ಹಿಂದೂ ಧರ್ಮ ರಕ್ಷಣೆಯಲ್ಲಿ ತಾಯಿಯ ಪಾತ್ರ ಮಹತ್ವದ್ದು:ಕೂಚಬಾಳ
ತಾಳಿಕೋಟೆ:ಸೆ.15: ತಾಯಿ ಜೀಜಾಮಾತೆಯ ವರಪುತ್ರನಾಗಿ ಜನಿಸಿದ ಛತ್ರಪತಿ ಶಿವಾಜಿ ಮಹಾರಾಜರು ತಾಯಿಯ ಪ್ರೇರಣಾ ಶಕ್ತಿಯಿಂದ ಸನಾತನ ಧರ್ಮ ಉಳಿಯಬೇಕು ವಿಶ್ವದಲ್ಲಿಯೇ ಹಿಂದೂ ಧರ್ಮ ಉಳಿಯುವದರ ಜೊತೆಗೆ ಶ್ರೇಷ್ಠತೆ ಪಡೆಯಬೇಕೆಂಬ ಸದ್ದಿಚ್ಚೆಯೊಂದಿಗೆ ಸ್ಥಾಪಿಸಿದ ಹಿಂದೂ ಸಾಮ್ರಾಜ್ಯವನ್ನು ಎಲ್ಲರೂ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.
ಶುಕ್ರವಾರರಂದು ಪಟ್ಟಣದ ತಿಲಕ ರಸ್ತೆಯ ಹಿಂದೂ ಮಹಾ ಗಣಪತಿ ಮಂಡಳಿಯವರ ವತಿಯಿಂದ ವಿರಕ್ತಶ್ರೀ ವೇದಿಕೆಯಲ್ಲಿ ಆಯೋಜಿಸಲಾದ ಭಾರತ ಮಾತೆಯ ಪೂಜಾ ಕಾರ್ಯಕ್ರಮ ಹಾಗೂ ಮಾತೆಯರಿಗೆ ಉಡಿತುಂಬುವ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ತಾಯಿ ಜೀಜಾಮಾತೆಯ ನೆಚ್ಚಿನ ಪುತ್ರರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರು ತಾಯಿಯ ಪ್ರೇರಣಾ ಶಕ್ತಿಯನ್ನು ಸಂಪೂರ್ಣವಾಗಿ ಜೀವನದಲ್ಲಿ ಅಳವಡಿಸಿಕೊಂಡು ಸಾಗಿದ್ದರು, ತಾಯಿ ಜೀಜಾಮಾತೆ ಶಿವಾಜಿ ಮಹಾರಾಜರಿಗೆ ಯಾವತ್ತಿಗೂ ಹೆದರುವ ಮಾತುಗಳನ್ನು ಹೇಳಲಿಲ್ಲಾ ಪ್ರತಿ ಹಂತದಲ್ಲಿಯೂ ದೈರ್ಯದ ಮಾತುಗಳು ಧರ್ಮ ರಕ್ಷಣೆಯ ಮಾತುಗಳು ತುಂಬುತ್ತಾ ಸಾಗಿದ್ದಳು ಇದರ ಪರಿಣಾಮವಾಗಿ ಹಿಂದೂ ಸಾಮ್ರಾಜ್ಯವನ್ನು ಕಟ್ಟಲು ಶಿವಾಜಿ ಮಹಾರಾಜರಿಗೆ ಸಾಧ್ಯವಾಯಿತು ಎಂದು ಹೇಳಿದ ಅವರು ಈಗೀನ ತಾಯಂದಿರರು ಕೇವಲ ದಾರವಾಹಿಯ ಮಹಿಮೆಗಳಿಗೆ ವಾಲುತ್ತಾ ಮಕ್ಕಳು ಏನು ಮಾಡುತ್ತಿದ್ದಾರೆಂಬುದರ ಕಡೆಗೆ ಲಕ್ಷ ಕೊಡುತ್ತಿಲ್ಲಾ ಕೇವಲ ದೈನಂದಿನ ಕೆಲಸಗಳಲ್ಲಿ ಮಕ್ಕಳಿಗೆ ಕಾನ್ವೇಂಟ್ ಸ್ಕೂಲಿಗೆ ಹಚ್ಚಿದ್ದೇವೆಂದು ಹೆಮ್ಮೆಯಿಂದ ಹೇಳುತ್ತಾ ಸಾಗಿರುವದನ್ನು ನಾವು ನೋಡುತ್ತಿದ್ದೇವೆ ಆದರೆ ನಮ್ಮ ಮಕ್ಕಳ ನಮ್ಮ ಸನಾತನ ಧರ್ಮದ ಹಾದಿಯಲ್ಲಿ ಮತ್ತು ಸಂಸ್ಕøತಿಯ ದಾರಿಯಲ್ಲಿ ಸಾಗುತ್ತಿದ್ದಾರೋ ಇಲ್ಲಾ ಲಕ್ಷ ಕೊಡುತ್ತಿಲ್ಲಾ ಮಕ್ಕಳಿಗೆ ತಾಯಿಯೇ ಮೊದಲನೇ ಗುರುವಾಗಿ ನಮ್ಮ ಸಂಸ್ಕøತಿಯನ್ನು ಬಿತ್ತುವಂತಹ ಕಾರ್ಯ ಮಾಡಬೇಕು ನಮ್ಮ ಧರ್ಮ ಸಂಸ್ಕøತಿಯ ದಾರಿಯಲ್ಲಿ ಬೆಳೆಸುವಂತಹ ಕಾರ್ಯ ಮಾಡಬೇಕು ಇದರಿಂದ ದೇಶ ರಕ್ಷಣೆಯ ಜೊತೆಗೆ ಧರ್ಮ ರಕ್ಷಣೆಗೆ ಒಳ್ಳೆಯ ಪ್ರಜೆಯನ್ನಾಗಿ ನಿರ್ಮಾಣ ಮಾಡಿದ ಕೀರ್ತಿ ತಾಯಿಗೆ ಸಲ್ಲುತ್ತದೆ ಈ ದಿಸೆಯಲ್ಲಿ ತಾಯಂದಿರರು ಮಕ್ಕಳನ್ನು ಸರಿದಾರಿಯಲ್ಲಿ ಕೊಂಡೊಯುವಂತಹ ಕೆಲಸದ ಕಡೆಗೆ ಲಕ್ಷ ವಹಿಸಬೇಕೆಂದರು. ಇನ್ನೋರ್ವ ಮುಖ್ಯ ವಕ್ತಾರರಾಗಿ ಆಗಮಿಸಿದ ರಾಷ್ಟ್ರೀಯ ಸೇವಿಕಾ ಸಮಿತಿಯ ಜಿಲ್ಲಾ ಸಂಪರ್ಕ ಪ್ರಮುಖರಾದ ಶ್ರೀಮತಿ ಸುನೀತಾರಾಣಿ ಪಾಟೀಲ ಅವರು ಮಾತನಾಡಿ ಹಿಂದೂ ಧರ್ಮವೆನ್ನುವದು ಈಗ ವಾಡಿಕೆಯಿಂದ ಬಂದಿದಲ್ಲಾ ಸನಾತನವಾಗಿ ಹುಟ್ಟಿ ಬೆಳೆದು ಬಂದಿದ್ದಾಗಿದೆ ದೇವರ ಮೇಲೆ ಭಕ್ತಿ ಎಂಬುದು ಎಲ್ಲರಲ್ಲಿ ಬರಬೇಕು ಧರ್ಮ ರಕ್ಷಣಾರ್ಥವಾಗಿ ಎಲ್ಲರೂ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶ ದೊಂದಿಗೆ ಹಿಂದೂ ಮಹಾ ಗಣಪತಿ ಮಂಡಳಿಯ ವತಿಯಿಂದ ಪ್ರತಿ ವರ್ಷವೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ತಿಳಿ ಹೇಳುವಂತಹ ಕಾರ್ಯ ಮಾಡುತ್ತಾ ಸಾಗಲಾಗಿದ್ದು ಧರ್ಮದ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿ ವಿಶ್ವ ಗುರು ಭಾರತದಡೆಗೆ ಸಾಗಬೇಕೆಂದರು.
ಸಾನಿದ್ಯ ವಹಿಸಿದ ಹಿಂದೂ ಮಹಾ ಗಣಪತಿಯ ಗೌರವ ಉಪಾಧ್ಯಕ್ಷರಾದ ಕೆಸರಟ್ಟಿಯ ಶ್ರೀ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು, ಗೌರವ ಕಾರ್ಯದರ್ಶಿ ವೇ.ಸಂತೋಷಬಟ್ ಜೋಶಿ, ಹಾಗೂ ಶ್ರೀ ಷ.ಬ್ರ.ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು.
ಇದೇ ಸಮಯದಲ್ಲಿ ಗಣ್ಯರಿಗೆ ವಿವಿಧ ಸಮಾಜದ ಮುಖಂಡರುಗಳಿಗೆ, ವಿವಿಧ ಸ್ಪರ್ದೆಯಲ್ಲಿ ವಿಜೇತರಾದ ಹಿಂದೂ ಮಹಾ ಗಣಪತಿ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ನಂತರ ಮಾತೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಸಲಾಯಿತು. ಈ ಪೂಜಾ ಕಾರ್ಯಕ್ರಮದ ನೇತೃತ್ವವನ್ನು ವೇ.ಸಂತೋಶಬಟ್ ಜೋಶಿ ಅವರು ನೇರವೇರಿಸಿದರು.
ರಾಘವೇಂದ್ರ ವಿಜಾಪೂರ ಪ್ರಾಸ್ಥಾವಿಕ ಮಾತನಾಡಿದರು.
ಕುಮಾರಿ ತೇಜಸ್ವೀನಿ ಡಿಸಲೆ ನಿರೂಪಿಸಿದರು. ಕಾಶಿನಾಥ ಅರಳಿಚಂಡಿ ವಂದಿಸಿದರು.