ಸುಂಟನೂರು ಶಾಸ್ತ್ರಿಗಳಿಗೆ ಕಲ್ಯಾಣ ನಾಡಿನ ಪುರಾಣ ಪ್ರವಚನ ರತ್ನ ಪ್ರಶಸ್ತಿ
ಕಲಬುರಗಿ,ಸೆ.15-ಜಿಲ್ಲೆಯ ಆಳಂದ ಪಟ್ಟಣದ ಸಿದ್ದಲಿಂಗ ಸಂಸ್ಥಾನ ಹಿರೇಮಠದ ವತಿಯಿಂದ ಲಿಂ.ಸಿದ್ದಲಿಂಗ ಶಿವಾಚಾರ್ಯ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆದ ಶಿವಾನುಭವ ಚಿಂತನ ಗೋಷ್ಠಿ ಹಾಗೂ ಧರ್ಮ ಸಭೆ ಕಾರ್ಯಕ್ರಮದಲ್ಲಿ ನಾಡಿನ ಯುವ ವಾಗ್ಮಿಗಳು ಪುರಾಣ ಪ್ರವಚನ ಕೀರ್ತನಕಾರರಾದ ಸುಂಟನೂರ ಸಂಸ್ಥಾನ ಹಿರೇಮಠದ ಪಂ.ಬಂಡಯ್ಯ ಶಾಸ್ತ್ರಿಗಳಿಗೆ “ಕಲ್ಯಾಣ ನಾಡಿನ ಪುರಾಣ ಪ್ರವಚನ ಪಂಡಿತರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪಡಸಾವಳಗಿ ಸಂಸ್ಥಾನ ಹಿರೇಮಠದ ಶಂಭುಲಿಂಗ ಶಿವಾಚಾರ್ಯರು, ಅಕ್ಕಲಕೋಟ ವಿರಕ್ತಮಠದ ಬಸವಲಿಂಗ ಮಹಾಸ್ವಾಮಿಗಳು, ಆಳಂದ ಹಿರೇಮಠದ ಒಡೆಯರಾದ ಸಿದ್ದೇಶ್ವರ ಶಿವಾಚಾರ್ಯರು, ನರೋಣ ವಿರಕ್ತಮಠದ ಗುರು ಮಹಾಂತ ಮಹಾಸ್ವಾಮಿಗಳು, ಹೊದಲೂರ ವಿರಕ್ತಮಠದ ವೃಷಭಲಿಂಗ ಮಹಾಸ್ವಾಮಿಗಳು, ಆಳಂದನ ಶರಣ ಮಂಟಪದ ಚನ್ನಬಸವ ಪಟ್ಟದೇವರು ವಹಿಸಿದ್ದರು.
ಕಲಾವಿದರಾದ ಶಾಂತಕುಮಾರ ಗವಾಯಿಗಳು ಸಾವಳಗಿ, ತಬಲಾ ವಾದಕರಾದ ಶರಣು ಹೂಗಾರ್ ದೇಸಾಯಿ ಕಲ್ಲೂರ ಹಾಗೂ ಶ್ರೀಮಠದ ಅನೇಕ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.