ರಕ್ತದಾನ ಶಿಬಿರ
ಲಕ್ಷ್ಮೇಶ್ವರ,ಸೆ15: ತಾಲೂಕಿನ ಸೂರಣಗಿ ಗ್ರಾಮದ ಶ್ರೀ ನವಚೇತನ ಯುವಕ ಮಂಡಳದ 20ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಟನೆಯ ವರ್ಷದ ರಕ್ತದಾನ ಶಿಬಿರ ಜರುಗಿತು.
ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾಕ್ಟರ್ ಬಿಜೆ ಅಂಗಡಿಯವರು, ಎಲ್ಲ ದಾನಗಳಿಗಿಂತ ರಕ್ತದಾನ ಅತ್ಯಂತ ಶ್ರೇಷ್ಠವಾಗಿದ್ದು ಒಂದು ಜೀವವನ್ನು ಉಳಿಸಲು ರಕ್ತ ಅವಶ್ಯವಾಗಿರುತ್ತದೆ ಅಪಘಾತ ಮುಂತಾದ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಬೇಕಾಗುವ ರಕ್ತವನ್ನು ಎಲ್ಲಿಂದಲೂ ತರಲು ಸಾಧ್ಯವಿಲ್ಲ ಆದರೆ ಯುವಕರು ಪ್ರತಿ ವರ್ಷ ತಮ್ಮ ಕಾರ್ಯಕ್ರಮದಲ್ಲಿ ಇಂತಹ ವಿದಾಯಕವಾದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಅತ್ಯಂತ ಪ್ರಶಂಸನೀಯ ಎಂದರು.
ರಕ್ತದಾನ ಶಿಬಿರದಲ್ಲಿ 36ಕ್ಕೂ ಹೆಚ್ಚು ಯುವಕರು ಆಶಾ ಕಾರ್ಯಕರ್ತೆಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೆನ್ನಮ್ಮ ಕಳ್ಳಿಹಾಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕ ಪಂಚಾಯಿತಿ ಮಾಜಿ ಸದಸ್ಯ ಕೋಟೆಪ್ಪ ವರ್ದಿ, ಡಾ. ಎನ್. ವಿ . ಹೆಬಸೂರ, ದೀಪಾ ಕಾಶಿ, ಕೂವಿ ರಾಘವೇಂದ್ರ ಗುತ್ಯಮ್ಮನವರ, ಕುಮಾರ್ ಬೆಟಗೇರಿ, ಸಚಿನ್ ಮೇಲ್ಮುರಿ, ಕೃಷ್ಣ ಲಮಾಣಿ ಸೇರಿದಂತೆ ಗದಗ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ಎಸ್ ಪಾಟೀಲ್, ಡಾ. ದಿವ್ಯ ಡಾಕ್ಟರ್, ಮಂಜುನಾಥ್ ಗುಡಿಮನಿ ಸೇರಿದಂತೆ ನವಚೇತನ ಯುವಕ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು ಭಾಗವಹಿಸಿದ್ದರು. ಬಸವರಾಜು ದುರ್ಗದ, ಶರಣಪ್ಪ ಮಾಸ್ತಮ್ಮನವರ, ನಾಗರಾಜ್ ನಿರ್ವಹಿಸಿದರು.