಯಗಳನ್ನು ಹೊಂದಿದಾಗ ಮಾತ್ರ ಯಶಸನ್ನು ಪಡೆಯಲಿಕ್ಕೆ ಸಾದ್ಯವಾಗುತ್ತದೆ ಹಾಗೂ ತಂತ್ರಜ್ಞಾನ ಬಳಸುವ ಮೂಲಕ ಉತ್ತಮ ಶಿಕ್ಷಕರಾಗಿ ಹೂರಹೊಮ್ಮಬೇಕೆಂದು ಹೇಳಿದರು.
ಗೌರವಾನ್ವಿತ ಅತಿಥಿಗಳಾದ ಡಾ. ಪೂರ್ಣಿಮಾ ಮುಕ್ಕುಂಡಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ನೈತಿಕ ನಾಯಕತ್ವದ ಮನೊಭಾವನೆಯನ್ನು ಬೆಳೆಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷರಾದ ಎಂ.ಎಂ.ಮಳಗಿಯವರು ಮಾತನಾಡಿ ಶಿಕ್ಷಕ ಕಲಿಸಲು ಉತ್ಸುಕನಾಗಿರಬೇಕು ಹಾಗೂ ಪ್ರಾಮಾಣಿಕವಾಗಿ ನಿರಂತರ ಪರಿಶ್ರಮ ಪಟ್ಟಾಗ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಸಾದ್ಯವಾಗುತ್ತದೆ ಎಂದು ಹೇಳಿದರು.
ಸಮಾರಂಭದ ಮ್ಯಾನೇಜಿಂಗ ಟ್ರಸ್ಟಿ ಅಶ್ರಫಅಲಿ ಭಶೀರ ಅಹ್ಮದರವರು ಮಾತನಾಡಿ ಪ್ರಶಿಕ್ಷಣಾರ್ಥಿಗಳು ಉತ್ತಮ ಶಿಕ್ಷಕರಾಗಿ ಸಮಾಜಕ್ಕೆ ಉತ್ತಮ ಕೂಡುಗೆಯನ್ನು ಕೊಡಬೇಕೆಂದು ಹೇಳಿದರು.
ದ್ವಿತಿಯ ವರ್ಷದ ಪ್ರಶಿಕ್ಷರ್ಣಾಗಳಾದ ಸುನೀಲ ಮಾಳಗಿ ಹಾಗೂ ರೈಸಾ ಬಳ್ಳಾರಿ ತಮ್ಮ ಕಲಿಕಾ ಅನುಭವಗಳನ್ನು ಹಂಚಿಕೊಂಡರು.
ಬಿ.ಇ.ಡಿ ಕಾಲೇಜಿನ ಪ್ರಾಚಾರ್ಯರಾದ ಡಾ. ಆರ್.ಎಸ್. ಪಟಗೆಯವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು. ಕಾರ್ಯಕ್ರಮದಲ್ಲಿ ಸನಾ ಶಾಹೀನ್ ಮ್ಯಾನೆಜೀಂಗ ಟ್ರಸ್ಟಿಯಾದ ಅಶ್ರಫಅಲಿ ಭಶೀರಅಹ್ಮದ ಕಾರ್ಯನಿರ್ವಾಹಕ ಟ್ರಸ್ಟಿಗಳಾದ ಖಾಲೀದ ಎಮ್. ಮಳಗಿ, ಮೊಹಮ್ಮದ ಅಯುಬ್ ಸವಣೂರ, ಮೊಹಮ್ಮದ ತಾರೀಖ್ ಮುಜಾಹೀದ್ ಆಡಳಿತ ಅಧಿಕಾರಿ ಶ್ರೀಮತಿ ಅಂಜುಮ ಖಾನ್ ಹಾಗೂ ವಿದ್ಯಾರ್ಥಿ ಕಾರ್ಯದರ್ಶಿ ಡಾ. ಸರಳಾ ಬುಲ್ಲೇಡು ಬೊಧಕ ಮತ್ತು ಬೊಧಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ನಿರೂಪಣೆಯನ್ನು ತಸನೀಮ್ ಭೈರಡಕರ್ ನೆರವೇರಿಸಿದರು.