ಭೀಮಾತೀರದಲ್ಲಿ ಯುವಕನ ಬರ್ಬರ ಹತ್ಯೆ
ವಿಜಯಪುರ,ಸೆ.15: ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಭೀಮಾತೀರದ ಇಂಡಿ ತಾಲೂಕಿನ ಅಗರಖೇಡ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಇಂಡಿಯ ಇಂಗಳಗಿ ತಾಂಡಾ ಸಂಕೇತ ಚವ್ಹಾಣ (16) ಹತ್ಯೆಯಾದ ಯುವಕ.
ಸಂಕೇತ ಚವ್ಹಾಣ ಈತನಿಗೆ ನಾಲ್ವರು ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದು, ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ.
ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ, ಪರಿಶೀಲಿಸಿದರು.
ಇಂಡಿ ಶಹರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.