ಮತಕ್ಷೇತ್ರದ ಮತದಾರ ಪ್ರಭುಗಳ ಸಮಸ್ಯೆಗಳನ್ನು ಪರಿಹರಿಸುವುದೇ ನಮ್ಮ ಆದ್ಯ ಕರ್ತವ್ಯ; ಅರುಣಕುಮಾರ ಎಂ. ವೈ.ಪಾಟೀಲ
ಅಫಜಲಪುರ ;ಸೆ.15: ತಾಲ್ಲೂಕಿನ ಸಮಸ್ತ ಮತಬಾಂಧವರು ತಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದರ ಮೂಲಕ ನಿಮ್ಮ ಸೇವೆ ಮಾಡಲು ಹಗಲು ರಾತ್ರಿ ಶ್ರಮಿಸುವೆ ಎಂದು ಮಾಜಿ ಜಿ.ಪಂ.ಸದಸ್ಯರು ಹಾಗೂ ಹೆಚ್ಕೆಸಿಸಿಇ ನಿರ್ದೇಶಕರಾದ ಅರುಣಕುಮಾರ ಎಂ. ವೈ. ಪಾಟೀಲ ಅವರು ಮತದಾರರಲ್ಲಿ ಮನವಿ ಮಾಡಿದರು.
ಕ್ಷೇತ್ರದ ಮತದಾರರು ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ನಮ್ಮ ಬಳಿ ಬರುವವರು ಹಾರ, ಶಾಲು ತೆಗೆದುಕೊಂಡು ಬಂದು ವ್ಯರ್ಥ ಹಣ ಕರ್ಚು ಮಾಡುತ್ತಿರುವುದು ಸರಿಯಲ್ಲ. ನಿಮ್ಮ ಸಮಸ್ಯೆಗಳನ್ನು ಪರಿಹರಿಸುವುದು ನನ್ನ ಜವಾಬ್ದಾರಿ. ಅದಕ್ಕಾಗಿ ಮುಂದಿನ ದಿನಗಳಲ್ಲಿ ನಿಮ್ಮ ಊರು, ವಯಕ್ತಿಕ ಹಾಗೂ ಮಕ್ಕಳ ಶಿಕ್ಷಣ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಕೊಂಡು ಬರಬೇಕು ಎಂದು ಎಲ್ಲರಿಗೂ ತಿಳಿಸಿದರು.
ನಿಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸುವುದರಿಂದ ಸಿಗುವ ಖುಷಿ ಎಲ್ಲದಕ್ಕಿಂತ ಮಿಗಿಲಾದದ್ದು ಎಂದು ಅಫಜಲಪುರ ತಾಲ್ಲೂಕಿನ ಎಲ್ಲಾ ಮತದಾರರಿಗೆ ತಿಳಿಸುವ ಮೂಲಕ ಬದಲಾವಣೆಗೆ ನಾಂದಿ ಹಾಡಿದರು.
ಕಲಬುರಗಿ ನಗರದ ಮನೆಯ ದ್ವಾರಬಾಗಿಲಲ್ಲಿ “ಮನವಿ ” ಪತ್ರ ಅಂಟಿಸಿರುವುದು ವಿಶೇಷತೆ ಕಾಣಬಹುದು.