ದರ್ಶನ್ ಗೆ ಬಂತು ಹನಮಂತನ ಬುಕ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.15:  ಅಪರಿಚಿತರು ಪೋಸ್ಟ್ ಮೂಲಕ ಬಳ್ಳಾರಿ ಜೈಲಿನಲ್ಲಿರುವ ನಟ  ದರ್ಶನ್ ಗೆ “ಹನುಮ ನಾಮ” ಮತ್ತು ಕತೆಯ ಪುಸ್ತಕ ಬಂದಿವೆ.
ಅಪರಿಚಿತರಿಂದ ಪಾರ್ಸ್ ಲ್ ಆಗಿದ್ದರಿಂದ ಜೈಲಿನ ಸಿಬ್ಬಂದಿ ತೆಗೆದು ನೋಡಿದಾಗ ಈ ಪುಸ್ತಕಗಳು ಇರುವುದು ಗೊತ್ತಾಗಿದೆ. ಪುಸ್ತಕದ ಮೇಲೆ  ಸರ್ವ ಸಂಕಷ್ಟಕ್ಕೆ ಹನುಮಂತನೇ ಪರಿಹಾರವೆಂದು.  ಹನುಮನ ಆಶೀರ್ವಾದ ನಿಮ್ಮ ಮೇಲಿದೆ ಪುಸ್ತಕ ಓದಿರಿ.. ಸಂಕಟ ಬಂದಾಗ ಹನುಮನಾಮ ಸ್ಮರಣೆ ಮಾಡಿ ಒಳ್ಳೆಯದಾಗ್ತದೆ ಎಂದು ಬರೆಯಲಾಗಿದೆಯಂತೆ.
ಜೈಲಿನಲ್ಲಿಯಾದ್ರೂ ಮನ ಪರಿವರ್ತನೆಯಾಗಲಿ ಎಂದು ಇಷ್ಟು ದಿನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಲ್ಲಿ ಇಲ್ಲಿ ದೇವರ ಮೊರೆ ಹೋಗಿ ಕುಂಕುಮ ಪ್ರಸಾದ್ ತಂದು ಕೊಡ್ತಿದ್ರು.
ಈಗ ಅಭಿಮಾನಿ ಪುಸ್ತಕದ ರೂಪದಲ್ಲಿ ದೇವರ ಆಶೀರ್ವಾದ ಕಳಿಸಿದ್ದಾನೆ ಎನ್ನಬಹುದು.