ಸಂಗನಕಲ್ಲು ವೃದ್ಧಾಶ್ರಮದಲ್ಲಿಶಾಸಕ ನಾಗೇಂದ್ರರ ಜನ್ಮದಿನದ ಸಂಭ್ರಮ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.15: ಮಾಜಿ ಸಚಿವರು, ಬಳ್ಳಾರಿ ಗ್ರಾಮಿಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ 53 ನೇ ಜನ್ಮ ದಿನಾಚರಣೆಯನ್ನು ಇಂದು ತಾಲೂಕಿನ ಸಂಗನಕಲ್ಲು ಗ್ರಾಮದ ಆದರ್ಶ ವೃದ್ದಾಶ್ರಮದಲ್ಲಿ ಲಿಡ್ಕರ್ ನ ಅಧ್ಯಕ್ಷ ಮುಂಡ್ರಿಗಿ ನಾಗರಾಜ ನೇತೃತ್ವದಲ್ಲಿ
ನಾಗೇಂದ್ರ ಅವರ ಅಭಿಮಾನಿಗಳು ವೃದ್ಧರಿಗೆ ಬಟ್ಟೆ ನೀಡಿ, ಸಿಹಿ, ಉಪಹಾರ ನೀಡಿ ಆಚರಿಸಲಾಯ್ತು.‌
ಈ ಸಂದರ್ಭದಲ್ಲಿ ಮಾತನಾಡಿದ  ಮುಂಡ್ರಿಗಿ  ನಾಗರಾಜ್ ಅವರು,  ನಾಗೇಂದ್ರ ಅವರು, ತುಂಬಾ ಸರಳ ಜೀವಿ ಬಡವರ ಬಗ್ಗೆ ಅನುಕಂಪ ಇರುವಂತ ನಾಯಕರು. ಅವರು ಯಾವುದೇ ಗಾಡ್ ಫಾದರ್ ಇಲ್ಲದೆ ಬೆಳೆದಿರುವಂತಹ, ಜನಗಳ ಮದ್ಯೆಯೇ ಬೆಳೆದ ಜನನಾಯಕ.  ಈ ಮಧ್ಯೆ ಅವರ ಮೇಲೆ ಬಂದಿರತಕ್ಕಂತ ಆರೋಪ ಸತ್ಯಕ್ಕೆ ದೂರವಾದುದ್ದು. ಅವರು ನ್ಯಾಯಾಂಗದ ಹೋರಾಟದಲ್ಲಿ ಗೆದ್ದುಬರುವುದು ಶತಸಿದ್ಧ. ಬಿಜೆಪಿಯವರು ಯಾವುದೇ ಷಡ್ಯಂತ್ರ ಮಾಡಿದರು ಕೊನೆಗೂ ಗೆಲ್ಲುವುದು ಸತ್ಯ ಮತ್ತು ನಾಗೇಂದ್ರ ಅವರಿಗೆ ಅಂತಿಮ ಜಯ ಸಿಗುವ ವಿಶ್ವಾಸವಿದೆಂದರು.
ಕಾಂಗ್ರೆಸ್ಸಿನ ಜಿಲ್ಲಾ ಉಪಾಧ್ಯಕ್ಷ ಯತಿಂದ್ರ ಗೌಡ ಮಾತನಾಡಿ,  “ನಾಗೇಂದ್ರ ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಿರಿಯರ ಜೊತೆಯಲ್ಲಿ ಆಚರಣೆ ಮಾಡುತ್ತಿರುವುದು  ಸಂತೋಷ,  ನಾಗೇಂದ್ರ ಅವರು ನನಗೆ ಬಾಲ್ಯದ ಸ್ನೇಹಿತ  ಅವರ ಮೇಲೆ ಈಡಿ ಯವರು ಯಾವುದೇ ಆರೋಪ ಪಟ್ಟಿ ಹಾಕಿರಬಹುದು, ಆದರೆ ನ್ಯಾಯಕ್ಕೆ ಬೇಕಿರುವುದು ಸತ್ಯ. ಸತ್ಯ ಎಂಬ ಸತ್ವಪರೀಕ್ಷೆಯಲ್ಲಿ ನಾಗೇಂದ್ರರವರಿಗೆ ಜಯ ಶಾಶ್ವತ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ  ಜಿಲ್ಲಾ ಉಪಾಧ್ಯಕ್ಷರ ಸಂಗನಕಲ್ಕು ವಿಜಯಕುಮಾರ್  ಕಾರ್ಯಕ್ರಮ  ನಿರ್ವಹಿಸಿ.  ನಾಗೇಂದ್ರರವರ  ಮೇಲೆ ಸಲ್ಲಿಸಿರುವಂತಹ ಈ.ಡಿ. ಆರೋಪ ಪಟ್ಟಿ ಅದು ಬಿಜೆಪಿ ಡ್ರಾಫ್ಟ್ ತರ ಇದೆ ಎಂದು ಹೇಳಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕರು ಬ್ಯಾಂಕ್ ಅಧಿಕಾರಿಗಳ ಮೇಲೆಯೂ ಸಿಬಿಐನವರಿಗೆ ನೀಡಿರುವ ದೂರಿನ ಕ್ರಮದ ಮೇರೆಗೆ ಈ.ಡಿ. ತನಿಖೆಯೂ ಕ್ರಮ ಜರುಗಿಸದೆ ಇರುವುದು ಆಶ್ಚರ್ಯಕರವಾಗಿದೆಂದರು.
ನಿವೃತ್ತ ಪ್ರಾಧ್ಯಾಪಕ ಶ್ರೀನಿವಾಸ್ ಮೂರ್ತಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಗೋವರ್ಧನ್, ಜೋಗಿನಾ ವಿಜಯ್ ಕುಮಾರ್ ಗ್ರಾಮ ಪಂಚಾಯತಿ ಸದಸ್ಯರು, ನಾಗರೆಡ್ಡಿ, ದಿವಾಕರ್ ಬಾಬು, ಕಾಂಗ್ರೆಸ್ ಪಕ್ಷದ ಮುಖಂಡರಾದ ವಿ ಪರ್ವತಯ್ಯ, ಕೃಷ್ಣ, ಸಣ್ಣ ಭೀಮಪ್ಪ, ಜೋಗಿನಾ ಚಂದ್ರಪ್ಪ, ಜಡಪ್ಪ, ನಾಗರಾಜ, ಅಂಜಿ, ಶಿವರಾಂ, ಹಾಗೂ ನಾಗೇಂದ್ರ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.