ವಿಜಯಪುರ ಜಿಲ್ಲೆಗೆ ಕೇಂದ್ರ ಜಲ ಶಕ್ತಿ ತಂಡ ಭೇಟಿ: ವಿವಿಧ ಕಾಮಗಾರಿಗಳ ಪರಿಶೀಲನೆ
ವಿಜಯಪುರ,ಸೆ.15: ವಿಜಯಪುರ ಜಿಲ್ಲೆಗೆ ಕೇಂದ್ರ ಜಲ ಶಕ್ತಿ ತಂಡದ ಬೃಹತ್ ಕೈಗಾರಿಕೆ ಸಚಿವಾಲಯ ನಿರ್ದೇಶಕ ಮತ್ತು ಕೇಂದ್ರ ಜಲ ಶಕ್ತಿ ನೋಡಲ್ ಅಧಿಕಾರಿ ಹಾಗೂ ಅನಾಮಿಕ ಐಚ್ ತಾಂತ್ರಿಕ ಅಧಿಕಾರಿ ವಿಕಾಸ ಡೋಗ್ರಾ ಅವರು ವಿಜಯಪುರ ತಾಲೂಕು ಹಾಗೂ ಇಂಡಿ ತಾಲೂಕುಗಳ ವಿವಿಧ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ವಿಜಯಪುರ ತಾಲೂಕಿನ ಭೂತನಾಳ ಗ್ರಾಮದ ಅರಣ್ಯ ಇಲಾಖೆಯ ನರ್ಸರಿಗೆ ಭೇಟಿ ನೀಡಿ ಸಸಿಗಳ ಪಾಲನೆ ಪೆÇೀಷಣೆಗಳ ಬಗ್ಗೆ ಮಾಹಿತಿ ಪಡೆದ ಅವರು, ಸ್ವತಃ ತಾವೇ ಸಸಿಗಳಿಗೆ ನೀರುಣಿಸಿದರು. ತದನಂತರ ತಿಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನಿರ್ಮಿಸಿರುವ ಪ್ರತಿ ಮನೆಗಳಿಗೆ ನಲ್ಲಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಕುರಿತು ಪರಿಶೀಲನೆ ನಡೆಸಿ, ಸಮರ್ಪಕವಾಗಿ ನೀರು ಪೂರೈಸಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಬಗೆಹರಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡೋಮನಾಳ ಗ್ರಾಮದ ಗುಡ್ಡದ ಅರಣ್ಯ ವಲಯಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ತೋಟಗಾರಿಕೆ ಇಲಾಖೆಯಡಿ ಅನುμÁ್ಠನಗೊಂಡಿರುವ ದ್ರಾಕ್ಷಿ ಬೆಳೆ ವೀಕ್ಷಿಸಿದರು. ನಂತರ ಇಂಡಿ ತಾಲೂಕಿನ ಬಸನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸನಾಳ ಗ್ರಾಮದ ಬೋರ್ವೆಲ್ ರಿಚಾರ್ಜ್ ಪಿಟ್ ಕಾಮಗಾರಿ ವೀಕ್ಷಣೆ ಮಾಡಿ, ರಿಚಾರ್ಜ್ ಫಿಟ್ ಕಾಮಗಾರಿಯ ವಿಸ್ತೀರ್ಣ ಆಯವ್ಯಯ ನಿರ್ವಹಣೆ ಬಗ್ಗೆ ತಾಂತ್ರಿಕ ಸಹಾಯಕರೊಂದಿಗೆ ಚರ್ಚಿಸಿದರು. ಇದೇ ವೇಳೆ ಗ್ರಾಮದ ಕ್ಯಾತನಕೇರಿ ಅಮೃತ ಸರೋವರ ವೀಕ್ಷಣೆ ನಡೆಸಿ, ನೀರಿನ ಸಂಗ್ರಹಣೆ, ಸುತ್ತಳತೆ, ಸರೋವರದಿಂದ ಗ್ರಾಮಸ್ಥರಿಗೆ ದೊರೆಯುವ ಅನುಕೂಲತೆಗಳ ಬಗ್ಗೆ ಪರಿಶೀಲಿಸಿದರು.
ಇಂಡಿ ತಾಲೂಕಿನ ಝಳಕಿ ಗ್ರಾಮ ಪಂಚಾಯಿತಿ ಕಟ್ಟಡ ಆವರಣದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಅನುμÁ್ಠನಗೊಂಡ ಅಬ್ಸರ್ವೇಷನ್ ಬೋರ್ವೆಲ್ ಕಾಮಗಾರಿಯ ನೀರಿನ ಮಟ್ಟ ಹಾಗೂ ಕಾಮಗಾರಿಗೆ ಮೇ ಹಾಗೂ ಜೂನ್ ತಿಂಗಳ ಅಂತರ್ಜಲ ಮಟ್ಟದ ಮಾಹಿತಿ ಪಡೆದುಕೊಂಡರು. ಮಳೆ ನೀರು ಕೊಯ್ಲು ಕಾಮಗಾರಿ ವೀಕ್ಷಿಸಿ ಸಂಗ್ರಹವಾದ ನೀರನ್ನು ಹೂ ಗಿಡಗಳಿಗೆ ಬಳಸುವಂತೆ ತಿಳಿಸಿದರು.
ನಿಂಬಾಳ ಕೆ.ಡಿ ಗ್ರಾಮದ ರಸ್ತೆ ಬದಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಡಿಯಲ್ಲಿ ಅನುμÁ್ಠನಗೊಂಡ ಅಬ್ಸರ್ವೇಷನ್ ವೀಕ್ಷಿಸಿ ನೀರಿನ ಅಂತರಮಟ್ಟ ವೀಕ್ಷಿಸಿದರು, ತದನಂತರ ಸಾವಳಸಂಗ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಅಮೃತ ಸರೋವರ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಡಿ ನಿರ್ಮಿಸಿದ ನೆಡುತೋಪು ಕಾಮಗಾರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಇಂಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಚಡಚಣ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ, ಜಿಲ್ಲಾ ಪಂಚಾಯತಿಯ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಎ.ಡಿ.ಪಿ.ಸಿ ಪೃಥ್ವಿರಾಜ್ ಪಾಟೀಲ, ವಿಜಯಪುರ ತಾಲೂಕಿನ ಸಹಾಯಕ ನಿರ್ದೇಶಕರು (ಗ್ರಾ.ಉ) ಖಾಸಿಮಸಾಬ ಮಸಳಿ, ಚಡಚಣ ತಾಲೂಕಿನ ಸಹಾಯಕ ನಿರ್ದೇಶಕರು (ಗ್ರಾ.ಉ) ಮಹಾಂತೇಶ ಹೊಗೋಡಿ, ತಿಡಗುಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಘಂಟಿ, ರುದ್ರವಾಡಿ, ತಾಂತ್ರಿಕ ಸಂಯೋಜಕರು ಸಾಹಿಲ್ ದನಶೆಟ್ಟಿ, ಪರಶುರಾಮ ಶಹಾಪುರ, ಐಇಸಿ ಸಂಯೋಜಕರಾದ ರಾಘವೇಂದ್ರ ಭಜಂತ್ರಿ, ವಿನೋದ ಸಜ್ಜನ, ರಾಮಗೌಡ ಸರಬಡಗಿ, ಬಸನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಡೊಳ್ಳಿ, ಕೊಳುರಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದು ಲೋಣಿ, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.