ಕ್ರೀಡಾಕೂಟ; ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕನಕಪುರ ಪ್ರೌಢ ಶಾಲೆ
ಚಿಂಚೋಳಿ,ಸೆ.15- ತಾಲ್ಲೂಕಿನ ಹೊರವಲಯದಲ್ಲಿರುವ ಪೆÇೀಲಕಪಳ್ಳಿ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕನಕಪುರದ ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ತಂಡವು ಕಬ್ಬಡ್ಡಿ ಕ್ರೀಡೆಯಲ್ಲಿ ಜಯಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಶಾಲೆಯ ದೈಹಿಕ ಶಿಕ್ಷಕ ಕುಪೇಂದ್ರ ಗೌನಳ್ಳಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಲಕಿಯರ ಈ ಸಾಧನೆಗೆ ಶಾಲೆಯ ಮುಖ್ಯಗುರುಗಳಾದ ಮನೋಹರ ರಟಕಲ್ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದ್ದಲ್ಲದೆ, ಗ್ರಾಮದ ಯುವ ಶಿಕ್ಷಣ ಪ್ರೇಮಿಗಳಾದ ಪ್ರವೀಣ ಮೇತ್ರಿ ಕನಕಪುರ ಮಾತನಾಡಿ,ಬಾಲಕಿಯರ ಈ ಸಾಧನೆ ಕೇವಲ ಶಾಲೆಗಷ್ಟೇ ಅಲ್ಲದೆ, ಇಡೀ ಗ್ರಾಮಕ್ಕೆ ಕೀರ್ತಿ ತಂದಿದ್ದು ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು. ಈ ಸಂದರ್ಭದಲ್ಲಿ ಶಂಭುಲಿಂಗ ವಗ್ಗಿ, ತಿಪ್ಪಣ್ಣ ಭಾಗನ ಮುಂತಾದವರು ಉಪಸ್ಥಿತರಿದ್ದರು.