ಇಂದು ಸಂಜೆ ರೇಣುಕಾ ಎಲ್ಲಮ್ಮ  ನಾಟಕ ಪ್ರದರ್ಶನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.15:  ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಇಂದು  ಸಂಜೆ 5.30ಕೆ ವಿಶ್ವರಂಗ ಕಲಾ ಟ್ರಸ್ಟ್ ನಿಂದ  ವೇದಮೂರ್ತಿ ಬಸವಲಿಂಗ ಶಾಸ್ತ್ರಿಗಳ ವಿರಚಿತ ಶ್ರೀ ರೇಣುಕಾ ಎಲ್ಲಮ್ಮ ನಾಟಕ ಪ್ರದರ್ಶನ ನಡೆಯುತ್ತದೆ.
ಮರ್ಚೆಡ್ ಟ್ರಸ್ಟ್ ನ ಅಧ್ಯಕ್ಷ ಎಂ.ಜಿ.ಗೌಡ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ‌ ವಿ ವಿ ಸಂಘದ ಸಹ ಕಾರ್ಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ, ಪಾಲಿಕೆ ಸದಸ್ಯ  ಪಿ ಗಾದೆಪ್ಪ,  ಡಾ. ಬಿ ಗಾದಿಲಿಂಗನಗೌಡ  ಜಿಲ್ಲಾ ಕುರುಬ ಸಂಘದ ಅಧ್ಯಕ್ಷರು, 
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ ನಾಗರಾಜ,  ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಎಂ. ಎಲ್ಲನಗೌಡ ಶಂಕರಬಂಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜಯಶ್ರೀ ಪಾಟೀಲ್  ನಾಟಕ ನಿರ್ದೇಶಿಸಿದ್ದು ಕ್ಯಾಶ್ಯೂದಲ್ಲಿ ಸೂಲದಹಳ್ಳಿ ತಿಪ್ಪೇಸ್ವಾಮಿ ತಬಲಾದಲ್ಲಿ  ಶರಣಪ್ಪ ಬಂಡಿ,  ರಂಗ ಸಂಚಿಕೆಯಲ್ಲಿ ಕುಮಾರ ಗೌಡ ಅಮರಾಪುರ,   ರಮೇಶ್ ಭಾನುವಳ್ಳಿ ಪ್ರಸಾದನ ಮತ್ತು ವಸ್ತ್ರ ಅಲಂಕಾರವನ್ನು ನಿರ್ವಹಿಸಲಿದ್ದಾರೆ.