ಅಪ್ಪನೊಂದಿಗೆ ಅಡುಗೆ ಮಾಡಿ ಸಂಭ್ರಮಿಸಿದ ಜ್ಞಾನಸುಧಾ ಮಕ್ಕಳು
ಬೀದರ್:ಸೆ.15: ನಗರದ ಪ್ರತಿಷ್ಠಿತ ಶಾಲೆಯಾದ ಜ್ಞಾನಸುಧಾ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ ‘ಕುಕ್ ವಿತ್ ಅಪ್ಪ’ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.
ಮಾಮನಕೇರಿಯಲ್ಲಿರುವ ಜ್ಞಾನಸುಧಾ ವಿದ್ಯಾಲಯದ ಜ್ಞಾನರಂಗ ಸಭಾಂಗಣದಲ್ಲಿ ಜರುಗಿದ ಬೆಂಕಿ ರಹಿತ ಅಡುಗೆ ಮಾಡುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು ತಮ್ಮ ತಮ್ಮ ಅಪ್ಪನೊಂದಿಗೆ ಅಡುಗೆ ಮಾಡಿ ಸಂಭ್ರಮಿಸಿದರು.
ಅಪ್ಪನ ಸಹಾಯದೊಂದಿಗೆ ಮಕ್ಕಳು ತಮಗೆ ಇಷ್ಟವಾದ ತಿನಿಸುಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕೆ ಇಟ್ಟು ತಾವು ತಯಾರಿಸಿದ ತಿನಿಸನ್ನು ಮಾಡುವ ವಿಧಾನವನ್ನು ಸವಿಸ್ತಾರವಾಗಿ ವಿವರಿಸಿ ಖುಷಿಪಟ್ಟರು.
ಸ್ಪರ್ಧೆಯಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಅದಿರಾ ಶಿವಕುಮಾರ ಹುಗ್ಗೆ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರೆ, 2ನೇ ತರಗತಿಯ ವಿದ್ಯಾರ್ಥಿನಿ ಶ್ರಾವ್ಯ ಗುರಯ್ಯ ಮಠಪತಿ ದ್ವಿತೀಯ ಬಹುಮಾನ ಹಾಗೂ 2ನೇ ತರಗತಿಯ ವಿದ್ಯಾರ್ಥಿನಿ ಅದ್ವಿಕಾ ಸೋಮನಾಥ ತೃತೀಯಾ ಬಹುಮಾನ ಪಡೆದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಾಮನಕೇರಿ, ಶಿವನಗರ ಶಾಖೆ ಹಾಗೂ ಗುಂಪಾ ಶಾಖೆಯಲ್ಲಿ ವ್ಯಾಸಂಗ ಮಾಡುತ್ತಿರುವ ಯುಕೆಜೆ ಯಿಂದ 2ನೇ ತರಗತಿ ವರೆಗಿನ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಮೊಳಕೆ ಕಾಳುಗಳು, ಮೊಸರು ಅವಲಕ್ಕಿ, ಹುಣಸೆ ಹಣ್ಣು ಮತ್ತು ಖಜೂರಿನಿಂದ ತಯಾರಿಸಿದ ಖಟ್ಟಾ ಮಿಟಾ ಲಾಲಿ ಪಪ್ಪ, ನಿಂಬೆ ಹಣ್ಣಿನ ಪಾನಕ, ರಷೀಯನ್ ಸಲಾಡ್, ವೆಜ್ ಸಲಾಡ್, ಬರ್ಗರ್, ಸ್ಯಾಂ???ವಿಚ್, ಬಿ???ರೂಟ್ ರೈಥಾ, ಕುಕುಂಬರ್ ಬೋಟ್ ಸಲಾಡ್, ಪಾನ್ ಲಡ್ಡು, ಜೀರಾÀ, ಪುದಿನಾ ಪಾನಕ, ಹಣ್ಣಿನ ಸಲಾಡ್, ಪೆÇ್ರೀಟೀನ್ ಲಡ್ಡು, ಬೇಲ್ ಪುರಿ. ಹೀಗೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಿದ ಮಕ್ಕಳು ಎಲ್ಲರ ಮೆಚ್ಚುಗೆಗೆ ಪಾತ್ರರಾರದರು.
ಪ್ರಥಮ ಬಹುಮಾನ ಗೆದ್ದುಕೊಂಡಿದ್ದ ಶಿವಕುಮಾರ ಹುಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡು ಮಾತನಾಡಿ, “ಆಹಾರ ತಯಾರಿಸುವ ಸ್ಪರ್ಧೆ ಆಯೋಜನೆ ಮಾಡುವುದರಿಂದ ಮಕ್ಕಳಿಗೆ ಪೌಷ್ಠಿಕ ಆಹಾರ ಸೇವನೆಯ ಮಹತ್ವ ಗೊತ್ತಾಗುತ್ತದೆ. ಶಾಲೆಯಲ್ಲಿ ಇಂಥ ಒಂದು ಆರೋಗ್ಯಯುತ ಸ್ಪರ್ಧೆ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ’ ಎಂದು ತಿಳಿಸಿದರು.
‘ಇಂದಿನ ಒತ್ತಡದ ಬದುಕಿನಲ್ಲಿ ಬಹುತೇಕ ಅಪ್ಪಂದಿಯರಿಗೆ ತಮ್ಮ ಮಕ್ಕಳಿಗೆ ಸಮಯ ಕೊಡಲು ಆಗುತ್ತಿಲ್ಲ. ಈ ಸ್ಪರ್ಧೆಯಿಂದ ಮಕ್ಕಳೊಂದಿಗೆ ಸಮಯ ಕಳೆಯಲು ಅವಕಾಶ ಸಿಕ್ಕಿದೆ. ಅಷ್ಟೇ ಅಲ್ಲ ಇಂಥ ಸ್ಪರ್ಧೆಗಳಿಂದ ಅಪ್ಪ ಮಕ್ಕಳ ನಡುವೆ ಅನ್ಯೋನ್ಯತೆ ಬೆಳೆದು ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ’ ಎಂದು ಹೇಳಿದರು.
‘ಇತ್ತೀಚಿನ ದಿನಗಳಲ್ಲಿ ಬಹುತೇಕರು ಮನೆಹೊರಗಡೆ ಮಾರುವ ಆಹಾರ ಪದಾರ್ಥಗಳನ್ನೇ ಇಷ್ಟಪಡುತ್ತಿದ್ದಾರೆ. ಅವುಗಳನ್ನು ತಿಂದು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇವುಗಳಿಂದ ದೂರವಿರಬೇಕೆಂದರೆ ಮೊದಲು ಎಲ್ಲರು ತಮ್ಮ ತಮ್ಮ ಮನೆಯಲ್ಲಿಯೇ ವಿವಿಧ ರೀತಿಯ ಪೌಷ್ಠಿಕಾಂಶವುಳ್ಳ ಆಹಾರವನ್ನು ತಯಾರಿಸುವ ವಿಧಾನವನ್ನು ಅರಿತುಕೊಳ್ಳಬೇಕು’ ಎಂದು ತಿಳಿಸಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಪೂರ್ಣಿಮಾ ಜಿ., ನಿರ್ದೇಶಕರಾದ ಡಾ. ಮುನೇಶ್ವರ ಲಾಖಾ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಡಾ. ಪ್ರತೀಕ್ಷಾ ಸ್ವಾಮಿ, ಡಾ. ವನೀತಾ ಸ್ವಾಮಿ, ಚನ್ನವೀರ ಪಾಟೀಲ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸದಸ್ಯರಾದ ರವಿ ಮೂಲಗೆ, ಮಂಜುಳಾ ಮೂಲಗೆ, ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ, ಮೇಲ್ವಿಚಾರಕರಾದ ರಜನಿ ಮತ್ತಿತರರು ಉಪಸ್ಥಿತರಿದ್ದರು.